ಸಪ್ತಗಿರಿ ಸ್ಟೀಲ್ಸ್& ಮೆಟಲ್ಸ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ಸ್ಟೈನ್ ಲೆಸ್ ಸ್ಟೀಲ್ ಪೈಪ್ ಮತ್ತು ಫಿಟಿಂಗ್ ಐಟಂ
  • ಅತ್ಯಾಧುನಿಕ ಶೈಲಿಯ ಸ್ಟೀಲ್ ಗ್ರಿಲ್‌ಗಳು ಲಭ್ಯ
  • ಮನೆ & ವಾಣಿಜ್ಯ ಸಂಕೀರ್ಣಗಳಿಗೆ ಸ್ಟೀಲ್ ರೇಲಿಂಗ್ ಹಾಕಿಕೊಡಲಾಗುವುದು.

ಪುತ್ತೂರು: ನೆಲ್ಲಿಕಟ್ಟೆ ಮಂಜುಶ್ರೀ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸಪ್ತಗಿರಿ ಸ್ಟೀಲ್ಸ್ & ಮೆಟಲ್ಸ್ ಬೊಳುವಾರು ನವಾಜ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಅ.11ರಂದು ಶುಭಾರಂಭಗೊಂಡಿತು.

ಮ್ಹಾಲಕ ಸುಬ್ರಾಯ ನಾಕ್ ಕೊಳಕ್ಕಿಮಾರ್ ಹಾಗು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ, ಪುತ್ತೂರಾಯ ಮೆಡಿಕಲ್‌ನ ಮ್ಹಾಲಕಿ ಹರಿಣಿ ಪುತ್ತೂರಾಯ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಹರಿಣಿ ಪುತ್ತೂರಾಯರವರು ಉದ್ಯಮದಲ್ಲಿ ಸೇವೆಯೇ ಮುಖ್ಯ. ಉತ್ತಮ ಸೇವೆ ನೀಡಿದಾಗ ಸಂಸ್ಥೆಯು ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತದೆ. ಉತ್ತಮ ಸೇವೆಯೊಂದಿಗೆ ಗ್ರಾಹಕರ ಮನ ಮೆಚ್ಚುವಂತಹ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಪುರುಷೋತ್ತಮ ನಾಯಕ್ ಹಣಿಯೂರು, ಸಮೃದ್ಧಿ ಕನ್ಸ್‌ಸ್ಟ್ರಕ್ಷನ್‌ನ ಮೋನಪ್ಪ ನಾಯಕ್, ದಿನೇಶ್ ನಾಯಕ್ ಕರ್ಮಲ, ಸತ್ವಮ್‌ನ ಪ್ರವೀಣ್ ಕೆಮ್ಮಾಯಿ, ಸಂಜೀವ ನಾಯಕ್ ಅಂಜಲ, ಮೋಹನ ನಾಯಕ್ ಆನಾಜೆ, ಇಂದಿರಾ ಇಂಜಿನಿಯರಿಂಗ್ ವರ್ಕ್ಸ್‌ನ ರಮೇಶ್ ತೆಂಕಿಲ, ಸೌಮ್ಯ ಸುರೇಶ್ ಕರ್ಮಲ, ರಾಧಾಕೃಷ್ಣ ನಾಕ್ ಕೊಳಕಿಮಾರ್, ಶಿವಂ ಕಂಪ್ಯೂಟರ‍್ಸ್‌ನ ಮಾಲಕ ಸುದರ್ಶನ್ ರೈ, ವಾಣಿ ಪ್ರಿಂಟರ‍್ಸ್‌ನ ನೀಲಂತ್ ಕುಮಾರ್, ದುರ್ಗಾ ಅಟೋ ವರ್ಕ್ಸ್‌ನ ಡೀಕಯ್ಯ ಪೂಜಾರಿ, ಪ್ರಾಗ್ಯಾ ಕ್ಲೇ ಪ್ರಾಡಕ್ಟ್ಸ್‌ನ ಮಾಲಕ ಪ್ರಕಾಶ್ ನಾಯಕ್ ಬಾಳೆಪುಣಿ, ಲ್ಯಾಂಡ್ ಲೀಡರ‍್ಸ್‌ನ ಸದಾನಂದ ನಾಯಕ್, ನವೀನ್‌ಚಂದ್ರ ನಾಯಕ್, ಅಡ್ವಕೇಟ್ ಗೋಪಾಲಕೃಷ್ಣ, ಸಂತೋಷ್ ನಾಯಕ್ ಕಾಯರ್‌ಮಜಲ್, ನಗರಠಾಣಾ ಎಎಸ್‌ಐ ಲೋಕನಾಥ, ನಗರಸಭಾ ಸದಸ್ಯ ಜೀವಂದರ್ ಜೈನ್, ಬಜರಂಗದಳ ಪ್ರಾಂತ್ಯ ಸುರಕ್ಷ ಪ್ರಮುಖ್ ಮುರಳಿ ಕೃಷ್ಣ ಹಸಂತಡ್ಕ, ಬಜರಂಗದಳ ಪ್ರಮುಖ ಧನ್ಯಕುಮಾರ್ ಬೆಳಂದೂರು, ಬಿಜೆಪಿ ಮಂಡಲಿ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಾ.ಪಂ ಸದಸ್ಯ ಶಿವರಂಜನ್, ಅಜಿತ್ ರೈ ಹೊಸಮನೆ, ವಿನ್ಯಾಸ್ ಕನ್ಸ್‌ಸ್ಟ್ರಕ್ಷನ್‌ನ ಕಿಶೋರ್ ಕುಮಾರ್, ಮಿತ್ತೂರು ಕನ್ಸ್‌ಸ್ಟ್ರಕ್ಷನ್‌ನ ರಮೇಶ್ ಭಟ್, ಚಂದ್ರಶೇಖರ್ ಅಂಜಲ, ಸುಮ ಚಂದ್ರಶೇಖರ್ ಅಂಜಲ, ಅಪೇಕ್ಷಾ ಕೊಳಕಿಮಾರ್, ಹರ್ಷಿಲ್ ಕುಮಾರ್, ಶ್ರೀಮಾ, ಮಾಲಕರ ಪತ್ನಿ ಪುಷ್ಪಾ, ತಾಯಿ ಸೀತಾ, ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಮಾಲಕರ ಪುತ್ರರಾದ ಅಭಿಜಿತ್, ಅಭೀಶ್ ಸ್ವಾಗತಿಸಿ ನಮ್ಮಲ್ಲಿ ಎಲ್ಲಾ ತರದ ಸ್ಟೀಲ್ ಮತ್ತು ಮೆಟಲ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಹೇಳಿ ಸರ್ವರ ಸಹಕಾರ ಕೋರಿದರು. ಕುಡಿಪಾಡಿ ಗ್ರಾ.ಪಂ ಸದಸ್ಯ ಗಿರಿಧರ್ ಗೌಡ ಗೋಮುಖ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.