ಕೃಷಿ-ಋಷಿ ಮರೆತವರಿಂದ ದೇಶಕ್ಕೆ ಅಪಾಯ ನಿಶ್ಚಿತ-ಒಡಿಯೂರುಶ್ರೀ : ಬನಾರಿಯಲ್ಲಿ ಕೆಸರು ಗದ್ದೆ ಆಟೋಟ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೃಷಿ ಪರಂಪರೆಯಿಂದ ದೇಶದ ಅಭಿವೃದ್ಧಿ ಸಾಧ್ಯವಿದ್ದು, ಕೃಷಿ ಹಾಗೂ ಋಷಿ ಮರೆತವರಿಂದ ದೇಶಕ್ಕೆ ಅಪಾಯ ನಿಶ್ಚಿತ. ಮಣ್ಣನ್ನು ಮುಟ್ಟಿದಾಗ ಮಾತ್ರ ಅದರ ಪರಿಮಳ ಆಸ್ವಾದಿಸಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಜು.10ರಂದು ಬನಾರಿಯ ಶ್ರೀ ಸಂಸ್ಥಾನದ ಕೃಷಿಭೂಮಿಯಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ (ಗ್ರಾಮೋತ್ಸವ)ದ ಅಂಗವಾಗಿ ನಡೆದ ಕೆಸರುಗದ್ದೆಯಲ್ಲಿ ಆಟೋಟಗಳು ತುಳುನಾಡಿನ ವಿವಿಧ ವಿಶಿಷ್ಟ ಸ್ಪರ್ಧೆಗಳ ಉದ್ಘಾಟನೆ ನಡೆಸಿ ಆಶೀರ್ವಚನ ನೀಡಿದರು.

ಬದಲಾವಣೆಗೆ ಮಾರು ಹೋಗಿ ಮಕ್ಕಳು ಅನ್ನವನ್ನು ಮರೆತು ಬಿಟ್ಟರೂ ಅಚ್ಚರಿ ಇಲ್ಲ. ದೇಶವೆಂಬ ಮರದ ತಾಯಿ ಬೇರು ಗ್ರಾಮಗಳಲ್ಲಿ ಹರಡಿದ್ದು, ಗ್ರಾಮಗಳಲ್ಲಿನ ಬೇರಿಗೆ ಬಲ ತುಂಬಿದಾಗ ಮಾತ್ರ ರಾಷ್ಟ್ರ ಬಲಿಷ್ಟವಾಗಿ ಬೆಳೆಯಬಹುದು ಎಂದು ಶ್ರೀಗಳು ಹೇಳಿದರು.

400ಕ್ಕೂ ಅಧಿಕ ಮಂದಿ ವಿವಿಧ ಆಟೋಟಗಳಲ್ಲಿ ಭಾಗವಹಿಸಿದ್ದರು.

ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಶ್ರೀಗಳ ಮಾತೃಶ್ರೀ ಅಂತಕ್ಕೆ, ಗ್ರಾಮೋತ್ಸವ ಸಮಿತಿ ಸಂಚಾಲಕ ಎ ಅಶೋಕ್ ಕುಮಾರ್ ಬಿಜೈ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುತ್ತೂರು, ಕೋಶಾಧಿಕಾರಿ ಜಯಂತ್ ಜೆ ಕೋಟ್ಯಾನ್, ಉಪಾಧ್ಯಕ್ಷ ಎ ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ರಘುನಾಥ ರೈ ಅರ್ಪಿಣಿಗುತ್ತು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ, ಮೇಲ್ವಿಚಾರಕ ಸದಾಶಿವ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಎಚ್ ಕೆ ಪುರುಷೋತ್ತಮ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು. ಪ್ರಶಸ್ತಿ ವಿಜೇತ ಶಿಕ್ಷಕ, ತುಳು ವಿದ್ವಾಂಸ ಕೆ. ಕೆ. ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.