ಪೊಲೀಸರ ಹದ್ದಿನ ಕಣ್ಣಿಗೆ ನೆರವಾಗಲಿದೆ ಹೈಫೈ ಸಿ.ಸಿ.ಕ್ಯಾಮರ  ‘ಪ್ರೊಜೆಕ್ಟ್ ಈಗಲ್‌ಸ್ ಐ’ ಗೆ ಪುತ್ತೂರಿನಲ್ಲಿ ಭರದ ಸಿದ್ಧತೆ ಪುತ್ತೂರು ನಗರ ಠಾಣೆಯಿಂದಲೇ ಎಲ್ಲಾ ಸಿ.ಸಿ.ಕ್ಯಾಮರಗಳ ಕಂಟ್ರೋಲ್

Puttur_Advt_NewsUnder_1
Puttur_Advt_NewsUnder_1

control

ಪುತ್ತೂರು: ಅಪರಾಧಕೃತ್ಯಗಳು ನಡೆದಾಗ ತ್ವರಿತಗತಿಯಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು  ಸಹಕಾರಿಯಾಗುವ ಸಿ.ಸಿ ಕ್ಯಾಮರ ಅಳವಡಿಸುವ ಕುರಿತು ಪೊಲೀಸರು ಕಳೆದ ಒಂದು ವರ್ಷದಿಂದ ಜಾಗೃತಿ ಮೂಡಿಸುತ್ತಿದ್ದು, ಇದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಹೈಫೈ ಸಿ.ಸಿ.ಕ್ಯಾಮಾರ ಅಳವಡಿಸುವ ನಿಟ್ಟಿನಲ್ಲಿ ಪುತ್ತೂರು ಪೊಲೀಸರ ಯೋಚನೆಗೆ ತಕ್ಕಂತೆ ಕೆಲವೊಂದು ಸಂಸ್ಥೆಗಳು ಉದ್ಯಮಿಗಳು ಹಾಗೂ ವ್ಯಾಪಾರಿಗಳು ಸ್ಪಂಧನೆ ನೀಡಲು ಮುಂದೆ ಬಂದಿರುವುದು ಪುತ್ತೂರು ಪೊಲೀಸರ ‘ಪ್ರೋಜೆಕ್ಟ್ ಈಗಲ್‌ಸ್ ಐ’ ಗೆ ಪ್ರಾಯೋಗಿಕ ಚಾಲನೆ ದೊರೆತಂತಾಗಿದೆ.

ಇಲ್ಲಿನ ಶೇಟ್ ಇಲೆಕ್ಟ್ರಾನಿಕ್ಸ್‌ನ ರೂಪೇಶ್ ಶೇಟ್‌ರವರಲ್ಲಿ ಮೂಡಿ ಬಂದ ಕಲ್ಪನೆಗೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರವರ ಪ್ರೋತ್ಸಾಹದ ಮೂಲಕ ಪುತ್ತೂರು ನಗರ ಠಾಣಾ ವ್ಯಾಪ್ತಿಯೊಳಗೆ ಅಲ್ಲಲ್ಲಿ ಸಿ.ಸಿ.ಕ್ಯಾಮಾರ ಅಳವಡಿಸುವ ಯೋಜನೆಗೆ ಕೈ ಹಾಕಲಾಗಿದೆ. ಪುತ್ತೂರು ಕ್ಲಬ್, ಡಾ. ದೀಪಕ್ ರೈ, ದರ್ಬೆಯ ದೀಪಕ್.ಕೆ ಮತ್ತು ಪುತ್ತೂರು ಕೇಬಲ್ ಟಿ.ವಿ ಹಾಗೂ ವಿಶ್ವಾಸ್ ಕೇಬಲ್ ಟಿ.ವಿಯ ನಿರ್ದೇಶಕರು ಪೂರ್ಣ ಸಹಕಾರ ನೀಡಿದ್ದಾರೆ. ಜ.೩೧ರಂದು ಸಂಚಾರಿ ಠಾಣೆಯಲ್ಲಿ ಕಂಟ್ರೋಲ್ ಕೊಠಡಿಯನ್ನು ತೆರೆಸಿ, ಸಿ.ಸಿ.ಕ್ಯಾಮರಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಶೇಟ್ ಇಲೆಕ್ಟ್ರೋನಿಕ್ಸ್‌ನ ರೂಪೇಶ್ ಶೇಟ್, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್.ಐ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಎಸಗುತ್ತಿರುವ ಅಪರಾಧಿಗಳನ್ನು ಮಟ್ಟಹಾಕಲು ನಾವು ತಂತ್ರಜ್ಞಾನವನ್ನು ಬಳಸಿಕೊಂಡು ಮುಂದೆ ಹೋಗಬೇಕಾಗಿದೆ. ಪೊಲೀಸರು ಅಪರಾಧ ತಡೆಯಬಹುದಾದರೂ ನಮ್ಮ ಸಂಖ್ಯಾ ಬಲ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ವೇಗ ಕಾಲಘಟ್ಟಕ್ಕೆ ಸರಿಯಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಅಲ್ಲಲ್ಲಿ ಸಿ.ಸಿ.ಕ್ಯಾಮರ ಅಳವಡಿಸುವ ಪ್ರಕ್ರಿಯೆ ಹಿಂದಿನಿಂದಲೇ ಇತ್ತು. ಹೆಚ್ಚಿನ ಉದ್ಯಮ ಸಂಸ್ಥೆಗಳು ಅವರ ಅಂಗಡಿಯ ಕಾಲ ಬುಡಕ್ಕೆ ಮಾತ್ರ ಸಿ.ಸಿ. ಕ್ಯಾಮರ ಅಳವಡಿಸಿದ್ದಾರೆ ಹೊರತು ಸಾರ್ವಜನಿಕ ಸ್ಥಳಗಳಲ್ಲಿ ಅದು ಪರಿಣಾಮ ಬೀರಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಟವರ್ ಹಾಕಿ ಅದಕ್ಕೆ ಸಿ.ಸಿ.ಕ್ಯಾಮರ ಅಳವಡಿಸಬೇಕು. ಟವರ್‌ನಲ್ಲಿರುವ ಸಿ.ಸಿ.ಕ್ಯಾಮರದ ನೇರ ಕಂಟ್ರೋಲ್ ಪೊಲೀಸ್ ಠಾಣೆಯಲ್ಲಿರುವುದರಿಂದ ಅಪರಾಧ ಕೃತ್ಯಗಳ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಬಹುದು. ಮುಖ್ಯವಾಗಿ ಜನರಲ್ಲೂ ಜಾಗೃತಿ ಮೂಡಿ ಗಲಾಟೆಯಂತಹ ಘಟನೆಗಳು ಕಡಿಮೆಯಾಗುತ್ತದೆ. ಇಂತಹ ಯೋಚನೆಗೆ ತಕ್ಕಂತೆ ಯೋಜನೆ ರೂಪಿತವಾಗುತ್ತಿದೆ. ಪ್ರಾಯೋಗಿಕ ನೆಲೆಯಲ್ಲಿ ಮಾರ್ಕೆಟ್ ರಸ್ತೆಯಲ್ಲಿ ಈಗಾಗಲೇ ಶೇಟ್ ಇಲೆಕ್ಟ್ರಾನಿಕ್ಸ್‌ನವರು ಸಿ.ಸಿ.ಕ್ಯಾಮರ ಅಳವಡಿಸಿದ್ದಾರೆ. ಮುಂದೆ ಸಂಘ ಸಂಸ್ಥೆಗಳು, ಉದ್ಯಮಿಗಳು ಇಂತಹ ಸಿ.ಸಿ.ಕ್ಯಾಮರ ಅಳವಡಿಸಲು ಮುಂದೆ ಬಂದರೆ ಅಪರಾಧಾ ತಡೆಯುವಲ್ಲಿ ಸಹಕಾರಿಯಾಗಲಿದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

ಪ್ರಸ್ತುತ ಮಾರ್ಕೆಟ್ ರಸ್ತೆಯಲ್ಲಿ ಅಳವಡಿಕೆ:

ಸಿ.ಸಿ.ಕ್ಯಾಮರ ಟವರ್‌ನ್ನು ಪ್ರಸ್ತುತವಾಗಿ ಮಾರ್ಕೆಟ್ ರಸ್ತೆ ಪುತ್ತೂರು ಸೆಂಟರ್‌ನಲ್ಲಿ ಅಳವಡಿಸಲಾಗಿದೆ. ಇದರ ಕಂಟ್ರೋಲರ್‌ನ್ನು ಪುತ್ತೂರು ಕ್ಲಬ್ ವತಿಯಿಂದ ನೀಡಲಾಗಿದೆ. ಮುಂದೆ ಕೋರ್ಟು ರಸ್ತೆಯಲ್ಲಿ ಅಳವಡಿಸಲು ಉದ್ದೇಶವಿದ್ದು ಅಲ್ಲಿನ ಸ್ಥಳೀಯರು ಮತ್ತು ರಾಧಾಸ್ ಡ್ರೆಸ್ ಸೆಂಟರ್ ಹಾಗೂ ನೆಲ್ಲಿಕಟ್ಟೆಯಲ್ಲಿ ಜಗ್ನೀಶ್ ಸಾಜೌನಿ ಶೇಟ್‌ರವರು ಟವರ್ ಅಳವಡಿಸಲು ಮುಂದೆ ಬಂದಿದ್ದಾರೆ. ಇದೇ ರೀತಿ ಎಲ್ಲಾ ಜಂಕ್ಷನ್ ಸ್ಥಳಗಳಲ್ಲಿ ಟವರ್ ಅಳವಡಿಸಲು ದಾನಿಗಳು ಮುಂದೆ ಬರಬೇಕಾಗಿದೆ. ಒಟ್ಟು ಸಿ.ಸಿ.ಕ್ಯಾಮರ ಅಳವಡಿಸಿದ ಬಳಿಕ ಅದರ ಮೈಂಟೆನೆನ್ಸ್‌ನ್ನು ನಾನು ಉಚಿತವಾಗಿ ಮಾಡಿಕೊಡುತ್ತೇನೆ ಎಂದು ರೂಪೇಶ್ ಶೇಟ್ ತಿಳಿಸಿದ್ದಾರೆ.

ಏನಿದು ಈಗಲ್‌ಸ್ ಐ

ನಗರದ ವಿವಿದೆಡೆ ಅಳವಡಿಸಿದ ಸಿ.ಸಿ.ಕ್ಯಾಮರದಿಂದ ಸುತ್ತಮುತ್ತಲಿನ ಪರಿಸರ ವೀಕ್ಷಣೆಯನ್ನು ಪೊಲೀಸ್ ಠಾಣೆಯಲ್ಲೇ ಕುಂತಲ್ಲೇ ನೋಡುವ ಸಾಮರ್ಥ್ಯ. ಠಾಣೆಯಿಂದಲೇ ಎಲ್ಲಾ ಸಿ.ಸಿ.ಕ್ಯಾಮರಗಳ ಕಂಟ್ರೋಲ್, ಒಂದೇ ಮೋನಿಟರ್‌ನಲ್ಲಿ ೧೪ ಸ್ಥಳಗಳ ವೀಕ್ಷಣೆ, ಸಿ.ಸಿ.ಕ್ಯಾಮರ ಟವರ್‌ನಿಂದ ಸುತ್ತಮುತ್ತಲ ಚಲನವಲನ ಗಮನಿಸುವಿಕೆ. ಇನ್ಮುಂದೆ ಪೊಲೀಸರು ಇವೆಲ್ಲವನ್ನು ಪೊಲೀಸ್ ಠಾಣೆಯಿಂದಲೇ ವೀಕ್ಷಿಸಿ ಘಟನೆಯ ಸತ್ಯಾಸತ್ಯತೆಯನ್ನು ಅರಿಯಲು ಸುಲಭ ಮಾರ್ಗವಾಗಿದೆ. ಇದೇ ‘ಪ್ರೊಜೆಕ್ಟ್ ಈಗಲ್‌ಸ್ ಐ’.

 360 ಡಿಗ್ರಿ ಸುತ್ತುವ ಸಿ.ಸಿ.ಕ್ಯಾi

ಪಿಟಿಜಡ್, ಐಪಿ. ಕ್ವಾಲಿಟಿಯ ೩೬೦ ಡಿಗ್ರಿ ಸುತ್ತುವ ಮತ್ತು ೧೫೦ ಮೀಟರ್‌ನಿಂದ ೨೫೦ ಮೀಟರ್ ದೂರದ ವಸ್ತುವನ್ನು ಹತ್ತಿರದಲ್ಲಿ ನೋಡುವ ಸಾಮಾರ್ಥ್ಯವುಳ್ಳ ಸ್ಪಷ್ಟ ಚಿತ್ರಣ ನೀಡುವ ಸಿ.ಸಿ.ಕ್ಯಾಮರ ಒಂದು ಟವರ್‌ನಲ್ಲಿ ಅಳವಡಿಸಲಾಗುತ್ತದೆ. ಇದರ ನಾಲ್ಕು ಸುತ್ತಲೂ ಸ್ತಬ್ದ ಚಿತ್ರಣ ನೀಡುವ ಕ್ಯಾಮರ ಅಳವಡಿಸಲಾಗುತ್ತದೆ. ರಾತ್ರಿ ಹೊತ್ತಲ್ಲೂ ಸ್ಪಷ್ಟ ಚಿತ್ರಣ ನೀಡುವ ಈ ಕ್ಯಾಮರಗಳ ಎಲ್ಲಾ ಕಂಟ್ರೋಲ್ ಅಂತರ್‌ಜಾಲದ ಮೂಲಕ ಪೊಲೀಸ್ ಸ್ಟೇಷನ್‌ನಲ್ಲಿನ ಕಂಟ್ರೋಲರ್ ಸೆಂಟರ್‌ನಲ್ಲಿ ಇರುತ್ತದೆ. ಈ ಒಂದು ಕ್ಯಾಮರ ಸಹಿತ ಟವರ್ ಅಳವಡಿಸಲು ರೂ.೧ಲಕ್ಷ ವೆಚ್ಚ ತಗಲುತ್ತದೆ.

             ರೂಪೇಶ್ ಶೇಟ್, ಶೇಟ್ ಇಲೆಕ್ಟ್ರೋನಿಕ್ಸ್ ಪುತ್ತೂರು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.