13ಕೋಟಿ ಆದಾಯ ಬಂದರೂ ಉಪನೋಂದಣಿ ಕಛೇರಿಗಿಲ್ಲ ಸಿ.ಸಿ. ಕ್ಯಾಮರಾ ಭಾಗ್ಯ

Puttur_Advt_NewsUnder_1
Puttur_Advt_NewsUnder_1

 

5

ಸಬ್ ರಿಜಿಸ್ಟರ್ಡ್ ಕಛೇರಿ ಪುತ್ತೂರು ಇದರ ಕಳೆದ ವಾರ್ಷಿಕ ಸಾಲಿನಲ್ಲಿ ಸಂಗ್ರಹವಾಗಿರುವ ಶುಲ್ಕಗಳ ವಿವರವನ್ನು ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ಮಾಹಿತಿ ಹಕ್ಕಿನಡಿ ಅರ್ಜಿಸಲ್ಲಿಸಿ ಮಾಹಿತಿ ಪಡೆದಿದ್ದು ದಸ್ತಾವೇಜುಗಳ ಬಗ್ಗೆ ಮುದ್ರಾಂಕ ಶುಲ್ಕ ೧೦೦೫೬೦೮೯೫ ರೂ, ನೋಂದಣಿ ಶುಲ್ಕ ೨೬೨೬೧೫೬೧ ರೂ, ಶೋಧನಾ ಶುಲ್ಕ ೧೫೯೩೪೭೦ ರೂ, ನಕಲು ಅರ್ಜಿ ಶುಲ್ಕ ೨೦೨೫೩೫ ರೂ, ವಿವಾಹ ಶುಲ್ಕ ೧೭೬೬೭ ರೂ, ಮಾಹಿತಿ ಹಕ್ಕು ಶುಲ್ಕ ೭೧೪ ರೂ, ಪರಿವರ್ತನಾ ಶುಲ್ಕ ೪೮೮೬೩೫ ರೂ, ಪರಿವರ್ತನಾ ಶುಲ್ಕ ಲ್ಯಾಮಡ್ ರೆವಿನ್ಯೂ ೫೯೯೩೫ ರೂಗಳಾಗಿರುತ್ತದೆ.

ಮಿನಿವಿಧಾನ ಸೌಧಕ್ಕೆ ಸ್ಥಳಾಂತರ ಆದೇಶ ಬಂದಿಲ್ಲ ಮತ್ತು ಸಿ.ಸಿ.ಕ್ಯಾಮರಾ ಅಳವಡಿಸಲು ಅನುದಾನ ಲಭ್ಯವಾಗಿಲ್ಲ ಎಂದು ಉಪನೋಂದಣಾಧಿಕಾರಿಯನ್ನು ಸಮಿತಿ ಭೇಟಿ ನೀಡಿದಾಗ ಪ್ರತಿಕ್ರಿಯಿಸಿದರು.

ಪುತ್ತೂರು: ಸಬ್ ರಿಜಿಸ್ಟರ್ಡ್ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವ ಬಗ್ಗೆ ಮತ್ತು ಸಿಸಿ ಕ್ಯಾಮರಾ ಅಳವಡಿಸಲು ಪಡೆದುಕೊಂಡ ನಗದು ಹಣಗಳಿಗೆ ಕಡ್ಡಾಯವಾಗಿ ರಶೀದಿಯನ್ನು ನೀಡುವುದು, ಶುಲ್ಕಗಳ ಬಗ್ಗೆ ಬೋರ್ಡ್‌ಗಳಲ್ಲಿ ವಿವರವನ್ನು ಪ್ರಕಟಿಸುವುದು ಮತ್ತು ಮಿನಿವಿಧಾನ ಸೌಧಕ್ಕೆ ಕಛೇರಿಯನ್ನು ಸ್ಥಳಾಂತರಿಸುವುದು ಮುಂತಾದ ಹಲವು ಬೇಡಿಕೆಗಳ ಬಗ್ಗೆ ಮುದ್ರಾಂಕಗಳ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು.

ಮುದ್ರಾಂಕ ಆಯುಕ್ತರ ನಿರ್ದೇಶನದ ಮೇರೆಗೆ ಜಿಲ್ಲಾ ನೋಂದಣಾಧಿಕಾರಿಗಳು ೨೦೧೪ರ ಜೂನ್ ೬ರಂದು ಸಬ್ ರಿಜಿಸ್ಟರ್ಡ್ ಕಛೇರಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಸಿ.ಸಿ ಕ್ಯಾಮರಾ ಅಳವಡಿಸುವ ಭರವಸೆ ನೀಡಿ ೨ವರ್ಷ ಕಳೆದರೂ ಸಿಸಿ ಕ್ಯಾಮರಾ ಪೂರೈಸಲು ಸಾಧ್ಯವಾಗಿಲ್ಲ. ಈಗಿನ ಕಛೇರಿಯನ್ನೇ ದುರಸ್ತಿಗೊಳಿಸಿ ೧೫ಲಕ್ಷರೂಗಳ ಕ್ರಿಯಾಯೋಜನೆ ತಯಾರಿಸಲಾಗಿದ್ದರೂ ಅನುಷ್ಠಾನವಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.