‘ಮನಸ್ಸಿನ ನೆಮ್ಮದಿಗೆ ಚಿತ್ರಕಲೆಯೂ ಒಂದು ದಾರಿ’; ಮಂಚಿ ಮಕ್ಕಳ ಕೊಲಾಜ್ ಚಿತ್ರ ಪಯಣ ಸಮಾರೋಪದಲ್ಲಿ ವೈ. ಶಿವರಾಮಯ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನಸ್ಸಿನ ನೆಮ್ಮದಿಗೆ ಚಿತ್ರಕಲೆಯೂ ಒಂದು ದಾರಿ ಎಂದು ಮಂಗಳೂರು ಶಿಕ್ಷಕ-ಶಿಕ್ಷಣ ಮಹಾ ವಿದ್ಯಾಲಯದ ರೀಡರ್ ಶಿವರಾಮಯ್ಯ ವೈ. ಹೇಳಿದರು. ಎಳವೆಯಿಂದಲೇ ಚಿತ್ರಕಲೆಯ ಒಲವು ಬೆಳೆಸಿಕೊಂಡ ವರು ನೆಮ್ಮದಿಯ ಬದುಕು ನಡೆಸಿದ ಸಾಕಷ್ಟು ನಿದರ್ಶನಗಳಿವೆ ಎಂದು ಅವರು ಹೇಳಿದರು.

ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು, ಸುದಾನ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆದ ಮಂಚಿ ಮಕ್ಕಳ ಕೊಲಾಜ್ ಚಿತ್ರ ಪಯಣದ ಸಮಾರೋಪ ಸಮಾರಂಭದಲ್ಲಿ ಮಂಚಿ ಮಕ್ಕಳನ್ನು ಅಭಿನಂದಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಮಾತನಾಡಿ, ಮಕ್ಕಳ ಪ್ರತಿಭಾ ವಿಕಾಸದ ಅವಕಾಶದ ರಹದಾರಿಯ ಅಗತ್ಯವಿದೆ. ಅವಕಾಶ ಸಿಕ್ಕಿದ ಮಕ್ಕಳು ಬೆಳೆಯಲು ಸಾಧ್ಯ ಎಂದರು.

ಕಲಾವಿದರಾದ ಪೂರ್ಣಾತ್ಮ ರಾಮ್ ಈಶ್ವರಮಂಗಲ, ಪ್ರಾಯೋ ಜಕರಾದ ಜ್ಯೋತಿ ಜನಾರ್ದನ, ಪುರಸಭೆ ಕ್ಲಸ್ಟರ್‌ನ ಸಿಆರ್‌ಪಿ ಶಾಲಿನಿ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕೊಲಾಜ್ ಚಿತ್ರ ಕಲಾವಿದರಾದ ಮಂಚಿ ಸರಕಾರಿ ಪ್ರೌಢಶಾಲೆಯ ೨೫ ಮಕ್ಕಳನ್ನು ದೀಪ ನೀಡಿ, ಗಂಧದ ಹಾರ ತೊಡಿಸುವುದರೊಂದಿಗೆ ಅಭಿನಂದಿಸಲಾಯಿತು.

ಮಕ್ಕಳಲ್ಲಿ ಕೊಲಾಜ್ ಚಿತ್ರದ ಬೆಳವಣಿಗೆಗೆ ಕಾರಣಕರ್ತರಾದ ಮಂಚಿ ಶಾಲಾ ಕಲಾ ಶಿಕ್ಷಕ ತಾರಾನಾಥ ಕೈಪಂಗಳ ಹಾಗೂ ಪುತ್ತೂರಿನ ಕಾರ್ಯಕ್ರಮ ಸಂಯೋಜಕ ರಮೇಶ್ ಉಳಯರವರನ್ನು ಅಭಿನಂದಿಸಲಾಯಿತು.

ಮಂಚಿ ಪ್ರೌಢಶಾಲೆಯ ಕೃತಿಕಾ ಮತ್ತು ಹರಿಚರಣ್ ಅಭಿಪ್ರಾಯ ವ್ಯಕ್ತಪಡಿಸಿ ದರು. ಶ್ರೀವಿದ್ಯಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ, ಹಾರಾಡಿ ಶಾಲಾ ಶಿಕ್ಷಕ ಪ್ರಶಾಂತ್ ಅನಂತಾಡಿ ಮತ್ತು ಮುಕ್ವೆ ಶಾಲಾ ಶಿಕ್ಷಕ ಚರಣ ಕುಮಾರ್ ಪುದು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋ ಜಕ ರಮೇಶ ಉಳಯ ಧನ್ಯವಾದವಿತ್ತರು. ಪುಣ್ಚಪ್ಪಾಡಿ ಶಾಲಾ ಮುಖ್ಯ ಶಿಕ್ಷಕಿ ರಶ್ಮಿತಾ ಎನ್. ನರಿಮೊಗರು ಕಾರ್ಯಕ್ರಮ ನಿರೂಪಿಸಿದರು.

ಈ ದಿನದ ಕೊಲಾಜ್ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಸುಮಾರು ೧೫೦ ಮಕ್ಕಳು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.