ನೆಲ್ಯಾಡಿ ನಿವಾಸಿ ಚಂದ್ರಶೇಖರ್ ನೆಕ್ಕಿಲಾಡಿ ನದಿ ನೀರಿನಲ್ಲಿ ಮುಳುಗಿ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: 34-ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ನೆಲ್ಯಾಡಿ ಆರ್ಲ ನಿವಾಸಿ ಯುವಕನೋರ್ವ ಜ. 31ರಂದು ಬೆಳಿಗ್ಗೆ ನೇತ್ರಾವತಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

 ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ವ್ಯಕ್ತಿ ನೆಲ್ಯಾಡಿ ಗ್ರಾಮದ ಆರ್ಲನಿವಾಸಿ ಹರಿಯಪ್ಪ ನಾಯ್ಕ್ ಎಂಬವರ ಪುತ್ರ ಚಂದ್ರಶೇಖರ್ (22 ವ.) ಎಂಬವರಾಗಿರುತ್ತಾರೆ. ಚಂದ್ರಶೇಖರ್ ಜ. 30ರಂದು ರಾತ್ರಿ 34-ನೆಕ್ಕಿಲಾಡಿ ಬೊಳ್ಳಾರು ನಿವಾಸಿ ತನ್ನ ಸಂಬಂಧಿ ಬಾಲಪ್ಪ ಎಂಬವರ ಮನೆಗೆ ಬಂದಿದ್ದು, ಬೆಳಿಗ್ಗೆ ಮನೆ ಎದುರುಗಡೆ ಇರುವ ನದಿಗೆ ಸ್ನಾನಕ್ಕೆ ಹೋಗಿ ಸ್ನಾನ ಮಾಡುತ್ತಿದ್ದಂತೆ ನೀರಿನಲ್ಲಿ ಆಳಕ್ಕೆ ಬಿದ್ದು ಮೃತಪಟ್ಟರೆನ್ನಲಾಗಿದೆ.

 ಚಾಲಕ, ಏಕೈಕ ಪುತ್ರ: ವೃತ್ತಿಯಲ್ಲಿ ಚಾಲಕರಾಗಿರುವ ಚಂದ್ರಶೇಖರ್ ಮಂಗಳೂರುನಲ್ಲಿ ಸಂಸ್ಥೆಯೊಂದರ ಲಾರಿಯಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದರೆನ್ನಲಾಗಿದೆ. ಚಂದ್ರಶೇಖರ್ ಆರ‍್ಲ ನಿವಾಸಿ ಹರಿಯಪ್ಪ ನಾಯ್ಕ್‌ರವರ ಏಕೈಕ ಪುತ್ರರಾಗಿದ್ದು, ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.