ನೆಕ್ಕರೆ ಮಸೀದಿಯಲ್ಲಿ ಪ್ರಾರ್ಥನಾ ದಿನ

Puttur_Advt_NewsUnder_1
Puttur_Advt_NewsUnder_1

nekkare

ಪುತ್ತೂರು: ಆಲಂಕಾರು ನೆಕ್ಕರೆ ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ಶೈಖುನಾ ಶಂಸುಲ್ ಉಲಮಾ(ಖಸಿ)ರವರ ನಿರ್ದೇಶನದಂತೆ ’ಸಮಸ್ತ’ತೀರ್ಮಾನಿಸಿದ ಪ್ರಕಾರ ಕತ್ಮುಲ್ ಖುರ್ ಆನ್ ಹದಿಯ ಮಾಡುವುದರೊಂದಿಗೆ ಪ್ರಾರ್ಥನಾ ದಿನವನ್ನು ಸ್ಥಳೀಯ ಖತೀಬರಾದ ಪಿ.ಎ.ಅಬ್ದುಲ್ ರಶೀದ್ ಯಮಾನಿಯವರ ದುಆ ಹಾಗೂ ಉದ್ಘಾಟನೆಯೊಂದಿಗೆ ಆಚರಿಸಲಾಯಿತು.

ಮಸ್ಜಿದುಲ್ ಬಾರಿ ಅಧ್ಯಕ್ಷ ಎಮ್.ಎ.ಅಬ್ದುಲ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಸದರ್ ಎಪಿಎ ಆತೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಸೀದಿ ಅಧ್ಯಕ್ಷ ಚೆರಿಯ ಮೋನು ಯಾನೆ ಮಹಮ್ಮದ್, ಮಹಮ್ಮದ್ ತಾಜ್,ಇರ್ಶಾದ್, ಫೌಸಿಲ್, ಫಾರಿಶ್, ಜುನೈದ್, ಎಸ್ಕೆಎಸ್ವಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಕಾರ್ಯದರ್ಶಿ ಶಾಹಿಲ್ ತಾಜ್ ಹಾಗೂ ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ‍್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.