ಜೆಸಿಐ ನೆಕ್ಕಿಲಾಡಿ ಘಟಕ ಅಸ್ತಿತ್ವಕ್ಕೆ ಅಧ್ಯಕ್ಷ ಶಿವಕುಮಾರ್ ಬಾರಿತ್ತಾಯ ಕಾರ್ಯದರ್ಶಿ ವಿನೀತ್ ಶಗ್ರಿತ್ತಾಯ

13ಉಪ್ಪಿನಂಗಡಿ: ಜೆಸಿಐ ಉಪ್ಪಿನಂಗಡಿ ಪ್ರಾಂತ್ಯ ಇ ವಲಯ 15ರ ನೆಕ್ಕಿಲಾಡಿ ಘಟಕವು ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಶಿವಕುಮಾರ್ ಬಾರಿತ್ತಾಯ ಹಾಗೂ ಕಾರ್ಯದರ್ಶಿಯಾಗಿ ವಿನೀತ್ ಶಗ್ರಿತ್ತಾಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅಮಿತಾ ಹರೀಶ್, ನಿತೀಶ್ ಗಾಣಿಗ, ಭರತ್, ಪ್ರಶಾಂತ್ ಗಾಣಿಗ, ನಿತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗೌತಮ್ ಕೆ.ಎಸ್., ಖಜಾಂಚಿಯಾಗಿ ವೈಶಾಲಿ ಕುಂದರ್ ಹಾಗೂ ನಿರ್ದೇಶಕರಾಗಿ ಮೋಹನ್, ಲೊಕೇಶ್, ಶಿಲ್ಪಾ ಆಚಾರ್ಯ, ಮಹೇಶ್ ಪಿ.ಕೆ. ಆಯ್ಕೆಯಾಗಿದ್ದಾರೆ.

ಇಂದು ಪದಗ್ರಹಣ: ಜೆಸಿಐ ನೆಕ್ಕಿಲಾಡಿ ಘಟಕದ ಪದಗ್ರಹಣ ಸಮಾರಂಭವು ಅ.12ರಂದು ಸಂಜೆ ೭ಗಂಟೆಗೆ 34ನೇ ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಭವನದಲ್ಲಿ ನಡೆಯಲಿದ್ದು, ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಬ್ಲ್ಯೂಡಿ ಗುತ್ತಿಗೆದಾರ ರಾಧಾಕೃಷ್ಣ ನಾಕ್, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಅನ್ನಪೂರ್ಣ ಎಸ್.ಕೆ. ರಾವ್, ಪದಗ್ರಹಣ ಅಧಿಕಾರಿಯಾಗಿ ಪ್ರಾಂತ್ಯ ಇ ವಲಯ ೧೫ರ ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ರೈ ಬಿ., ಗೌರವ ಅತಿಥಿಯಾಗಿ ವಲಯ 15ರ ಜೆ&ಡಿಯ ವಲಯ ನಿರ್ದೇಶಕ ಜೆಎಫ್‌ಪಿ ರತ್ನಾಕರ ಇಂದ್ರಾಳಿ ಭಾಗವಹಿಸಲಿದ್ದಾರೆ.

ಸಂಜೆ 6:30ರಿಂದ ಸಿಂಚನಾ ಪಿ ರಾವ್ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಫಿಲ್ಮ್ ಡ್ಯಾನ್ಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.