ಅರಿಯಡ್ಕ: ಬಿಜೆಪಿ ಮಹಿಳಾ ಮೋರ್ಛಾಕ್ಕೆ ಆಯ್ಕೆ – ಅಧ್ಯಕ್ಷೆ: ಶಾಂತಾ ಜೆ. ರೈ, ಪ್ರ.ಕಾರ್ಯದರ್ಶಿ: ಚಿತ್ರಲೇಖಾ ರೈ

ariyadkaಪುತ್ತೂರು: ಬಿಜೆಪಿ ಮಹಿಳಾ ಮೋರ್ಛಾದ ಅರಿಯಡ್ಕ ಪಂಚಾಯತ್ ಸಮಿತಿಯ ಅಧ್ಯಕ್ಷೆಯಾಗಿ ಮಾಡ್ನೂರು ಗ್ರಾಮದ ಸರ್ವೋಳ್ತಡಿ ನಿವಾಸಿ ಜಗದೀಶ್ ರೈಯವರ ಪತ್ನಿ ಶಾಂತಾ ಜೆ. ರೈ, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಲೇಖಾ ರೈ ಆಯ್ಕೆಯಾಗಿದ್ದಾರೆ. ಸಮಿತಿ ರಚನೆಯು ಇತ್ತೀಚೆಗೆ ತಾಲೂಕು ಮಹಿಳಾ ಮೋರ್ಛಾದ ಅಧ್ಯಕ್ಷೆ ಉಷಾನಾರಾಯಣರವರ ನೇತೃತ್ವದಲ್ಲಿ ಕಾವುನಲ್ಲಿ ನಡೆಯಿತು.

ಉಳಿದಂತೆ ಉಪಾಧ್ಯಕ್ಷರಾಗಿ ಶ್ರೀಮತಿ ಮಾಡ್ನೂರು ಗ್ರಾಮದ ಅಂಕೊತ್ತಿಮಾರು ನಿವಾಸಿ ಪ್ರಸಾದ್ ರೈಯವರ ಪತ್ನಿ ಅಮೃತಾ ಮಾಯಿಲಕೊಚ್ಚಿ, ಕಾರ್ಯದರ್ಶಿಯಾಗಿ ಮಮತಾ ರಾವ್, ಪ್ರೇಮಲತಾ ರೈ, ಕೋಶಾಧಿಕಾರಿ ವಿಶಾಲಾಕ್ಷಿ, ಸದಸ್ಯರಾಗಿ ಪ್ರೇಮಲತಾ ಚಾಕೋಟೆ, ಹೇಮಾವತಿ ಚಾಕೋಟೆ, ಭವಾನಿ ಕುಂಞಿಕುಮೇರು, ಸುಮತಿ ಆಚಾರಿಮೂಲೆ, ಸಾವಿತ್ರಿ ಕುರಿಂಜ, ವಿಜಯ ಪಿಲಿಪಂಜರ, ಕವಿತಾ ಶ್ರೀಧರ್ ರಾವ್, ತಿರುಮಲೇಶ್ವರಿ ಶೇಖಮಲೆ ರವರನ್ನು ಆಯ್ಕೆ ಮಾಡಲಾಯಿತು.

ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸದಸ್ಯ ತಿಲಕ್ ರೈ, ತಾಲೂಕು ಮಹಿಳಾ ಮೋರ್ಛಾದ ಉಪಾಧ್ಯಕ್ಷೆ ಸುಚೇತಾ ರೈ, ತಾಲೂಕು ಯುವ ಮೋರ್ಛಾದ ಸದಸ್ಯ ನವೀನ ನನ್ಯಪಟ್ಟಾಜೆ, ತಾಲೂಕು ಮಂಡಲ ಸಮಿತಿ ಉಪಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಅರಿಯಡ್ಕ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ರೈ ಜಾರತ್ತಾರು, ಪ್ರಧಾನ ಕಾರ್ಯದರ್ಶಿ ಶ್ರೀಧರ್ ರಾವ್ ನಿಧಿಮುಂಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.