ರೆಂಜಿಲಾಡಿ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ನವರಾತ್ರಿ ಪೂಜೆ

Puttur_Advt_NewsUnder_1
Puttur_Advt_NewsUnder_1

renjiladyಕಡಬ: ನೂಜಿಬಾಳ್ತಿಲ, ರೆಂಜಿಲಾಡಿ ನೂಜಿಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ನವರಾತ್ರಿ ಉತ್ಸವ ಅ.1 ರಿಂದ ಅ.9 ರವರೆಗೆ ನಡೆದು ಅ.10 ರಂದು ನವರಾತ್ರಿ ವಿಶೇಷ ಪೂಜಾ ಕಾರ‍್ಯಕ್ರಮ ನಡೆಯಿತು. ಬೆಳಿಗ್ಗೆ ಆಯುಧ ಪೂಜಾ ಕಾರ‍್ಯಕ್ರಮ ನಡೆಯಿತು. ಸುಮಾರು 125 ಕ್ಕೂ ಹೆಚ್ಚಿನ ವಾಹನಗಳನ್ನು ಭಕ್ತಾಧಿಗಳು ದೈವಸ್ಥಾನಕ್ಕೆ ತಂದು ಪೂಜೆ ಮಾಡಿಸಿದರು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಅ.11 ರಂದು ಪೂಜಾವಿಧಿವಿಧಾನಗಳನ್ನು ನಡೆಸಿ ಬಳಿಕ ಮಹಾಪೂಜೆ ನಡೆಸಲಾಯಿತು. ಮಧ್ಯಾಹ್ನ ಅನ್ನಪ್ರಾಶನ ಹಾಗೂ ಹೊಸಅಕ್ಕಿ ನೈವೇದ್ಯ ನಡೆಯಿತು. ಊರಪರವೂರ ಭಕ್ತಾಧಿಗಳು ಆಗಮಿಸಿ ಪೂಜಾ ಸತ್ಕಾರ್ಯದಲ್ಲಿ ಪಾಲ್ಗೊಂಡರು. ಪ್ರಧಾನ ಅರ್ಚಕ ಕೃಷ್ಣ ಭಟ್ ನೇತೃತ್ವದಲ್ಲಿ ಶಶಿಗಿರಿವನ ಪೂಜಾ ವಿಧಿವಿಧಾನಗಳನ್ನು  ನೆರವೇರಸಿದರು.

ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ, ಕಾರ‍್ಯದರ್ಶಿ ಚೆನ್ನಪ್ಪ ಗೌಡ ಮಾರಪ್ಪೆ, ಕೋಶಾಧಿಕಾರಿ ರುಕ್ಮಯ ಗೌಡ, ಸದಸ್ಯರಾದ ದೇರಣ್ಣ ಗೌಡ ಗೌಡಿಗೆ, ದುಗ್ಗಣ್ಣ ಗೌಡ ಹೊಸಮನೆ, ರಾಮಚಂದ್ರ ಗೌಡ ಎಳುವಾಲೆ, ದೇವಪ್ಪ ಗೌಡ ನಾಗಶ್ರೀ ಬರೆಮೇಲು, ಲಿಂಗಪ್ಪ ಗೌಡ ಕಾನದಬಾಗಿಲು, ಲಿಂಗಪ್ಪ ಖಂಡಿಗ, ಪದ್ಮನಾಭ ಕೇಪುಂಜ, ಚಿದಾನಂದ ಗೌಡ ಕುಂಡೋವು, ಪರಿಚಾರಕರಾದ ವಿಜಯಕುಮಾರ್ ಕೇಪುಂಜ, ಯಶೋಧರ ಗೌಡ ಮಾರಪ್ಪೆ, ತಾರನಾಥ ಗೌಡಿಗೆ, ಡೀಕಯ್ಯ ಗೌಡ ಪಾಲೆತ್ತಡಿ, ಸೀತಾರಾಮ ಗೌಡ ತಲೆಕ್ಕಿ, ಲಿಂಗಪ್ಪ ಗೌಡ ಬಾಂತಾಜೆ, ತಿಮ್ಮಪ್ಪ ಸಾಕೋಟೆಜಾಲು, ಧರ್ಣಪ್ಪ ಪಿಲತ್ತಡಿ, ಚೆನ್ನಪ್ಪ ಬರೆಮೇಲು, ಪುರುಷೋತ್ತಮ ಪಾಲೆತ್ತಡಿ, ಡೀಕಯ್ಯ ಪಾಡ್ಲ ಸೇರಿದಂತೆ ಜಾತ್ರೋತ್ಸವ ಸಮಿತಿಯವರು, ಸಾರ್ವಜನಿಕರು, ಭಕ್ತಾಧಿಗಳು ಉಪಸ್ಥಿತರಿದ್ದರು. ಈಗಾಗಲೇ ಭಡ್ತಿ ಹೊಂದಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕೊಡಗು ಜಿಲ್ಲೆಗೆ ವರ್ಗಾವಣೆಗೊಳ್ಳಲಿರುವ ಕಡಬ ಠಾಣಾ ಎಸ್‌ಐ ಉಮೇಶ್ ಉಪ್ಪಳಿಕೆ, ಪತ್ನಿ ರವಿಕಲಾ, ಪುತ್ರ ಶಶಾಂಕ್‌ರವರು ದೈವಸ್ಥಾನಕ್ಕೆ ಆಗಮಿಸಿ ಪೂಜಾ ಸೇವೆಯನ್ನು ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.