Breaking News

ಪುತ್ತೂರು ದಸರಾ ನಾಡಹಬ್ಬ ಸಮಾರೋಪ – ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಚೆಂಡೆ ತಯಾರಿಕೆಗೆ ಸಂಗೀತ ಜ್ಞಾನ ಅಗತ್ಯ – ರಾಜರತ್ನಂ ದೇವಾಡಿಗ

ಪುತ್ತೂರು: ಕಲಾವಿದರಿಗೆ ಸಂಗೀತ ಉಪಕರಣ ಸರಿ ಇಲ್ಲದಿದ್ದರೆ ಬಹಳ ದೊಡ್ಡ ಅಡಚಣೆ ಆಗುತ್ತದೆ. ಈ ನಿಟ್ಟಿನಲ್ಲಿ ಕಲಾ ಸಾಮಾಗ್ರಿಗಳಿಗೆ ಸಂಬಂಧಿಸಿ ಚೆಂಡೆ ತಯಾರಿಕೆಯಲ್ಲಿ ಸ್ವಲ್ಪಮಟ್ಟಿನ ಸಂಗೀತ ಜ್ಞಾನ ಬೇಕು ಎಂದು ಚರ್ಮ ವಾದ್ಯ ತಯಾರಕ ರಾಜರತ್ನಂ ದೇವಾಡಿಗ ಹೇಳಿದರು.

ಪುತ್ತೂರು ದಸರಾ ನಾಡಹಬ್ಬ ಸಮಿತಿಯಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಕಳೆದ 9 ದಿನಗಳಿಂದ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಅ.೧೦ರಂದು ನಡೆದ ಸಮಾರೋಪ ಸಮಾರಂಭದಲ್ಲಿ ದಸರಾ ನಾಡಹಬ್ಬ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಲಕ್ಷ್ಮೀ ವಿ.ಜಿ ಭಟ್ ೯ ದಿನಗಳ ಕಾರ‍್ಯಕ್ರಮದ ಸಿಂಹಾವಲೋಕನ ಮಾಡಿದರು. ಬಾಲ್ಯದಿಂದಲೇ ಚೆಂಡೆ ಕಲಿಯುತ್ತಿರುವ ಮಾ. ಚಿರಂತನ್‌ರನ್ನು ಸನ್ಮಾನ ಸ್ವೀಕರಿಸಿದ ರಾಜರತ್ನಂ ದೇವಾಡಿಗ ಗೌರವಿಸಿದರು. ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಎನ್.ಸುಬ್ರಹ್ಮಣ್ಯಂ ಕೊಳತ್ತಾಯ, ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್, ಕೋಶಾಧಿಕಾರಿ ರಮೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಗೌರಿ ಅತಿಥಿಗಳನ್ನು ಗೌರವಿಸಿದರು. ವಿ.ಜಿ ಭಟ್ ಕಾರ‍್ಯಕ್ರಮ ನಿರೂಪಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ಡಾ| ಶಿವರಾಮ ಕಾರಂತ ಬಾಲವನ ರಂಗತಂಡ ಸಮರ್ಪಿಸುವ ಸಾಹಿತ್ಯ ಪೂರ್ಣ ನಾಟಕ ‘ಮಹಾ ಮಾಯಿ’ ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.