Breaking News

‘ಕಂಬಳ ಕೂಟಕ್ಕೆ ನಿಷೇಧ ಹೇರಬಾರದು-ಜಿಲ್ಲಾಡಳಿತದ ನಿಲುವನ್ನು ಲಿಖಿತವಾಗಿ ನೀಡಬೇಕು’- ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ನೇತೃತ್ವದಿಂದ ಡಿ.ಸಿ.ಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಳುನಾಡಿನ ಜನಪದ ಕ್ರೀಡೆಯಾಗಿರುವ ಕಂಬಳ ಕೂಟಕ್ಕೆ ಯಾವುದೇ ರೀತಿಯಲ್ಲಿ ನಿಷೇಧ ಮಾಡಬಾರದು ಎಂದು ಆಗ್ರಹಿಸಿ ಮತ್ತು ಕಂಬಳದ ಬಗ್ಗೆ ಜಿಲ್ಲಾಡಳಿತದ ನಿಲುವು ಏನೆಂಬುದನ್ನು ಲಿಖಿತವಾಗಿ ನೀಡಬೇಕು ಎಂದು ಒತ್ತಾಯಿಸಿ ಉಪ್ಪಿನಂಗಡಿ ವಿಜಯ-ವಿಕ್ರಮ ಕೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ಜೆ. ಜಗದೀಶ್‌ರವರಿಗೆ ಮನವಿ ಸಲ್ಲಿಸಲಾಗಿದೆ.

ಅಶೋಕ್ ರೈಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ನಿಯೋಗವು, ಕಂಬಳದ ವಿಚಾರವು ನ್ಯಾಯಾಲಯದ ವಿಚಾರಣೆಯಲ್ಲಿದೆ, ಕಂಬಳ ನಿಷೇಧಿಸಬೇಕೆಂದು ನ್ಯಾಯಾಲಯ ಆದೇಶಿಸಿಲ್ಲ, ಕಳೆದ ಬಾರಿಯೂ ಕಂಬಳ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ, ಆದರೆ, ಈ ಬಾರಿ ಉಡುಪಿಯಲ್ಲಿ ನಡೆಸಲುದ್ದೇಶಿಸಲಾಗಿದ್ದ ಕಂಬಳವನ್ನು ನಿಷೇಧ ಮಾಡಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ, ಆದುದರಿಂದ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದ

ನಿಲುವು ಏನೆಂಬುದನ್ನು ಲಿಖಿತವಾಗಿ ತಿಳಿಸಬೇಕು, ಕಳೆದ ಬಾರಿ ಮಾಡಿದಂತೆ ಕಂಬಳ ನಡೆಸಬಾರದು ಎಂದು ಮೌಖಿಕ ಆದೇಶ ನೀಡಿ ಗೊಂದಲ ಸೃಷ್ಠಿ ಮಾಡಬಾರದು ಮತ್ತು ನ್ಯಾಯಾಲಯದ ತೀರ್ಪು ಬರುವ ಮುನ್ನ ಜಿಲ್ಲಾಡಳಿತ ಯಾವುದೇ ನಿರ್ಣಯ ಕೈಗೊಳ್ಳಬಾರದು ಎಂದು ಒತ್ತಾಯಿಸಿದೆ. ಕಂಬಳದ ಬಗ್ಗೆ ಜಿಲ್ಲಾಡಳಿತದ ಅಭಿಪ್ರಾಯವನ್ನು 2 ದಿನದೊಳಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ನಿಯೋಗಕ್ಕೆ ತಿಳಿಸಿದರು. ಕಂಬಳ ಕೂಟವನ್ನು ನಿಷೇಧಿಸುವಂತೆ ಪ್ರಾಣಿದಯಾ ಸಂಘದವರು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ, ಅದಕ್ಕೆ ಪೂರಕವಾಗಿ ಜಿಲ್ಲಾಡಳಿತವೂ ಕಾರ್ಯ ನಿರ್ವಹಿಸುತ್ತಿದೆ, ಕಂಬಳವನ್ನು ನಿಷೇಧಿಸಿದ್ದೇ ಆದಲ್ಲಿ ಜಿಲ್ಲಾಡಳಿತ ಮತ್ತು ಪ್ರಾಣಿದಯಾ ಸಂಘದವರ ವಿರುದ್ಧ ಸುಪ್ರೀಂಕೋರ್ಟ್‌ವರೆಗೂ ಹೋರಾಟ ನಡೆಸುತ್ತೇವೆ ಎಂದು ಈ ಸಂದರ್ಭದಲ್ಲಿ ಅಶೋಕ್ ರೈಯವರು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು. ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ, ಪಿ.ಆರ್.ಶೆಟ್ಟಿ, ವಿಜಯ ಕುಮಾರ್, ಸೀತರಾಮ ಶೆಟ್ಟಿ, ಜಾನ್ ಡಿ’ಸೋಜಾ, ಕಂಗಿನಮನೆ ಸತೀಶ್ಚಂದ್ರ ಶೆಟ್ಟಿಯವರು ನಿಯೋಗದಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.