ಕುಶಾಲನಗರದಲ್ಲಿ ವಂಚನೆ ಪ್ರಕರಣ – ಸಿಕ್ಕಿಬಿದ್ದ ಆರೋಪಿ ಮಂಗಳೂರು ನಿವಾಸಿ ಸುಧೀರ್ ಬಂಗೇರ ಕುಶಾಲನಗರ ಪೊಲೀಸರ ಕೈಯಿಂದ ಪುತ್ತೂರಿನಲ್ಲಿ ಪರಾರಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಶಾಲನಗರದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕುಶಾಲನಗರ ಪೊಲೀಸರು ಮಂಗಳೂರಿನಿಂದ ಆರೋಪಿಯೋರ್ವನನ್ನು ಕುಶಾಲನಗರಕ್ಕೆ ಕರೆದೊಯ್ಯುತ್ತಿದ್ದ ವೇಳೆ ದರ್ಬೆ ಸಮೀಪ ಆತ ಕುಶಾಲನಗರ ಪೊಲೀಸರ ಕೈಯಿಂದ ಪರಾರಿಯಾಗಿರುವ ಘಟನೆ ಜ.31ರಂದು ಸಂಜೆ ನಡೆದಿದೆ.

ಕುಶಾಲನಗರದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಆರೋಪಿಯೋರ್ವನ ಗುರುತು ಪಡೆಯಲು ಮಂಗಳೂರಿನ ಕುಡ್ಪಲ್ತಡ್ಕ ನಿವಾಸಿ ಸುಧೀರ್ ಬಂಗೇರರವರನ್ನು ವಿಚಾರಿಸಿದ ವೇಳೆ ತನಿಖೆಗೆ ಸರಿಯಾಗಿ ಸಹಕರಿಸಿದ ಆತನನ್ನು ಪೊಲೀಸರು ಮಡಿಕೇರಿ ಠಾಣೆಗೆ ಕರೆದೊಯ್ಯುತ್ತಿದ್ದ ವೇಳೆ ಪುತ್ತೂರು ದರ್ಬೆಯಲ್ಲಿ ಶಿವಪ್ರಸಾದ್ ಹೊಟೇಲ್ ಬಳಿ ಸುಧೀರ್ ಬಂಗೇರರವರು ಮೂತ್ರ ವಿಸರ್ಜನೆಗೆಂದು ಹೋದವರು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕುಶಾಲನಗರ ಪೊಲೀಸ್ ಠಾಣೆಯ ಎಸ್.ಐ ಅನೂಫ್‌ಮಾದಪ್ಪ ಮತ್ತು ನಾಲ್ವರು ಸಿಬಂದಿಗಳು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.