HomePage_Banner
HomePage_Banner

ಒಕ್ಕಲಿಗ ಗೌಡ ಸೇವಾ ಸಂಘ ನೆಲ್ಯಾಡಿ ವಲಯ ಮಟ್ಟದ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1

okkaliga

ಸಂಘದ ವತಿಯಿಂದ ಸಾಮೂಹಿಕ ವಿವಾಹ, ಬಡ ವಿದ್ಯಾರ್ಥಿಗಳಿಗೆ ನೆರವು: ಪುರುಷೋತ್ತಮ ಮುಂಗ್ಲಿಮನೆ

ಪುತ್ತೂರು: ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ನೆಲ್ಯಾಡಿ ವಲಯ ಮಟ್ಟದ ಕ್ರೀಡಾಕೂಟ-2016 ಫೆ.7ರಂದು ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೈದಾನದಲ್ಲಿ ನಡೆಯಿತು.

ಕೊಣಾಲು ಊರ ಗೌಡರಾದ ಮೇದಪ್ಪ ಗೌಡ ಸಂಕೇಶರವರು ಧ್ವಜಾರೋಹಣ ನೆರವೇರಿಸಿದರು. ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಸರಳಾಯ ತೆಂಗಿನ ಒಡೆಯುವ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿದರು. ಬಳಿಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ನಡೆದ ಸಭಾ ಕಾರ‍್ಯಕ್ರಮವನ್ನು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಸಾಮೂಹಿಕ ವಿವಾಹ ಹಾಗೂ ಬಡ ಸ್ವಜಾತಿ ಬಾಂಧವರ ಶಿಕ್ಷಣಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಕಾರ‍್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು. ನೆಲ್ಯಾಡಿ ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಕುದ್ಕೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಒಕ್ಕಲಿಗ ಗೌಡ ಸಂಘ ಪುತ್ತೂರು ಇದರ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ್, ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ನಾಗೇಶ್ ಗೌಡ ನಳಿಯಾರು, ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಗೌಡ ನಂದಿಲ ಶುಭಹಾರೈಸಿದರು. ನೆಲ್ಯಾಡಿ ವಲಯ ಉಸ್ತುವಾರಿ ಪ್ರವೀಣ್ ಕುಮಾರ್ ದೋಂತಿಲ, ಕ್ರೀಡಾ ಕಾರ್ಯದರ್ಶಿ ತೀರ್ಥೇಶ್ವರ ಯು., ಕಾರ್ಯದರ್ಶಿ ಮಹೇಶ್ ಡೆಬ್ಬೇಲಿ, ಹಿರಿಯ ಉದ್ಯಮಿ ಕುಶಾಲಪ್ಪ ಗೌಡ ಪೂವಾಜೆ, ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಸರಳಾಯ, ಊರ ಗೌಡರಾದ ಮೇದಪ್ಪ ಗೌಡ ಸಂಕೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುರೇಶ್ ತಿರ್ಲೆ ಸ್ವಾಗತಿಸಿದರು. ಭಾಗೀರಥಿ ವಂದಿಸಿದರು. ಪುರಂದರ ಗೌಡ ಡೆಂಜ ಕಾರ‍್ಯಕ್ರಮ ನಿರೂಪಿಸಿದರು. ಪುರುಷರಿಗೆ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್, ಶಟಲ್ ರಿಲೆ, ಹಗ್ಗಜಗ್ಗಾಟ, ಕಬಡ್ಡಿ, ಪ್ರೌಢಶಾಲಾ ವಿಭಾಗದ ಹುಡುಗರಿಗೆ ಕಬಡ್ಡಿ, 100 ಮೀ.ಓಡ, ಹುಡುಗಿಯರಿಗೆ ಲಗೋರಿ, 100 ಮೀ.ಓಟ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಿಕ್ಸೆಡ್ ರಿಲೆ, ವಿವಿಧ ಮನೋರಂಜನ ಸ್ಪರ್ಧೆಗಳು ನಡೆಯಿತು. 50 ವರ್ಷ ಮೇಲ್ಪಟ್ಟವರಿಗೆ 100 ಮೀ.ನಡಿಗೆ, ಗುಂಡು ಎಸೆತ ಸ್ಪರ್ಧೆ ನಡೆಯಿತು.

ಸಮಾರೋಪ: ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ಆಯ್ಕೆ ಪಟ್ಟಿ ಪ್ರಕಟಣೆ ನಡೆಯಿತು. ನೆಲ್ಯಾಡಿ ವಲಯ ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ ಬಿ.ಎಂ.ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಸ್ವಸಹಾಯ ಸಂಘ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ, ನೆಲ್ಯಾಡಿ ವಲಯ ಒಕ್ಕಲಿಗರ ಸಂಘದ ಉಸ್ತುವಾರಿ ರಾಧಾಕೃಷ್ಣ ಕೆರ್ನಡ್ಕ, ಯುವ ಒಕ್ಕಲಿಗ ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ವಲಯ ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಕುದ್ಕೋಳಿ, ಗೋಳಿತ್ತೊಟ್ಟು ಅಂಚೆ ಪಾಲಕರಾದ ರೇವತಿ ಸುಂದರ, ವಿಶ್ವನಾಥ ಗೌಡ ಪೆರಣಗುತ್ತು ಗೋಳಿತ್ತೊಟ್ಟು, ವೆಂಕಪ್ಪ ಗೌಡ ಡೆಬ್ಬೇಲಿ, ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಜಯಂತ ಹೆಚ್., ಸಂದೇಶ್ ಎಡ್ಮೆ ಉಪಸ್ಥಿತರಿದ್ದರು. ಕು.ರಶ್ಮಿ ಹೊಸಮನೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶೇಖರ ಅನಿಲ್‌ಬಾಗ್ ಸ್ವಾಗತಿಸಿ ಶ್ವೇತಾ ವಂದಿಸಿದರು. ಸುರೇಶ್ ಪಡಿಪಂಡ ಕಾರ‍್ಯಕ್ರಮ ನಿರೂಪಿಸಿದರು.

.

 

 

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.