ಅಂತರ್ ಕಾಲೇಜು ಮಟ್ಟದ ಭಾಷಣ ಸ್ಫರ್ಧೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಜ.14ರಂದು ಪದವಿಪೂರ್ವ ಹಾಗೂ ಪದವಿ ವಿಭಾಗದ ಅಂತರ್ ಕಾಲೇಜು ಮಟ್ಟದ ಭಾಷಣ ಕಾರ್ಯಕ್ರಮ ವು ವಿವೇಕಾನಂದ ಕಾನೂನು ಕಾಲೇಜು ಹಾಗೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಜರುಗಿತು.ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹಾಗೂ ಸ್ಫರ್ಧೆಯ ನಿರ್ಣಾಯಕರಾಗಿ ಆಗಮಿಸಿದ ಕೃಷ್ಣವೇಣಿ ಮಾತನಾಡಿ ಭಾಷಣ ಎನ್ನುವುದು ಒಂದು ಕಲೆ ,ಅದು ಎಲ್ಲರಿಗೂ ಬರುವಂಥದ್ದಲ್ಲ, ಒಬ್ಬ ಪ್ರಸಿದ್ಧ ವಾಗ್ಮಿಯಾಗಬೇಕಿದ್ದರೆ ಹಿರಿಯ ನಾಯಕರ ಭಾಷಣದ ಸಾಲನ್ನು ಆಲಿಸಿದರೆ ತನ್ನಲ್ಲಿ ಆ ಶಕ್ತಿ ಹಾಗೂ ನವ ವಿಚಾರಗಳು ಮೂಡಲು ಸಾಧ್ಯ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜು ಪ್ರಾಚಾರ್ಯ ಕೆ.ಜಿ.ಕೃಷ್ಣಮೂರ್ತಿ ಸ್ಫರ್ಧಾರ್ಥಿಗಳಿಗೆ ಶುಭ ಹಾರೈಸಿದರು.ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ  ಹರೀಶ್ ರಾವ್ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ವಿವೇಕಾನಂದ ಡಿ.ಎಡ್ ಕಾಲೇಜಿನ ಉಪನ್ಯಾಸಕಿ  ಕೃಷ್ಣವೇಣಿ ಹಾಗೂ ಉಪನ್ಯಾಸಕಿ ಹಾಗೂ ಲೇಖಕಿ  ಗೀತಾ ಗೌರಿ ನಿರ್ಣಾಯಕರಾಗಿ ಆಗಮಿಸಿದ್ದರು.ನಂತರ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪದವಿ ಪೂರ್ವ ವಿಭಾಗದಲ್ಲಿ ಎಸ್.ಡಿ.ಎಮ್ ಕಾಲೇಜು , ವಿವೇಕಾನಂದ ಪದವಿ ಪೂರ್ವ ಕಾಲೇಜು ,ಹಾಗೂ ಪದವಿ ವಿಭಾಗದಲ್ಲಿ ವಿವೇಕಾನಂದ ಪದವಿ ಕಾಲೇಜು ,ಸರಕಾರಿ ಕಾಲೇಜು ಬೆಳ್ತಂಗಡಿ ಪ್ರಶಸ್ತಿ ಗಳಿಸಿತು. ಕಾರ್ಯಕ್ರಮವನ್ನು ಸಹನಾ ಪಿ.ಎಸ್. ಹಾಗೂ  ವೈಭವಿ ಕಾರ್ಯಕ್ರಮವನ್ನು ನಿರೂಪಿಸಿದರು.

Jpeg

IMG_20160114_102346

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.