Breaking News

ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ- ಭಜನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಣಿಯೂರು ಶ್ರೀ ಮಠದ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪೂಜೆಯು ಅ ೨ರಿಂದ ಅ ೧೦ರವರೆಗೆ ರಾತ್ರಿ ನಡೆಯಿತು. ಪ್ರತಿದಿನ ಸಂಜೆ ಸದಾನಂದ ಆಚಾರ್ಯ ಅಬೀರ ಇವರ ನೇತೃತ್ವದಲ್ಲಿ ಕಣ್ವಶ್ರೀ ಸಾಂಸ್ಕೃತಿಕ ಕಲಾ ಕೇಂದ್ರ ಕಾಣಿಯೂರು, ಶ್ರೀದೇವಿ ಭಜನಾ ಮಂಡಳಿ ಉಪ್ಪಡ್ಕ ಪುಣ್ಚತ್ತಾರು, ಶ್ರೀ ಸದಾಶಿವ ಯುವಕ ಮಂಡಲ ಅಗಳಿ, ಶ್ರೀ ಕಪಿಲೇಶ್ವರ ಭಜನಾ ಮಂಡಳಿ ಚಾರ್ವಾಕ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾವೂರು, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು, ಕೊಡಿಮಾರು ಅಬೀರ ಗೆಳೆಯರ ಬಳಗ, ಕಣ್ವಶ್ರೀ ಮಹಿಳಾ ಮಂಡಳಿ ಕಾಣಿಯೂರು ಹಾಗೂ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಭಕ್ತಾಧಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸನ್ಮಾನ: ಭಜನಾ ಕಾರ್ಯಕ್ರಮದ ನೇತೃತ್ವದ ವಹಿಸಿದ ಸದಾನಂದ ಆಚಾರ್ಯ ಅಬೀರರವರನ್ನು ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್‌ರವರು ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.