ಸಂಘದಿಂದ ರಾಷ್ಟ್ರನಿರ್ಮಾಣ ಕಾರ್ಯ: ರೋಹಿತ್

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ:  ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಉತ್ತಮ ಸಂಸ್ಕಾರದೊಂದಿಗೆ ಉತ್ತಮ ಜೀವನ ಪದ್ಧತಿಯನ್ನು ಕಲಿಸಿಕೊಡುವ ಮೂಲಕ ಮಾನವೀಯ ಮೌಲ್ಯವುಳ್ಳ ಸ್ವಯಂಸೇವಕರನ್ನು ತಯಾರಿಸುತ್ತಿದೆ. ಈ ಮೂಲಕ  ರಾಷ್ಟ್ರ ಕಾರ್ಯಕ್ಕೆ ವ್ಯಕ್ತಿಗಳನ್ನು ಜೋಡಿಸುವ ಕಾರ್ಯದಲ್ಲಿ ನಿರತರಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡಬ ತಾಲೂಕು ವಿಸ್ತಾರಕ್ ರೋಹಿತ್ ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಪ್ಪಿನಂಗಡಿ ಮಂಡಲದ ವತಿಯಿಂದ ವಿಜಯದಶಮಿ ಉತ್ಸವದಂಗವಾಗಿ ದುರ್ಗಾಗಿರಿಯ ಭಜನಾ ಮಂದಿರದಲ್ಲಿ ನಡೆದ ಪಥಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಬೌದ್ಧೀಕ್ ನೀಡುತ್ತಿದ್ದರು.

ವಿಜಯದಶಮಿ ದಿನದಂದು ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಳೆದ ಹಲವಾರು ವರ್ಷಗಳಿಂದ ಅನೇಕ ಸವಾಲುಗಳನ್ನು ಎದುರಿಸುತ್ತಾ ಬಂದರೂ, ಅಂತಿಮ ವಿಜಯದ ಹಾದಿಯತ್ತ ಹೆಜ್ಜೆ ಹಾಕುತ್ತಾ ಬಂದಿದೆ. ಹಿಂದೂ ಸಮಾಜ ಕಟ್ಟುವಲ್ಲಿ ಸಂಘವು ದಿಟ್ಟ ಹೆಜ್ಜೆಯಿಟ್ಟಿದ್ದು, ಶಾಖೆಗಳ ಮೂಲಕ ಸಂಘವು ಸುಸಂಸ್ಕೃತ ವ್ಯಕ್ತಿ ನಿರ್ಮಾಣದ ಕಾರ್ಯದಲ್ಲಿ ತೊಡಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುನೀಲ್ ಬೇಕಲ್, ಶಿವಕುಮಾರ್, ಕಂಗ್ವೆ ವಿಶ್ವನಾಥ್ ಶೆಟ್ಟಿ, ಅನಿತ್ ನಂದಿನಿನಗರ, ಹರಿರಾಮಚಂದ್ರ, ಪ್ರಶಾಂತ್ ರಾಮನಗರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾಗಿ ದೇವರಾಜ್, ಪ್ರಾರ್ಥನಾ ಪ್ರಮುಖರಾಗಿ ಅಕ್ಷಯ್ ನಂದಿನಿನಗರ, ಪ್ರವೀಣ್ ಬೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು. ಪವನ್ ಅಮೃತವಚನ ಪಠಿಸಿದರು. ಸಂಘದ ತಾಲೂಕು ಕಾಲೇಜ್ ವಿದ್ಯಾರ್ಥಿ ಪ್ರಮುಖ್ ಆದರ್ಶ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.