ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಕಳ್ಳತನ-ರೂ.22 ಸಾವಿರ ಮೌಲ್ಯದ ಸೊತ್ತು ಕಳವು

Puttur_Advt_NewsUnder_1
Puttur_Advt_NewsUnder_1

3-13-33-43-2

ಸಿ.ಸಿ ಕ್ಯಾಮರಾ ಇದ್ದರೂ ಪ್ರಯೋಜನವಾಗಿಲ್ಲ: ಸಂಸ್ಥೆಯಲ್ಲಿ ಭದ್ರತೆಯ ದೃಷ್ಟಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಿದ್ದರೂ ಕಳ್ಳತನದ ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬರಲಿಲ್ಲ, ಯಾಕೆಂದರೆ ಶಾಲೆಯ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮರಾಗಳ ಸೆಟ್‌ಅಪ್ ಬಾಕ್ಸ್ ಅಧ್ಯಕ್ಷರ ಕೊಠಡಿಯ ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿತ್ತು, ಅದೇ ಕಂಪ್ಯೂಟರ್‌ನ್ನು ಕಳ್ಳರು ದೋಚಿರುವುದರಿಂದ ಕಳ್ಳರ ಕುರುಹು ಪತ್ತೆ ಹಚ್ಚಲು ಸುಲಭ ಮಾರ್ಗವಾಗಿದ್ದ ಸಿ.ಸಿ ಕ್ಯಾಮರಾ ಇದ್ದೂ ಪ್ರಯೋಜನಕ್ಕೆ ಬಾರದಂತಾಗಿದೆ.

ಪುತ್ತೂರು: ಕಾವು ಬುಶ್ರಾ ವಿದ್ಯಾಸಂಸ್ಥೆಯ ಕಛೇರಿ ಕೊಠಡಿಗೆ ಕಳ್ಳರು ನುಗ್ಗಿ ಕಂಪ್ಯೂಟರ್ ಮಾನಿಟರ್, ರಿಸೀವರ್, ಮೈಕ್ ಸೆಟ್ ಸೇರಿ ಸುಮಾರು ರೂ.೨೨ ಸಾವಿರ ಬೆಲೆಯ ವಸ್ತುಗಳನ್ನು ಕಳವುಗೈದಿರುವ ಘಟನೆ ಅ.5ರಂದು ವರದಿಯಾಗಿದೆ.

ರಾಜ್ಯ ಹೆದ್ದಾರಿ ಬದಿಯಲ್ಲಿರುವ ಮಾಡ್ನೂರು ಗ್ರಾಮದ ಕಾವು ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷರ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ತಮ್ಮ ಕೈಚಳಕ ಮೆರೆದಿದ್ದಾರೆ, ಕೊಠಡಿಯಲ್ಲಿ ಗೋಡ್ರೇಜ್ ಕಪಾಟುಗಳ ಬಾಗಿಲು ಮುರಿದು ಅದರಲ್ಲಿದ್ದ ಅಗತ್ಯ ದಾಖಲೆ ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ, ಗೋಡ್ರೆಜ್‌ನಲ್ಲಿ ನಗದು ಇರಬಹುದೆಂಬ ಸಂಶಯದಲ್ಲಿ ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರೂ ಕಳ್ಳರಿಗೆ ನಗದು ಸಿಗಲಿಲ್ಲ, ಆದರೆ ಕೊಠಡಿಯಲ್ಲಿದ್ದ ಕಂಪ್ಯೂಟರ್ ಮಾನಿಟರ್, ರಿಸೀವರ್‌ಗಳನ್ನು ಕಳವುಗೈದಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರ ಆಗಮನ: ಘಟನೆಗೆ ಸಂಬಂಧಿಸಿದಂತೆ ಕಳ್ಳರ ಜಾಲ ಪತ್ತೆ ಹಚ್ಚಲು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಎಸ್‌ಪಿ ರಿಷ್ಯಂತ್, ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿ ಭೇಟಿ: ಘಟನಾ ಸ್ಥಳಕ್ಕೆ ಪುತ್ತೂರು ಎಎಸ್‌ಪಿ ರಿಷ್ಯಂತ್, ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಸಂಪ್ಯ ಗ್ರಾಮಾಂತರ ಠಾಣಾ ಎಸ್‌ಐ ಅಬ್ದುಲ್ ಖಾದರ್, ಈಶ್ವರಮಂಗಲ ಹೊರಠಾಣಾ ಎಎಸ್‌ಐ ವಿಠಲ ಶೆಟ್ಟಿ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ.

ಪ್ರಕರಣ ದಾಖಲು: ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಜೀಜ್‌ರವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಐ.ಸಿ ಕೈಲಾಸ್, ಸುರೇಶ್ ಆಳ್ವ, ಪ್ರದೀಪ್ ರೈ ಮೇನಾಲ, ಮೋಹನ ಆಳ್ವ ಮತ್ತಿತರರು ಭೇಟಿ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.