Breaking News

ಸರ್ವೆ ಕಲ್ಪಣೆ ಪ್ರಾಥಮಿಕ ಶಾಲೆಗೆ ಜಿ.ಪಂ ಅಧ್ಯಕ್ಷೆ ಭೇಟಿ ಕೊಠಡಿ, ಶಿಕ್ಷಕರ ಕೊರತೆ ಮಾಹಿತಿ ಸಂಗ್ರಹ

Puttur_Advt_NewsUnder_1
Puttur_Advt_NewsUnder_1

3ರೆಂಜಲಾಡಿ: ಸರಕಾರಿ ಪ್ರಾಥಮಿಕ ಶಾಲೆ ಸರ್ವೆ ಕಲ್ಪಣೆ ಇಲ್ಲಿಗೆ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಅ.೮ರಂದು ಭೇಟಿ ನೀಡಿ ಶಾಲೆಯಲ್ಲಿರುವ ಸಮಸ್ಯೆಗಳನ್ನು ಆಲಿಸಿದರು.

ಶಾಲಾಭಿವೃದ್ದಿ ಸಮಿತಿ ಸದಸ್ಯ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಇಲ್ಲಿ 192 ವಿದ್ಯಾರ್ಥಿಗಳಿದ್ದು ಕೇವಲ 5 ಶಿಕ್ಷಕರು ಮಾತ್ರ ಇದ್ದಾರೆ. ಅದರಲ್ಲೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಶೈಕ್ಷಣಿಕ ವರ್ಷದ ಕ್ರೀಡಾಕೂಟ ಮತ್ತಿತರ ಕಾರ್ಯಕ್ರಮಗಳಿರುವುದರಿಂದ ನಿತ್ಯ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ಮುಖ್ಯ ಶಿಕ್ಷಕರಿಗೆ ಕಚೇರಿ ಕೆಲಸಗಳಿರುವುದರಿಂದ ಅವರಿಗೂ ಎಲ್ಲಾ ಸಮಯದಲ್ಲಿ ಪಾಠ ಮಾಡಲು ಆಗುವುದಿಲ್ಲ ಎಂದರು. ಇಲ್ಲಿನ ಹಲವು ಶಿಕ್ಷಕರು ಡೆಪ್ಯುಟೇಶನ್‌ನಲ್ಲಿ ಬೇರೆಡೆ ಹೋಗಿದ್ದರೂ ಅವರ ದಾಖಲಾತಿ ಮಾತ್ರ ಇಲ್ಲಿಯೇ ಮುಂದುವರಿದಿದೆ ಈ ಬಗ್ಗೆ ಗಮನಹರಿಸಿ ಅವರನ್ನು ರಿಲೀವ್ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮನವಿ ಮಾಡಿದರು. ಎಸ್‌ಡಿಎಂಸಿ ಸದಸ್ಯ ರಾಧಾಕೃಷ್ಣ ಅವರು ಧ್ವನಿಗೂಡಿಸಿದರು. ನಿವೃತ್ತ ಶಿಕ್ಷಕ ಮಹಾಬಲ ರೈ ಮಾತನಾಡಿ ಶಿಕ್ಷಕರು ಇದ್ದರೆ ಮಾತ್ರ ಶಾಲೆ ಉಳಿಯಬಹುದು ಇಲ್ಲದಿದ್ದರೆ ಕಷ್ಟವಿದೆ ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಪಿ. ಮಾತನಾಡಿ ನಮಗೆ ೨ ಅತಿಥಿ ಶಿಕ್ಷಕರನ್ನಾದರೂ ಶೀಘ್ರದಲ್ಲಿ ಒದಗಿಸಿಕೊಡಬೇಕು ಜೊತೆಗೆ ಕೊಠಡಿ ಅವಶ್ಯಕತೆಯೂ ಇದೆ ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಪೋಷಕರಾದ ಶೋಭ ಸೊರಕೆ, ಶಿಕ್ಷಕ ನವೀನ್ ಕುಮಾರ್ ಉಪಸ್ಥಿತರಿದ್ದರು.

ಸಮಸ್ಯೆ ಬಗೆಹರಿಸಲು ಪ್ರಯತ್ನ-ಮೀನಾಕ್ಷಿ: ಶಾಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡಿದ ಮೀನಾಕ್ಷಿ ಶಾಂತಿಗೋಡುರವರು ಇಲ್ಲಿನ ಶಿಕ್ಷಕರ ಕೊರತೆ ಹಾಗೂ ಸದ್ಯಕ್ಕೆ ಉಂಟಾಗಿರುವ ಶಿಕ್ಷಕರ ರಿಲೀವ್ ಸಮಸ್ಯೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಅವರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಶಾಲಾ ಕಟ್ಟಡ ಸಮಸ್ಯೆ ಕೆಲವು ಕಡೆ ಇದೆ, ಈ ವಿಚಾರವಾಗಿ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ರಾಜ್ಯ ಶಿಕ್ಷಣ ಸಚಿವರ ಜೊತೆ ಚರ್ಚೆ ಮಾಡಲಾಗಿದೆ. ಮುಂದಿನ ವರ್ಷ ಸಮಸ್ಯೆ ಬಗೆಹರಿಯುವ ಲಕ್ಷಣವಿದೆ ಎಂದರು. ಸರ್ವೆ ಕಲ್ಪಣೆ ಶಾಲೆಯಲ್ಲಿ ಉದ್ಭವಿಸಿರುವ ಕೊಠಡಿ ಹಾಗೂ ಶಿಕ್ಷಕರ ಕೊರತೆ ಸಮಸ್ಯೆಗಳ ಬಗ್ಗೆ ಇತ್ತೀಚೆಗೆ ಸುದ್ದಿ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟವಾಗಿತ್ತು.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಇದೆ. ಶಿಕ್ಷಕರ ನೇಮಕಾತಿ ಆಗದೇ ಇರುವುದು ಶಿಕ್ಷಕರ ಕೊರತೆಗೆ ಕಾರಣ. ಶಿಕ್ಷಣ ಸಚಿವರು ಮುಂದಿನ ವರ್ಷ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಶಿಕ್ಷಕರ ಕೊರತೆ ನೀಗಿಸಲು ನಾನು ನನ್ನಿಂದಾಗುವ ಎಲ್ಲ ಪ್ರಯತ್ನ ಮಾಡುತ್ತೇನೆ – ಮೀನಾಕ್ಷಿ ಶಾಂತಿಗೋಡು, ಜಿ.ಪಂ ಅಧ್ಯಕ್ಷೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.