Breaking News

ಕಾವು: `ತುಡರ್ ಭಜನಾ ಸಂಘ’ದ ಪ್ರಥಮ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

12ಪುತ್ತೂರು: ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿ 2015ರ ಅಕ್ಟೋಬರ್‌ನಲ್ಲಿ ನವರಾತ್ರಿಯ ಶುಭದಿನದಂದು ಉದ್ಘಾಟನೆಗೊಂಡಿದ್ದ ತುಡರ್ ಭಜನಾ ಸಂಘವು ಒಂದು ವರ್ಷವನ್ನು ಪೂರೈಸಿ, ಅ.1 ನವರಾತ್ರಿಯ ಮೊದಲನೇ ದಿನದಂದು ಪ್ರಥಮ ವಾರ್ಷಿಕೋತ್ಸವವನ್ನು ಮದ್ಲ ಚಂದ್ರಶೇಖರ ಬಲ್ಯಾಯರ ಮನೆಯಲ್ಲಿ ಆಚರಿಸಲಾಯಿತು.

ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನನ್ಯ ತುಡರ್ ಯುವಕ ಮಂಡಲವು ಸಾಮಾಜಿಕ ಕಾರ್ಯಚಟುವಟಿಕೆಯ ಜತೆಗೆ ಧಾರ್ಮಿಕ ನಂಬಿಕೆಯನ್ನು ಉಳಿಸುವಲ್ಲಿ ಆರಂಭಿಸಿರುವ ಭಜನಾ ಸಂಘವು ಯುವಜನತೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ, ಭಜನಾ ಸಂಘದ ಮೂಲಕ ಪ್ರತಿ ತಿಂಗಳ ಹುಣ್ಣಿಮೆಯಂದು ಗ್ರಾಮದ ಮನೆಗಳಲ್ಲಿ ಒಂದು ಗಂಟೆಯ ಭಜನೆ ನಡೆಸುವ ಮೂಲಕ ಭಜನೆಯ ಮಹತ್ವವನ್ನು ತಿಳಿಯಪಡಿಸುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ತುಡರ್ ಭಜನಾ ಸಂಘದ ಅಧ್ಯಕ್ಷ ಶೇಷಪ್ಪ ಗೌಡ ಮಾತನಾಡಿ ನನ್ಯ ಅಚ್ಚುತ ಮೂಡೆತ್ತಾಯರ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭಗೊಂಡ ತುಡರ್ ಭಜನಾ ಸಂಘವು ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದ್ದು, ಊರವರ ಸಹಕಾರವೂ ಉತ್ತಮ ರೀತಿಯಲ್ಲಿ ಸಿಕ್ಕಿದೆ, ಯುವಕ ಮಂಡಲದ ಯಶಸ್ಸಿಗೆ ಭಜನಾ ಸಂಘವು ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪಟ್ಟೆ ಶ್ರೀಕೃಷ್ಣ ಹಿ.ಪ್ರಾ ಶಾಲೆಯ ಶಿಕ್ಷಕ ಗೋಪಾಲಕೃಷ್ಣ ಭಟ್ ಮಾತನಾಡಿ ಶುಭಹಾರೈಸಿದರು.

ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ ಸಭಾಧ್ಯಕ್ಷತೆ ವಹಿಸಿದ್ದರು. ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ತುಡರ್ ಭಜನಾ ಸಂಘದ ಅಧ್ಯಕ್ಷ ಶೇಷಪ್ಪ ಗೌಡ ಪರನೀರು, ಅರಿಯಡ್ಕ ಗ್ರಾ.ಪಂ ಸದಸ್ಯ ಹೊನ್ನಪ್ಪ ಪೂಜಾರಿ ಪಿಲಿಪಂಜರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭಿನಂದನೆ: ತುಡರ್ ಭಜನಾ ಸಂಘದ ಸದಸ್ಯರಿಗೆ ಭಜನಾ ತರಬೇತಿ ನೀಡಿ ಮಾರ್ಗದರ್ಶನ ಮಾಡುತ್ತಿರುವ ಸೀತಾರಾಮ ಗೌಡರವರಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜತೆಗೆ ಒಂದು ವರ್ಷದಲ್ಲಿ ಭಜನೆ ನಡೆಸಲು ಅವಕಾಶ ಮಾಡಿಕೊಟ್ಟ ಮನೆಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭಜನಾ ಕಾರ್ಯಕ್ರಮ: ಭಜನಾ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮದ್ಲ ಚಂದ್ರಶೇಖರ ಬಲ್ಯಾಯರ ಮನೆಯಲ್ಲಿ ಒಂದು ಗಂಟೆಯ ಭಜನೆ ನಡೆಸಲಾಯಿತು. ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಭಾಸ್ಕರ ಬಲ್ಯಾಯ ಸ್ವಾಗತಿಸಿ, ಉಪಾಧ್ಯಕ್ಷ ನವೀನ್ ನನ್ಯಪಟ್ಟಾಜೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ನಾಯ್ಕ ವಾರ್ಷಿಕ ವರದಿ ವಾಚಿಸಿದರು. ಸದಸ್ಯ ಸುನೀಲ್ ನಿಧಿಮುಂಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಜತೆ ಕಾರ್ಯದರ್ಶಿ ಶ್ರೀಕಾಂತ್ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಕುಮಾರ್ ಬಲ್ಯಾಯ, ಕ್ರೀಡಾ ಕಾರ್ಯದರ್ಶಿ ರಾಘವ ಬಿ., ಕೋಶಾಧಿಕಾರಿ ಮೋಹನಚಂದ್ರ ಆಚಾರಿಮೂಲೆ, ಸಂಘಟನಾ ಕಾರ್ಯದರ್ಶಿ ಜಗದೀಶ ನಾಯ್ಕ, ಭಜನಾ ಸಂಘದ ಕಾರ್ಯದರ್ಶಿ ರಾಮಣ್ಣ ನಾಯ್ಕ ಆಚಾರಿಮೂಲೆ, ಸದಸ್ಯರಾದ ಭವಿತ್ ರೈ, ಸತೀಶ ಎಂ, ಪದ್ಮನಾಭ ಕುಲಾಲ್, ಧನಂಜಯ ನಾಯ್ಕ, ಬಾಲಕೃಷ್ಣ ನಾಯ್ಕ, ರಾಜೇಶ್ ಬಿ, ನಿರಂಜನ, ಸಂಕಪ್ಪ ಪೂಜಾರಿ, ತಿರುಮಲೇಶ್, ಪ್ರಭಾತ್, ರಾಘವ ಪಿ.ಎಸ್, ಚಂದ್ರಕಿರಣ್, ಬಾಲಕೃಷ್ಣ ಪಾಟಾಳಿ, ಹರ್ಷ ಆಚಾರಿಮೂಲೆ, ಚೇತನ್ ಮದ್ಲ, ಯತೀಶ್ ಮದ್ಲ, ಭರತ್ ಮದ್ಲ, ಲಿಂಗಪ್ಪ ನಾಯ್ಕ, ಪುರುಷೋತ್ತಮ ಆಚಾರ್ಯ ನನ್ಯ, ಆನಂದ ಮೂಲ್ಯ,  ಸ್ಥಳೀಯರಾದ ಕೊರಗಪ್ಪ ಗೌಡ ಬಳ್ಳಿಕಾನ, ಐತ್ತಪ್ಪ ಗೌಡ ಮಂಜಲ್ತಡ್ಕ, ಕೃಷ್ಣಪ್ಪ ಗೌಡ ಆಚಾರಿಮೂಲೆ, ಕುಂಞಣ್ಣ ಮೂಲ್ಯ ಮದ್ಲ, ಸೀತಾರತ್ನ, ನಾರಾಯಣ ರೈ ಮದ್ಲ, ರಾಮದಾಸ ರೈ ಮದ್ಲ, ತಮ್ಮಣ್ಣ ಗೌಡ ಪರನೀರು, ಸಂದೇಶ್ ಚಾಕೋಟೆ ಮತ್ತಿತರರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.