ಲಕ್ಷ್ಮೀಪ್ರಸಾದ್ ಕೆ. ಆಚಾರ್‌ರಿಗೆ ರಾಷ್ಟ್ರಪತಿ ಪುರಸ್ಕಾರ

lakshmi

ಪುತ್ತೂರು: ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನ್ಯಾಷನಲ್ ಬಾಲ ಭವನ ಸೊಸೈಟಿ ನವದೆಹಲಿ ಜಂಟಿ ಯಾಗಿ ನಡೆಸಿದ ರಾಜ್ಯ, ಅಂತರರಾಜ್ಯ ಹಾಗೂ ರಾಷ್ಟ್ರಮಟ್ಟದ ಚಿತ್ರಕಲೆ ಸ್ಪರ್ಧೆ ಯಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಲಕ್ಷ್ಮೀಪ್ರಸಾದ್ ಕೆ. ಆಚಾರ್ ಕೇಂದ್ರ ಸರಕಾರದ ‘ಬಾಲಶ್ರೀ’ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ. ಫೆ.3ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರು ಪ್ರಶಸ್ತಿ ಯನ್ನು ನೀಡಲಿದ್ದಾರೆ. ಸುದಾನ ವಸತಿಯುತ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ವಿವೇಕಾನಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ. ಇವರು ಛಾಯಾಗ್ರಾಹಕ ಶಕ್ತಿ ಪುತ್ತೂರು ಮತ್ತು ಶಿಕ್ಷಕಿ ನಿರ್ಮಲರವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.