ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಭಾರ ನಿರ್ದೇಶಕರಾಗಿ ಡಾ. ಯಂ ಗಂಗಾಧರ ನಾಯಕ್

Puttur_Advt_NewsUnder_1
Puttur_Advt_NewsUnder_1

Dr._M_Gangadhara_Nayak_2

ಪುತ್ತೂರು: ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಸ್ಥಾನಕ್ಕೆ ಸಂಸ್ಥೆಯ ಹಿರಿಯ ಪ್ರಧಾನ ವಿಜ್ಞಾನಿ ಡಾ.ಯಂ. ಗಂಗಾಧರ ನಾಯಕ್‌ರವರನ್ನು ಪ್ರಭಾರ ನೆಲೆಯಲ್ಲಿ ದೆಹಲಿಯ ಕೃಷಿ ಸಂಶೋಧನಾ ಮಂಡಳಿ ನಿಯುಕ್ತಿಗೊಳಿಸಿದೆ. ಅ.೧ರಿಂದ ಇವರು ಹೆಚ್ಚುವರಿಯಾಗಿ ಈ ಕಾರ್ಯವನ್ನು ವಹಿಸಿಕೊಂಡಿದ್ದಾರೆ.

ಅರಿಯಡ್ಕ ಗ್ರಾಮದ ಮುಂಡಕೊಚ್ಚಿ ದಿ.ವಿಠಲ ನಾಯಕ್ ಹಾಗು ಕುಮುದಾರವರ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಶಾಲೆ ಕಾವು, ಪ್ರೌಢ ಶಿಕ್ಷಣವನ್ನು ಸೀತಾ ರಾಘವ ಪ್ರೌಢ ಶಾಲೆ ಪೆರ್ನಾಜೆ, ಬಳಿಕ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಮುಗಿಸಿ ಉನ್ನತ ವ್ಯಾಸಂಗವನ್ನು ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಹಾಗು ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಕೊಯಮತ್ತೂರುವಿನಲ್ಲಿ ಪೂರೈಸಿದ್ದಾರೆ. ಕೃಷಿ ಸಂಶೋಧನಾ ಮಂಡಳಿಯ ೧೯೮೬ರ ಸಾಲಿನ ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿ ತgಬೇತಿಯ ಬಳಿಕ ಕೇಂದ್ರ ಸರಕಾರದ ಅಧೀನದಲ್ಲಿರುವ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕಳೆದ ೨೭ ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ.  ತಮ್ಮ ಸೇವಾವಧಿಯಲ್ಲಿ ತಳಿ ವೈವಿಧ್ಯ, ತಳಿ ಅಭಿವೃದ್ಧಿ, ಸಸ್ಯೋತ್ಪಾದನೆ, ಪುನಃಶ್ಚೇತನ, ಸಾಂದ್ರ ಹಾಗು ಘನ ಸಾಂದ್ರ ಗೇರು ಕೃಷಿ ಪದ್ಧತಿ ಮತ್ತು ಕೃಷಿ ವಿಸ್ತರಣಾ ವಿಭಾಗಗಳಲ್ಲಿ ಪರಿಣಿತಿಯನ್ನು ಹೊಂದಿ ಗೇರು ಕೃಷಿ ನೈಪುಣ್ಯತೆಯನ್ನು ಹೊಂದಿರುವ ಗಂಗಾಧರ್ ನಾಯಕ್‌ರವರು ರೈತರ ತರಬೇತಿ, ರೈತರಿಗೆ ಗುಣಮಟ್ಟದ ಗೇರು ಕಸಿಗಿಡಗಳ ವಿತರಣೆ, ಗೇರು ಕೃಷಿ ಮಾಹಿತಿ ನೀಡುವಿಕೆ, ಗೇರು ಕೃಷಿಕರ ತೋಟಗಳಲ್ಲಿ ಪ್ರಾತ್ಯಕ್ಷಿಕೆ ನೀಡುವಿಕೆ ಹಾಗು ಕೇಂದ್ರ ಸರಕಾರದ ಗಿರಿಜನ ಉಪಯೋಜನೆಯಡಿಯಲ್ಲಿ ರೈತರಿಗೆ ಸವಲತ್ತುಗಳನ್ನು ಒದಗಿಸುತ್ತಾ ಗೇರು ಕೃಷಿಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಗೇರು ವೈವಿಧ್ಯಗಳನ್ನು ಸಂಗ್ರಹಿಸಿ ಗೇರು ಸಂಗ್ರಹಾಲಯ ಹಾಗು ಗೇರು ಮ್ಯೂಸಿಯಮ್ ಸ್ಥಾಪಿಸುವಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನೂ ಇವರು ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.