ಮುಖ್ಯ ಶಿಕ್ಷಕರ ನೇಮಕಾತಿ, ಶಿಕ್ಷಕ ನವೀನ್‌ರವರ ನಿಯೋಜನೆ ರದ್ಧತಿಗೆ ಆಗ್ರಹಿಸಿ ಹಳೆನೇರಂಕಿ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಹಿರಿಂಜ ರಾಜೀನಾಮೆ

Puttur_Advt_NewsUnder_1
Puttur_Advt_NewsUnder_1

1

ಪುತ್ತೂರು: ಮುಖ್ಯಶಿಕ್ಷಕರ ನೇಮಕಾತಿಗೆ ಹಾಗೂ ನಿಯೋಜನೆಯಲ್ಲಿ ತೆರಳಿರುವ ಶಿಕ್ಷಕರೊಬ್ಬರ ಮರು ನೇಮಕಕ್ಕೆ ಒತ್ತಾಯಿಸಿ ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಗಣೇಶ್ ಹಿರಿಂಜ ತಿಳಿಸಿದ್ದಾರೆ. ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಸುಗಂಧಿಯವರು ಕಳೆದ ಮೇ ತಿಂಗಳಿನಲ್ಲಿ ನಿವೃತ್ತಿಯಾಗಿದ್ದು ಇಲ್ಲಿಗೆ ಮುಖ್ಯ ಶಿಕ್ಷಕರ ನೇಮಕ ಮಾಡುವಂತೆ ಇಲಾಖೆಗೆ ಕೇಳಿಕೊಳ್ಳಲಾಗಿದೆ. ಅಲ್ಲದೇ ಇಲ್ಲಿನ ಶಿಕ್ಷಕ ನವೀನ್‌ರವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ಹಳೆನೇರೆಂಕಿ ಸರಕಾರಿ ಶಾಲೆಯಾಗಿದ್ದರೂ ಇಲ್ಲಿನ ಪೋಷಕರ ಸಹಕಾರದಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಾದರಿಯಲ್ಲಿ ಅಭಿವೃದ್ಧಿ ಹೊಂದಿದೆ. ಮುಖ್ಯಶಿಕ್ಷಕರ ಜವಾಬ್ದಾರಿ ಇತರೇ ಶಿಕ್ಷಕರು ನಿಭಾಯಿಸುತ್ತಿರುವುದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಅಲ್ಲದೇ ಶಿಕ್ಷಕ ನವೀನ್‌ರವರನ್ನು ಬೇರೆ ಶಾಲೆಗೆ ನಿಯೋಜಿಸಿರುವುದರಿಂದ ಶಿಕ್ಷಕರ ಕೊರತೆಯಾಗಿದೆ. ಈ ಬಗ್ಗೆ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಮಕುಂಜ ಗ್ರಾಮ ಪಂಚಾಯತ್, ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಾಜಿನಾಮೆ ಪತ್ರ ಸಲ್ಲಿಸಿರುವುದಾಗಿ ಗಣೇಶ್ ತಿಳಿಸಿದ್ದಾರೆ.

ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಸಮಿತಿಯ ಪಕ್ಷದ ಜವಾಬ್ದಾರಿಗೂ ರಾಜೀನಾಮೆ ನೀಡಿರುವುದಾಗಿ ಗಣೇಶ್ ಹಿರಿಂಜ ತಿಳಿಸಿದ್ದಾರೆ. ಕೃಷಿಯೇ ನನ್ನ ಮೂಲ ಕಸುಬಾಗಿರುವುದರಿಂದ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲು ಅನಾನುಕೂಲವಾಗಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುತ್ತೇನೆ. ಇದೀಗ ತನ್ನ ವೈಯಕ್ತಿಕ ಉದ್ದೇಶದಿಂದ ನಾನು ರಾಜೀನಾಮೆ ನೀಡಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಸೇವೆ ಮಾಡುವುದಿಲ್ಲ.  ಎಲ್ಲಾ ರಾಜಕೀಯ ವ್ಯವಹಾರಗಳನ್ನು ಬಿಟ್ಟು ಮುಂದಿನ ದಿನಗಳಲ್ಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತೇನೆ ಎಂದು ಗಣೇಶ್ ಹಿರಿಂಜ ಹೇಳಿದ್ದಾರೆ.

ರಾಜೀನಾಮೆ ಅಂಗೀಕರಿಸಿಲ್ಲ: ಪ್ರಶಾಂತ್- ಹಳೆನೇರಂಕಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರ ಹಾಗೂ ಕೆಲ ಸದಸ್ಯರ ರಾಜಿನಾಮೆ ಪತ್ರ ಮಂಗಳವಾರ ಪಂಚಾಯತ್‌ಗೆ ಬಂದಿರುತ್ತದೆ. ಆದರೆ ಮಂಗಳವಾರ ಸಂಜೆ ಸಮಿತಿಯ ಸದಸ್ಯರೆಲ್ಲರೂ ರಾಜಿನಾಮೆ ಪತ್ರವನ್ನು ಹಿಂಪಡೆದು ಸಮಿತಿಯಲ್ಲಿ ಮುಂದುವರಿಯವುದಾಗಿ ಘೋಷಿಸಿದ್ದಾರೆ.  ಆದರೆ ಅಧ್ಯಕ್ಷರ ರಾಜೀನಾಮೆಯನ್ನು ಪಂಚಾಯತ್ ಅಂಗೀಕಾರ ಮಾಡಿಲ್ಲ.  ಈ ವಿಚಾರವಾಗಿ ವಾರ್ಡಿನ ಸದಸ್ಯರ ತುರ್ತು ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರ  ಸಮಸ್ಯೆಯನ್ನು ಖುದ್ದಾಗಿ ತಿಳಿದುಕೊಂಡು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಲಾಗುವುದು ಎಂದು ರಾಮಕುಂಜ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್.ಆರ್.ಕೆ ತಿಳಿಸಿದ್ದಾರೆ.

ನಿಯಮದಂತೆ ಕ್ರಮ: ಶಶಿಧರ್- ಹಳೆನೇರಂಕಿ ಶಾಲೆಯ ಸಮಸ್ಯೆಯನ್ನು ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಆನ್‌ಲೈನ್‌ನಲ್ಲಿ ಮುಖ್ಯೋಪಾಧ್ಯಾಯರ ಸೀಟನ್ನು ತೆರವುಗೊಳಿಸಿರುವುದು ಸರಕಾರಕ್ಕೆ ಬಿಟ್ಟ ವಿಚಾರ, ಈ ಬಗ್ಗೆ ನಾನೇನು ಹೇಳಲಾರೆ. ಇದು ಸರಕಾರದ ನಿಯಮ. ಸರಕಾರದ ನಿಯಮವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್.ಜಿ.ಎಸ್ ಪ್ರತಿಕ್ರಿಯಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.