Home_Page_Advt
Home_Page_Advt
Home_Page_Advt

ಹೆರಿಗೆ ಬಳಿಕ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ- ಆಕ್ರೋಶಿತರಿಂದ ಪುತ್ತೂರು ಸಿಟಿ ಆಸ್ಪತ್ರೆಗೆ ಮುತ್ತಿಗೆ- ವೈದ್ಯರೊಂದಿಗೆ ತರಾಟೆ

Puttur_Advt_NewsUnder_1
Puttur_Advt_NewsUnder_1

IMG_20160223_165311

ವೈದ್ಯರಾಗಲೀ, ಸಿಬಂದಿಗಳಾಗಲೀ ನಿರ್ಲಕ್ಷ್ಯ ವಹಿಸಿಲ್ಲ;ವೈದ್ಯರ ಸ್ಪಷ್ಟನೆ

ಪುತ್ತೂರು: ಹೆರಿಗೆಯ ಸಂದರ್ಭದಲ್ಲಿ ವೈದ್ಯರು ನಿರ್ಲಕ್ಷ್ಯವಹಿಸಿರುವುದರಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯಲ್ಲಿ ಜಮಾಯಿಸಿ, ವೈದ್ಯರನ್ನು ತರಾಟೆಗೆತ್ತಿಕೊಂಡ ಘಟನೆ ಫೆ.23ರಂದು ಇಲ್ಲಿನ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಬೆಟ್ಟಂಪಾಡಿ ನಿವಾಸಿ ಸಂಕಪ್ಪ ಪೂಜಾರಿಯವರ ಪುತ್ರಿ ಉಷಾರವರನ್ನು ಹೆರಿಗೆಗಾಗಿ ಫೆ.21ರಂದು ರಾತ್ರಿ ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದರು.ಫೆ.22ರಂದು ಅವರಿಗೆ ಹೆಣ್ಣು ಮಗುವಿನ ಹೆರಿಗೆಯಾಗಿದೆ. ಹೆರಿಗೆಯಾದ ಬಳಿಕ ಮಗುವಿನ ಆರೋಗ್ಯ ಸರಿಯಿಲ್ಲ ಎಂದು ಹೇಳಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. ಹೆರಿಗೆಯ ವೇಳೆ ಪುತ್ತೂರು ಆಸ್ಪತ್ರೆಯ ವೈದ್ಯರು ನಿರ್ಲಕ್ಷ ವಹಿಸಿದ್ದಾರೆ. ಇದರಿಂದಾಗಿ ಮಗು ತಾಯಿಯ ಹೊಟ್ಟೆಯೊಳಗೆ ಮಲ ನುಂಗಿದ್ದರಿಂದಾಗಿ ಮಗು ಸಾವನ್ನಪ್ಪಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದರೆನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಆಗಮಿಸಿ ಮುತ್ತಿಗೆ ಹಾಕಿ ವೈದ್ಯರನ್ನು ತರಾಟೆಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಉಷಾರವರನ್ನು ಹೆರಿಗೆಗಾಗಿ ಫೆ.21ರಂದು ರಾತ್ರಿ 7 ಗಂಟೆಯ ವೇಳೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಬಳಿಕ ಆಸ್ಪತ್ರೆಯಲ್ಲಿ ಉಷಾರವರು ಹೆರಿಗೆ ನೋವಿನಿಂದ ಹೊರಳಾಡುತ್ತಿದ್ದರೂ ವೈದ್ಯರು ಆಸ್ಪತ್ರೆಗೆ ಬರಲಿಲ್ಲ. ಫೆ.22ರಂದು ರಾತ್ರಿ 9 ಗಂಟೆಗೆ ಬಂದು ಸಹಜ ಹೆರಿಗೆ ನಡೆಸಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದರೂ ಶಸ್ತ್ರ ಚಿಕಿತ್ಸೆ ನಡೆಸದೆ ಬೇಜವಾಬ್ದಾರಿ ವಹಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರೆ ಮಗು ಬದುಕುಳಿಯುತ್ತಿತ್ತು. ಹೆರಿಗೆಯಾದ ಬಳಿಕ ವೈದ್ಯರು ಮಗುವಿಗೆ ಪಿಟ್ಸ್ ರೋಗ ಇದೆ ಎಂದು ಹೇಳಿ ಮಂಗಳೂರು ಆಸ್ಪತ್ರೆ ಕಳುಹಿಸಿದ್ದಾರೆ. ಅಲ್ಲದೆ ಆಗತಾನೆ ಹುಟ್ಟಿದ ಮಗುವಿಗೆ ನಾಲ್ಕು ಬಾಟಲ್ ರಕ್ತ ನೀಡುವಂತೆಯೂ ವೈದ್ಯರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಮಗೆ ಇಷ್ಟ ಬಂದ ಆಸ್ಪತ್ರೆಗೆ ಹೋಗಿಲ್ಲ. ನಾವು ಇಲ್ಲಿನ ಆಸ್ಪತ್ರೆಯ ವೈದ್ಯರು ಕಳುಹಿಸಿಕೊಟ್ಟ ಆಸ್ಪತ್ರೆಗೇ ಹೋಗಿದ್ದೇವೆ. ಅಲ್ಲಿನ ವೈದ್ಯರು ಪರೀಕ್ಷಿಸಿ ಪುತ್ತೂರು ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಮಗು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ನೂರಾರು ಮಂದಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದು ವೈದ್ಯರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಡಾ.ಅನಿಲ್ ಸಮಜಾಯಿಷಿಕೆ ನೀಡಲು ಪ್ರಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಷಗೊಂಡ ಪೋಷಕರು  ನೀವು ನಿಮ್ಮ ವೃತ್ತಿ ಧರ್ಮ ಪಾಲಿಸುತ್ತಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ.ನಿಮ್ಮಿಂದ ಸಾಧ್ಯವಾಗುತ್ತಿಲ್ಲವಾದರೆ ಮೊದಲೇ ನಮಗೆ ತಿಳಿಸಬೇಕಿತ್ತು ನಾವು ಬೇರೆ ಆಸ್ಪತ್ರೆಗೆ ಹೋಗುತ್ತಿದ್ದೆವು. ಈಗ ಹೋದ ಜೀವ ವಾಪಸ್ಸು ಬರುತ್ತದೆಯೇ ಎಂದು ವೈದ್ಯರಲ್ಲಿ ಪ್ರಶ್ನಿಸಿದ್ದಾರೆ.

ದೂರು ನೀಡಿದರೆ ಜೀವ ಬರುತ್ತದೆಯೇ?

ಘಟನೆಯ ಕುರಿತು ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ಆಗಮಿಸಿ ನೀವು ಇಲ್ಲಿ ಸೇರಿ ಗಲಾಟೆ ನಡೆಸುವುದರಿಂದ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ. ಘಟನೆಯ ಬಗ್ಗೆ ದೂರು ನೀಡಿ. ನಾವು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪೋಷಕರಲ್ಲಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೋಷಕರು ನಿಮಗೆ ದೂರು ನೀಡಿ ಏನು ಪ್ರಯೋನವಿದೆ? ದೂರು ನೀಡಿದ ಮಾತ್ರಕ್ಕೆ ಮಗುವಿಗೆ ಜೀವ ಬರುತ್ತದೆಯೇ ಎಂದು ಪೊಲೀಸರಲ್ಲಿ ಪ್ರಶ್ನಿಸಿದ್ದಾರೆ. ನಿಮ್ಮ ದೂರಿನ ಆಧಾರದಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಇಲಾಖೆಗೆ ಪತ್ರ ಬರೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊನೆಗೂ ಪೋಷಕರು ಪೊಲೀಸರಿಗೆ ದೂರು ನೀಡದೆ ತೆರಳಿರುವುದಾಗಿ ತಿಳಿದುಬಂದಿದೆ.

ನಾವು ನಿರ್ಲಕ್ಷ್ಯ ಮಾಡಿಲ್ಲಕೇರ್ ತೆಗೆದುಕೊಂಡಿದ್ದೇವೆ: ಡಾ.ಅನಿಲ್ ಸ್ಪಷ್ಟನೆ

ನಾನು ತಿಂಗಳಿಗೆ ನೂರಾರು ಹೆರಿಗೆ ಮಾಡಿಸುತ್ತೇನೆ. ಹೆರಿಗೆ ವೇಳೆ ಇಂತಹ ಘಟನೆಗಳು ಅಪರೂಕ್ಕೊಂದು ನಡೆಯುತ್ತದೆ. ಹೆರಿಗೆಗೆ ಮೊದಲು ಗರ್ಭದಲ್ಲಿರುವಾಗಲೇ ಮಗುವಿಗೆ ಮಲ ಸೇವನೆಯಾಗಿರುವುದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ. ಹೆರಿಗೆ ನೋವು ಪ್ರಾರಂಭವಾಗಿ ಹೆರಿಗೆ ಸಮಯಕ್ಕೆ ಅರ್ಧ ತಾಸು ಮೊದಲು ಶಸ್ತ್ರ ಚಿಕಿತ್ಸೆ ನಡೆಸುವುದು ಕಷ್ಟ. ಈ  ನಿಟ್ಟಿನಲ್ಲಿ ನಾವು ಸಹಜ ಹೆರಿಗೆ ನಡೆಸಿದ್ದೇವೆ. ಇದರಲ್ಲಿ ವೈದ್ಯರಾಗಲೀ, ಸಿಬಂದಿಗಳಾಗಲೀ ಯಾವುದೇ ನಿರ್ಲಕ್ಷ ಮಾಡಿಲ್ಲ. ಹೆರಿಗೆಯಾದ ಬಳಿಕ ಮಗುವಿನ ಚಿಕಿತ್ಸೆಯು ನನ್ನ ವಿಭಾಗಕ್ಕೆ ಬರುವುದಿಲ್ಲ.ಮಕ್ಕಳ ತಜ್ಷರು ಪರೀಕ್ಷಿಸಿ, ಮಗುವನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಮಂಗಳೂರು ಆಸ್ಪತ್ರೆ ಕಳುಹಿಸಿಕೊಟ್ಟಿದ್ದಾರೆ ಎಂದು ಡಾ. ಅನಿಲ್ ಎಸ್ ಬೈಪಾಡಿತ್ತಾಯ ಸ್ಪಷ್ಟನೆ ನೀಡಿದ್ದಾರೆ.

IMG_20160223_173734 IMG_20160223_173745 IMG_20160223_173853

About The Author

Related posts

1 Comment

  1. ashwini

    Dr. Anil obba famous doctor adhere iga busy docter…nanu Anil na patient nanna magu kuda garbadalli mala sevisi adhara sthithi gambiravagithu. Nau bellige admit agidhavarannu rathriya thanaka ommeyu gamanisalilla city hospitgal na nursegala bejavadharithanau howdhu 1 thingalu nanna magu kmc atthavar NICU allithu.. Ondhu dhinau nanna maguvina bagge vicharisalilla yappa… As dhinagalali nanu manna kutumba anubavisidha nodu nanna shathrvigu barabaradhedhu anukondidhe..adhare puna adhe gatane marukalisidhe..Anil nimage innobara jivadhalli ata noduva hakkilla I hate Anil baipadithaya

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.