ಸವಣೂರು: ಸಾರ್ವಜನಿಕ ಶ್ರೀ ಶಾರದೋತ್ಸವ-ಧಾರ್ಮಿಕ ಸಭಾ ಕಾರ‍್ಯಕ್ರಮ- ಶೋಭಾಯಾತ್ರೆ

Puttur_Advt_NewsUnder_1
Puttur_Advt_NewsUnder_1

ಚಿತ್ರ-ಸಿಂದೂರ್ ಸವಣೂರು

ಪುತ್ತೂರು: ವಿದ್ಯಾ ಅಧಿದೇವತೆ ಶಾರದೆಯ ಆರಾಧನೆಯಿಂದ ಸುಖಿ ಸಮಾಜ ನಿರ್ಮಾಣವಾಗಲಿದೆ. ವಿದ್ಯೆಯಿಂದ ಸಂಪತ್ತು ಪ್ರಾಪ್ತಿಯಾಗಲಿದ್ದು, ನಾವು ಉತ್ತಮ ವಿದ್ಯಾವಂತರಾಗುವ ಮೂಲಕ ನಮ್ಮ ನಾಡಿನ ಎಲ್ಲರೂ ವಿದ್ಯಾವಂತರರಾಗ ಬೇಕು ಎಂಬ ಹಂಬಲ ನಮ್ಮಲ್ಲಿ ಬೆಳೆಯಬೇಕು ಎಂದು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಚ್.ಶ್ರೀಧರ್ ರೈ ಹೇಳಿದರು.

ಅವರು ಶ್ರೀ ಶಾರದಾಂಬಾ ಸೇವಾ ಸಂಘ ಸವಣೂರು ಇದರ ಆಶ್ರಯದಲ್ಲಿ ಅ.11 ರಂದು ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿದ  12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಕಾರ‍್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಿದರೆ ಲಕ್ಷ್ಮಿ ಉಳಿಯುತ್ತಾಳೆ, ನಾವು ಪಡೆದ ಸಂಪತ್ತು ಲೋಕ ಕಲ್ಯಾಣಕ್ಕೆ ಬಳಕೆಯಾಗಬೇಕು ಆಗ ಮಾತ್ರ ನಮ್ಮ ಬದುಕಿಗೆ ಅರ್ಥ ಬರುತ್ತದೆ ಎಂದು ಹೇಳಿ, ಮನೆಯಲ್ಲಿ ನಿತ್ಯ ಭಜನೆ, ದೇವರಿಗೆ ದೀಪ ಇಟ್ಟು ಪೂಜಿಸುವ  ಪದ್ಧತಿ ಬೆಳೆಯಬೇಕು ಏಂದು ಹೇಳಿದರು

ಮುಖ್ಯ ಅತಿಥಿಯಾದ ಉದ್ಯಮಿ, ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಕಾರ‍್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರರವರು ಮಾತನಾಡಿ ನಮ್ಮ ಊರಿನಲ್ಲಿ ನಡೆಯುವ ಧಾರ್ಮಿಕ  ಕಾರ‍್ಯಕ್ರಮದಲ್ಲಿ ಪ್ರತಿ ಮನೆಯವರು  ಭಾಗವಹಿಸುವ ಪದ್ಧತಿಯನ್ನು ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪುತೂರು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿಯವರು ಮಾತನಾಡಿ ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಆಭಿಮಾನವನ್ನು ಹೊಂದಬೇಕು. ಜೊತೆಗೆ ಸಂಸ್ಕೃತಿ-ಸಂಸ್ಥಾರವನ್ನು ಬೆಳೆಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ಸವಣೂರು ಕೆ ಸೀತಾರಾಮ ರೈಯವರು ಸ್ವಾಗತಿಸಿ, ಮಾತನಾಡಿ ಕಳೆದ ೧೨ ವರ್ಷಗಳಿಂದ ಉತ್ತಮವಾಗಿ ಶಾರದೋತ್ಸವ ನಡೆದು ಬರುತ್ತಿದೆ. ಮುಂದಿನ ವರ್ಷಗಳಿಂದ ವಿಶೇಷವಾದ ವೈವಿಧ್ಯಮಯ ಕಾರ‍್ಯಕ್ರಮ ನಡೆಯಬೇಕು ಎಂದು ಆಶಂi ವ್ಯಕ್ತಪಡಿಸಿದರು. ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸಂಪತ್ ಕುಮಾರ್‌ರವರು ಪ್ರಾಸ್ತಾವನೆಗೈದರು. ಕಾರ‍್ಯಧರ್ಶಿ ಜತ್ತಪ್ಪ ಗೌಡ ವಂದಿಸಿದರು. ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರು ಕಾರ‍್ಯಕ್ರಮ ನಿರೂಪಿಸಿದರು. ವಸಂತ್ ರೈ ಸೊರಕೆ, ವಿಶ್ವನಾಥ ಮಡಿವಾಳ, ಕುಂಞ್ಞ ನಲಿಕೆ, ದಯಾನಂದ ಬೇರಿಕೆ, ಬಾಲಚಂದ್ರ ರೈ ಕೆರೆಕೋಡಿ, ಅಭಿಷೇಕ್ ಜೆ ರೈರವರುಗಳು ಸಹಕರಿಸಿದರು.

ಬೆಳಿಗ್ಗೆ  ಶ್ರೀ ದೇವಿಯ ಪ್ರತಿಷ್ಠೆ,ಗಣಹೋಮ, ಉದಯಕುಮಾರ್ ಸರ್ವೆಯವರಿಂದ ಧ್ವಜಾರೋಹಣ ನಡೆಯಿತು. ೯.೩೦ರಿಂದ ಕೊಪ್ಪ ಕೆಳಗಿನಕೇರಿ ಶ್ರೀ ಶಾರದಾಂಬಾ ಭಜನಾ ಮಂಡಳಿಯವರಿಂದ ಭಜನಾ ಕಾರ‍್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆದ ಬಳಿಕ  ಧನ್ಯತಾ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಜರಗಿತು. ಸಂಜೆ ೪ ರಿಂದ ಶೋಭಾಯಾತ್ರೆಯು ಸವಣೂರಿನಿಂದ ಸರ್ವೆಯ ತನಕ ನಡೆದು, ಗೌರಿಹೊಳೆಯಲ್ಲಿ ಶ್ರೀ ಶಾರದ ಮೂರ್ತಿಯ ಜಲಸ್ಥಂಭನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.