ರಾಮನಗರ: ಶ್ರೀ ಶಾರದೋತ್ಸವ ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ನವರಾತ್ರಿಯ ದಿನಗಳು ಶಕ್ತಿ, ಸಮೃದ್ಧಿಯ ವಿಶಿಷ್ಟ ದಿನಗಳಾಗಿದ್ದು, ಇದು ಶಿಷ್ಟರ ರಕ್ಷಣೆಗಾಗಿ ಶ್ರೀ ದೇವಿಯು ದುಷ್ಟ ಸಂಹಾರಕ್ಕೆ  ಮುಂದಾದ ದಿನ. ಆದ್ದರಿಂದ ಈ ಸಂದರ್ಭದಲ್ಲಿ ಶಕ್ತಿ ಸ್ವರೂಪಿಣಿಯಾಗಿರುವ ಶ್ರೀ ದುರ್ಗೆಯನ್ನು ಆರಾಧಿಸುವುದರಿಂದ ಲೋಕಕಲ್ಯಾಣ ಸಾಧ್ಯ ಎಂದು ಮೂಡಬಿದ್ರೆ ಎಸೆಂಟ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್ ತಿಳಿಸಿದ್ದಾರೆ.

ಇಲ್ಲಿನ ರಾಮನಗರದ ಶ್ರೀ ಶಾರದಾ ಕಲಾ ಮಂದಿರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ನವರಾತ್ರಿ ನವತ್ವವಾಗಿದ್ದು, ಇದು ಹೊಸತನದ ಸಂಕೇತ. ನಿತ್ಯವೂ ನಮ್ಮ ಬದುಕು ಹೊಸತಾಗಬೇಕು ಎಂಬ ಸಾರವನ್ನು ಈ ಹಬ್ಬ ಸಾರುತ್ತದೆ. ಇಲ್ಲಿ ಶಕ್ತಿ ಸ್ವರೂಪಿಣಿಯಾದ ಶ್ರೀ ದುರ್ಗೆಯನ್ನು ಮಾತೃ ಸ್ವರೂಪದಲ್ಲಿ ಕಂಡು ಬೇರೆ ಬೇರೆ ಅವತಾರಗಳಲ್ಲಿ ಪೂಜಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಡಾ. ರಘು, ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಯಶವಂತ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಉಪಾಧ್ಯಕ್ಷ ಕಿಶೋರ್ ಕುಮಾರ್, ಕೋಶಾಧಿಕಾರಿ ಎನ್. ಗಣೇಶ್ ಶೆಣೈ, ಪ್ರಮುಖರಾದ ಗಂಗಾಧರ ಟೈಲರ್, ದೀಪಕ್ ಪೈ ಮತ್ತಿತರರು ಉಪಸ್ಥಿತರಿದ್ದರು.

ಶಾರದೋತ್ಸವದ ಪ್ರಯುಕ್ತ ನಡೆದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭ ಬಹುಮಾನ ನೀಡಲಾಯಿತು. ಬಳಿಕ ರಾಮ್ ಪ್ರಕಾಶ್ ಮರ್ಮಸ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕುಮಾರ್ ರೈ ನೆಕ್ಕರೆ ವಂದಿಸಿದರು. ಜೊತೆ ಕಾರ್ಯದರ್ಶಿ ರಘುರಾಮ ಎ. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.