ಕುಂತೂರುಪದವು ಸಮುದಾಯದತ್ತ ಶಾಲೆ

Puttur_Advt_NewsUnder_1
Puttur_Advt_NewsUnder_1

kunthuruಪೆರಾಬೆ: ಕುಂತೂರುಪದವು ಸ.ಹಿ.ಪ್ರಾ. ಶಾಲೆಯಲ್ಲಿ ಎಸ್‌ಡಿಎಂಸಿ ಸಭೆ ಮತ್ತು ಸಮುದಾಯದತ್ತ ಶಾಲಾ ಕಾರ್ಯಕ್ರಮ ಅ.7ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ರಘುನಾಥ ನಾಕ್ ವಹಿಸಿದ್ದರು. ಶಾಲಾ ಮುಖ್ಯಗುರು ಗಿರಿಜಾ ವಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾಭಿವೃದ್ಧಿಯ ಕುರಿತು ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ, ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ತಿಳಿಸಿದರು. ಸಹಶಿಕ್ಷಕ ಶಿವಣ್ಣ ಶೈಕ್ಷಣಿಕ ಗುಣಮಟ್ಟದ ಕಲಿಕೆಯ ಕುರಿತು ಮಾತನಾಡಿದರು. ಸಹ ಶಿಕ್ಷಕ ಕೇಶವ ಕೆ. ಮಾತನಾಡಿ, ಮಕ್ಕಳ ಪ್ರಗತಿ, ಕಲಿಕೆಯ ಕುರಿತು ಪೋಷಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ಪೆರಾಬೆ ಗ್ರಾ.ಪಂ.ನ ಬಾಬು ಗೌಡ ಕೆ.ಎಸ್., ಉಪಾಧ್ಯಕ್ಷೆ ಸರೋಜಿನಿ, ಆಶಾ ಕಾರ್ಯಕರ್ತೆ ರೋಸ್ಲಿ, ಅಂಗನವಾಡಿ ಕಾರ್ಯಕರ್ತೆ ಕತ್ರೀನಾ ಹಾಗೂ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿವಣ್ಣ ವಂದಿಸಿ, ಶಿಕ್ಷಕ ಕೇಶವ ಕೆ. ನಿರೂಪಿಸಿದರು. ಶಿಕ್ಷಕಿ ಕುಸುಮ, ಗೌರವ ಶಿಕ್ಷಕಿಯರಾದ ಗಾಯತ್ರಿ, ಜಯಶ್ರೀ ಸಹಕರಿಸಿದರು. ಅಪೇಕ್ಷಾ, ಜ್ಯೋತಿಕಾ, ಚೈತನ್ಯ ಪ್ರಾರ್ಥಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.