ಸರ್ವೆ: ಕಲ್ಲಮದಲ್ಲಿ ’ಗ್ರಾಮ ವಿಕಾಸ ಯೋಜನೆ’ ಕಾಮಗಾರಿಗೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ: ಶಕುಂತಳಾ ಶೆಟ್ಟಿ

*ಅನುದಾನ ಸದ್ಬಳಕೆಯಾಗಲಿ: ಮೀನಾಕ್ಷಿ ಶಾಂತಿಗೋಡು

*ಅನುದಾನ ಅಭಿವೃದ್ದಿಗೆ ಸಹಕಾರಿ: ಎಸ್.ಡಿ ವಸಂತ

*ಅಭಿವೃದ್ದಿಗೆ ಇನ್ನಷ್ಟು ಸಹಕಾರ ಕೊಡಿ: ಶಿವರಂಜನ್

*ಸರ್ವೆಗೆ ಹೆಚ್ಚು ಅನುದಾನ ಶಾಸಕರು ಕೊಟ್ಟಿದ್ದಾರೆ: ಶಿವನಾಥ ರೈ

ಪುತ್ತೂರು: ಸರ್ವೆ ಗ್ರಾಮಕ್ಕೆ ’ಗ್ರಾಮ ವಿಕಾಸ ಯೋಜನೆ’ಯಡಿಯಲ್ಲಿ ೭೫ ಲಕ್ಷ ರೂ. ಅನುದಾನವನ್ನು ಶಾಸಕಿ ಶಕುಂತಳಾ ಶೆಟ್ಟಿ ಮಂಜೂರುಗೊಳಿಸಿದ್ದು ಅದರ ಕಾಮಗಾರಿಗೆ ಶಿಲಾನ್ಯಾಸ ಸಮಾರಂಭವು ಅ.5ರಂದು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ಬಳಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸಂಸದೀಯ ಕಾರ್ಯದರ್ಶಿ ಆಗಿರುವ ಶಕುಂತಳಾ ಶೆಟ್ಟಿಯವರು ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ, ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಅನುದಾನಗಳನ್ನು ಎಲ್ಲ ಕಡೆಗಳಿಗೂ ಸಮಾನ ಹಂಚಿಕೆ ಮಾಡಿದ್ದೇನೆ ಎಂದು ಹೇಳಿದರು. ಗ್ರಾಮ ವಿಕಾಸ ಯೋಜನೆಯಲ್ಲಿ ಒಟ್ಟು 5 ಗ್ರಾಮಗಳಿಗೆ 75 ಲಕ್ಷ ಅನುದಾನ ಒದಗಿಸಿದ್ದು ಕಾಂಗ್ರೆಸ್ ಬೆಂಬಲಿತ ಆಡಳಿತವಿರುವ ಪಂಚಾಯತ್‌ನ 3 ಗ್ರಾಮಕ್ಕೆ ಹಾಗೂ ಬಿಜೆಪಿ ಬೆಂಬಲಿತ ಆಡಳಿತವಿರುವ ಪಂಚಾಯತ್‌ನ 2 ಗ್ರಾಮಕ್ಕೆ ಹಂಚಿ ಕೊಟ್ಟಿದ್ದೇನೆ. ಭಕ್ತಕೋಡಿ, ರೆಂಜಲಾಡಿ ರಸ್ತೆಯ ಸಹಿತ ಒಟ್ಟು 12 ರಸ್ತೆಯನ್ನು ಒನ್‌ಟೈಮ್ ಯೋಜನೆಯಲ್ಲಿ ಅನುದಾನಕ್ಕೆ ಬರೆಯಲಾಗಿದ್ದು ಅದು ಮುಂದಕ್ಕೆ ಮಂಜೂರಾಗುವ ನಿರೀಕ್ಷೆಯಿದೆ ಎಂದರು. ಈ ಭಾಗಕ್ಕೆ ಬೇಡಿಕೆಯಿರುವ ಬಸ್ ಸೌಲಭ್ಯ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಲಿ: ಮೀನಾಕ್ಷಿ ಶಾಂತಿಗೋಡು-

ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಸರಕಾರದ ಅನುದಾನಗಳು ಜನರಿಗೆ ಸಮರ್ಪಕವಾಗಿ ಲಭಿಸುವ ಮೂಲಕ ಸದ್ಬಳಕೆಯಾಗಬೇಕು ಎಂದು ಹೇಳಿದರು. ಸರಕಾರದ ಯಾವುದೇ ಅನುದಾನಗಳು ಜನರಿಗೆ ಒಳ್ಳೆಯ ರೀತಿಯಲ್ಲಿ ತಲುಪಬೇಕು ಇದಕ್ಕೆ ಜನರೂ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಅಭಿವೃದ್ದಿಗೆ ಸಹಕಾರಿ: ಎಸ್.ಡಿ ವಸಂತ-

ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಸರ್ವೆ ಗ್ರಾಮಕ್ಕೆ ಗ್ರಾಮ ವಿಕಾಸ ಯೋಜನೆಯಲ್ಲಿ ಶಾಸಕರು 75 ಲಕ್ಷ ಅನುದಾನ ಕೊಟ್ಟಿರುವುದರಿಂದ ಪಂಚಾಯತ್ ವ್ಯಾಪ್ತಿಯ ಅಭಿವೃದ್ದಿಗೆ ಸಹಕಾರಿಯಾಗಿದ್ದು ಗ್ರಾಮದ ಸರ್ವತೋಮುಖ ಅಭಿವೃದ್ದಿ ಇದರಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು. ಉತ್ತಮ ಕೆಲಸ ಮಾಡುತ್ತಿರುವ ಶಾಸಕರು ಅಭಿವೃದ್ದಿ ಕಾಣದ ಓಲೆಮುಂಡೋವು ರಸ್ತೆಯನ್ನು ಕೂಡಾ ಅಭಿವೃದ್ದಿ ಪಡಿಸಿದ್ದಾರೆ ಎಂದು ಎಸ್.ಡಿ ವಸಂತ ಶ್ಲಾಘಿಸಿದರು.

ಇನ್ನಷ್ಟು ಅನುದಾನ ಕೊಡಿ: ಶಿವರಂಜನ್-

ತಾ.ಪಂ ಸದಸ್ಯ ಶಿವರಂಜನ್ ಮಾತನಾಡಿ ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತವಾದಾಗ ಮಾತ್ರ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು. ಶಾಸಕರು ಈಗಾಗಲೇ 75 ಲಕ್ಷ ರೂ. ಅನುದಾನ ಸರ್ವೆ ಗ್ರಾಮಕ್ಕೆ ಒದಗಿಸಿದ್ದು ಇನ್ನಷ್ಟು ಅಭಿವೃದ್ದಿ ಕೆಲಸಗಳಿಗೆ ಅನುದಾನವನ್ನು ಈ ಭಾಗಕ್ಕೆ ಕೊಡಬೇಕು ಎಂದು ಅವರು ಮನವಿ ಮಾಡಿದರು.

ಹೆಚ್ಚಿನ ಅನುದಾನ ಶಾಸಕರು ಕೊಟ್ಟಿದ್ದಾರೆ: ಶಿವನಾಥ ರೈ-

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಡೂರು ಗ್ರಾ.ಪಂ ಸದಸ್ಯ ಶಿವನಾಥ ರೈ ಮೇಗಿನಗುತ್ತು ಅವರು ಸರ್ವೆ ಗ್ರಾಮದ ಇತಿಹಾಸದಲ್ಲಿ ಈ ಹಿಂದೆ ಯಾರೂ ಮಾಡದ ಅಭಿವೃದ್ದಿ ಕೆಲಸವನ್ನು ಶಾಸಕಿ ಶಕುಂತಳಾ ಶೆಟ್ಟಿ ಮಾಡಿದ್ದಾರೆ ಎಂದು ಹೇಳಿದರು. ಕಳೆದ 20 ವರ್ಷಗಳ ಬಳಿಕ ಗ್ರಾಮಕ್ಕೆ ಹೆಚ್ಚಿನ ಅನುದಾನ ಶಾಸಕರಿಂದ ಮಂಜೂರುಗೊಂಡಿದ್ದು ಸರ್ವೆ ಗ್ರಾಮಕ್ಕೆ ಸುಮಾರು ೭ ಕೋಟಿಯಷ್ಟು ಅನುದಾನವನ್ನು ಈಗಾಗಲೇ ಶಾಸಕರು ನೀಡಿದ್ದಾರೆ ಎಂದು ಅವರು ಹೇಳಿದರು. ರಸ್ತೆಯ ವಿಚಾರದಲ್ಲಿ ರಾಜಕೀಯ ಪ್ರೇರಿತ ಪ್ರತಿಭಟನೆ ಸರಿಯಲ್ಲ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಮುಂಡೂರು ಗ್ರಾ.ಪಂ ಉಪಾಧ್ಯಕ್ಷೆ ಸೌಮ್ಯಾ ಆರ್ ಕಂಬಳಿ, ಸದಸ್ಯರಾದ ಯೋಗಿನಿ ರೈ ಮೇಗಿನಗುತ್ತು, ಉದಯ, ಹಂಝ ಎಲಿಯ, ರಾಮಚಂದ್ರ ಸೊರಕೆ, ಸೀತಾ ಸರ್ವೆ, ಬಾಲಕೃಷ್ಣ ಪೂಜಾರಿ, ಕುಸುಮಾವತಿ ಪರಂಟೋಲು, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಪ್ರೇಮಾವತಿ, ಪಿಡಿಒ ಸುಜಾತ, ಶ್ರೀ ಗುರು ರಾಘವೇಂದ್ರ ಮಠದ ಮೊಕ್ತೇಸರರಾದ ಅನುರಾಧಾ ಭಟ್ ಕಲ್ಲಮ ಉಪಸ್ಥಿತರಿದ್ದರು.

ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲಲ್ ರಹೀಂ, ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿಕ್ರಂ ರೈ ಸಾಂತ್ಯ, ಎಪಿಎಂಸಿ ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ, ಯುವ ಕಾಂಗ್ರೆಸ್ ಮುಖಂಡ ರೋಶನ್ ರೈ ಬನ್ನೂರು, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ನಿರ್ದೇಶಕ ಸುಧೀರ್ ಪಡ್ಡಿಲ್ಲಾಯ, ರೆಂಜಲಾಡಿ ಮಸೀದಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಬೊಟ್ಯಾಡಿ, ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್, ಮಾಜಿ ಸದಸ್ಯ ಯತೀಶ್ ರೈ ಮೇಗಿನಗುತ್ತು, ನಿವೃತ್ತ ಶಿಕ್ಷಕ ಗುರುರಾಜ ಭಟ್, ಕಲ್ಪಣೆ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಶಿಕ್ಷಕ ಚಂದ್ರಶೇಖರ್, ಸರ್ವೆ ಪ್ರೌಢಶಾಲಾ ಮುಖ್ಯಗುರು ಜಯರಾಮ ಶೆಟ್ಟಿ, ರೆಂಜಲಾಡಿ ಆದರ್ಶ ಸೇವಾ ಸಂಘದ ಅಧ್ಯಕ್ಷ ರಫೀಕ್ ರೆಂಜಲಾಡಿ, ಹಿರಣ್ಯ ಗಣಪತಿ ಭಟ್ ಹಾಗೂ ಹಲವಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಲಾನ್ಯಾಸ: ಸಭೆಯ ಬಳಿಕ ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ರಸ್ತೆಯಲ್ಲಿ ಶಿಲಾನ್ಯಾಸ ಕಾರ್ಯ ನೆರವೇರಿಸಲಾಯಿತು. ಎಸ್.ಡಿ ವಸಂತ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ನನ್ನನ್ನು ಹೊಗಳಿದರೆ ನಾನು ಹಿಗ್ಗುವುದಿಲ್ಲ ಅದೇ ರೀತಿ ತೆಗಳಿದರೆ ಕುಗ್ಗುವುದೂ ಇಲ್ಲ, ನಾನು ಹುಟ್ಟಿನಿಂದ ಸಾಯುವವರೆಗೆ ಜಾತ್ಯಾತೀತ ತತ್ವವನ್ನೇ ಹೊಂದಿರುತ್ತೇನೆ.  ಕ್ಷೇತ್ರದ ಜನರ ಋಣ ತೀರಿಸುವುದೇ ನನ್ನ ಪ್ರಮುಖ ಆಕಾಂಕ್ಷೆಯಾಗಿದೆ

ಶಕುಂತಳಾ ಶೆಟ್ಟಿ, ಶಾಸಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.