ಮೀಟರ್ ಬಡ್ಡಿ ವ್ಯವಹಾರ-ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಮತ್ತು ಬೆಳ್ಳಾರೆಯ ವಿಠಲ ಶೆಟ್ಟಿ ವಿರುದ್ಧ ಪ್ರಕರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಮೀಟರ್ ಬಡ್ಡಿ ವ್ಯವಹಾರ ನಡೆಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸರು ಕಲ್ಲಾರೆಯಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿರುವ ನರಿಮೊಗರು ಗ್ರಾ.ಪಂ. ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಮತ್ತು ಬೆಳ್ಳಾರೆಯ ವಿಠಲ ಶೆಟ್ಟಿ ವಿರುದ್ಧ ನಿಯಮಬಾಹಿರ ಹಣಕಾಸು ವ್ಯವಹಾರ ನಡೆಸಿದ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ಸಾರಾಂಶ: ಕಾಣಿಯೂರು ನಿವಾಸಿ ಹರೀಶ್‌ರವರು ಕೈಸಾಲವಾಗಿ ರೂ. 50 ಸಾವಿರ ರೂ.ಗಳನ್ನು ತನ್ನ ಮ್ಯಾಕ್ಸಿಕ್ಯಾಬ್ ವಾಹನ(ಕೆ.ಎ.18 3617)ರ ದಾಖಲೆ ಪತ್ರ ಇಟ್ಟು ಹಣ ಪಡೆದುಕೊಂಡಿದ್ದರು. ಈ ಮೊತ್ತಕ್ಕೆ ಹರೀಶ್ 1.40 ಲಕ್ಷ ರೂ. ಅಸಲು ಮತ್ತು ಬಡ್ಡಿ ಪಾವತಿಸಿದ್ದರು. ಆದರೆ ರವೀಂದ್ರ ರೈ ನೆಕ್ಕಿಲುರವರು  ರೂ. 50ಸಾವಿರ ಅಸಲು ಮತ್ತು ರೂ.20ಸಾವಿರ ಬಡ್ಡಿ ಕಟ್ಟುವಂತೆ ಒತ್ತಾಯಿಸಿದ್ದಲ್ಲದೆ ಮ್ಯಾಕ್ಸಿಕ್ಯಾಬ್ ವಾಹನವನ್ನು ವಶಕ್ಕೆ ತೆಗೆದು ಕೊಂಡಿದ್ದರು. ಈ ಕುರಿತು ಹರೀಶ್‌ರವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಸಿಬಂದಿಗಳು ರವೀಂದ್ರ ಶೆಟ್ಟಿಯವರ ಮನೆಗೆ ತೆರಳಿ ಅವರ ವಶದಲ್ಲಿದ್ದ ವಾಹನ ಮತ್ತು ರವೀಂದ್ರ ರೈ ಯವರನ್ನು ತಮ್ಮ ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸಿ ರವೀಂದ್ರ ರೈ ಮತ್ತು ವಾಹನ ಕೊಂಡೊಯ್ಯಲು ಸಹಕರಿಸಿದ ವಿಠಲ ಶೆಟ್ಟಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾರ್ಕ್ ಮಾಡಿದ್ದಲ್ಲಿಂದ ವಾಹನ ಕೊಂಡೊಯ್ದರು:

ನಾನು ರೂ.೫೦ಸಾವಿರ ಮಾತ್ರ ಪಡೆದಿದ್ದು, ಅದರ ಅಸಲು ಬಡ್ಡಿಯನ್ನು ಪಾವತಿಸಿದ್ದೇನೆ. ಆದರೆ ಜ.26ರಂದು ಬಲಾತ್ಕಾರವಾಗಿ ಪುತ್ತೂರಿನಲ್ಲಿ  ಪಾರ್ಕಿಂಗ್ ಮಾಡಲಾಗಿದ್ದ ತನ್ನ ಮ್ಯಾಕ್ಸಿಕ್ಯಾಬ್ ವಾಹನವನ್ನು ರವೀಂದ್ರ ಶೆಟ್ಟಿ ಮತ್ತು ವಿಠಲ ಶೆಟ್ಟಿಯವರು ಕೊಂಡೊಯ್ದಿದ್ದಾರೆ ಎಂದು ಮ್ಯಾಕ್ಸಿಕ್ಯಾಬ್‌ನ ಚಾಲಕ ಕಾಣಿಯೂರು ನಿವಾಸಿ ಹರೀಶ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.