ಪಾಂಬಾರು: ಮನೆಗೆ ಬೆಂಕಿ-ನಷ್ಟ

Puttur_Advt_NewsUnder_1
Puttur_Advt_NewsUnder_1

pambaru

ಪುತ್ತೂರು: ಕೊಳ್ತಿಗೆ ಗ್ರಾಮದ ಪಾರ್ಚೋಡು ಎಂಬಲ್ಲಿ ಬಾಲಕೃಷ್ಣ ಗೌಡ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ  ಸಂಪೂರ್ಣ ಸುಟ್ಟು ಹೋಗಿ ನಷ್ಟ ಉಂಟಾದ ಘಟನೆ ಜ.30ರಂದು ನಡೆದಿದೆ. ಬಾಲಕೃಷ್ಣ ಗೌಡ ಮತ್ತು ಅವರ ಪತ್ನಿ ವಾರಿಜಾರವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಘಟನೆಯಿಂದ ಮನೆಯೊಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿದೆ. ಘಟನೆ ಬಗ್ಗೆ ವಾರಿಜಾರವರು ಈಶ್ವರಮಂಗಲ ಹೊರ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಕೊಳ್ತಿಗೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ಧನಂಜಯ, ಸದಸ್ಯ ತೀರ್ಥಾನಂದ ದುಗ್ಗಳ ಅವರು ಬೇಟಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.