‘ಹುತಾತ್ಮ ಯೋಧರ ವಿಚಾರದಲ್ಲಿ ರಾಜಕೀಯ ಬೇಡ’; ‘ಯೋಧರಿಗೊಂದು ನಮನ’ ಕಾರ್ಯಕ್ರಮದಲ್ಲಿ ಶಕುಂತಳಾ ಶೆಟ್ಟಿ

ನಗರ ಕಾಂಗ್ರೆಸ್‌ನಿಂದ ನಡೆದ ಕಾರ್ಯಕ್ರಮ

*7 ಮಂದಿ ನಿವೃತ್ತ ಸೈನಿಕರಿಗೆ ಸನ್ಮಾನ

*ಹಿಂದಿನ ಸರ್ಜಿಕಲ್ ದಾಳಿಯ ವಿಡಿಯೋ ಪ್ರದರ್ಶನ

*ಸರ್ಜಿಕಲ್ ದಾಳಿ ರಾಜಕೀಯ ಖಂಡನೀಯಅಮಳ ರಾಮಚಂದ್ರ

*ಸರ್ಜಿಕಲ್ ದಾಳಿಯ ಸಂಪೂರ್ಣ ಫಲ ಭಾರತೀಯ ಸೇನೆಗೆಸೂತ್ರಬೆಟ್ಟು

*ಸೈನಿಕರಿಗೆ ಗೌರವ ಕೊಡುವ ಕೆಲಸ ಎಲ್ಲರಿಂದಾಗಲಿಕೆ.ಪಿ. ಅಹಮ್ಮದ್

*ಮಿಲಿಟರಿ ರಹಸ್ಯವನ್ನು ರಾಜಕೀಯವಾಗಿ ಬಳಸುವುದು ಸರಿಯಲ್ಲನಿರ್ಮಲ್ ಕುಮಾರ್

* ಮಂದಿ ನಿವೃತ್ತ ಸೈನಿಕರಿಗೆ ಸನ್ಮಾನ

ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗಿರುವ 7 ಮಂದಿ ಯೋಧರಿಗೆ ಸನ್ಮಾನ ನಡೆಯಿತು. ನಿವೃತ್ತ ಸೈನಿಕರಾದ ಕರ್ನಲ್ ಜಿ.ಡಿ. ಭಟ್, ತುಳಸೀದಾಸ್ ಪಿಲಿಂಜ, ಜ್ಯೋ ಡಿ’ಸೋಜ, ಮಾಧವ ಬಿ.ಕೆ., ರಾಜೀವ ಸುವರ್ಣ, ಜೆರೋಮ್ ಮಸ್ಕರೇನ್ಹಸ್‌ರವರನ್ನು ಶಾಸಕರು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಕರ್ನಲ್ ಜಿ.ಡಿ. ಭಟ್ ಮತ್ತು ಜ್ಯೋ ಡಿ’ಸೋಜರವರು ಮಾತನಾಡಿ, ಸೇನೆಯ ಬಗ್ಗೆ ಮತ್ತು ಅದರ ಕಾರ್ಯ ವ್ಯಾಪ್ತಿಯ ಬಗ್ಗೆ ಹಾಗೂ ಸರ್ಜಿಕಲ್ ದಾಳಿಯ ಬಗ್ಗೆ ವಿವರಿಸಿದರು.

 ಪುತ್ತೂರು: ಯೋಧರಿಗೊಂದು ನಮನ ಹಾಗೂ ೭ ಮಂದಿ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವು ಪುತ್ತೂರು ನಗರ ಕಾಂಗ್ರೆಸ್ ವತಿಯಿಂದ ಅ.೧೨ ರಂದು ಪುತ್ತೂರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಿತು. ಇತ್ತೀಚೆಗೆ ಅಗಲಿದ ಸೈನಿಕರ ಭಾವಚಿತ್ರಕ್ಕೆ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಶೆಟ್ಟಿಯವರು ಹೂಗುಚ್ಛ ಸಮರ್ಪಿಸಿ, ದೀಪ ಬೆಳಗಿಸಿ ನಮನ ಸಲ್ಲಿಸಿದರು. ಬಳಿಕ ಅವರು ಮಾತನಾಡುತ್ತಾ, ‘ದೇಶದ ಅಭಿಮಾನದ ಸಂಕೇತವಾಗಿರುವ ದೇಶದ ಸೈನಿಕರು ಮಾನವೀಯ ಸಂಬಂಧದೊಂದಿಗೆ ಈ ದೇಶದ ತುಡಿತಗಳ ಬಗ್ಗೆ ಸದಾ ಎಚ್ಚರದಿಂದಿದ್ದು, ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ನಾವು ನೆನಪಿಸಿಕೊಳ್ಳದೆ ಅವರ ಸಾವಿನಲ್ಲಿ ಕೀಳು ಮಟ್ಟದ ರಾಜಕೀಯ ಮಾಡಲು ಹೊರಟಿರುವುದು ದೇಶದ ದುರಂತ’ ಎಂದು ಹೇಳಿದರು. ಮಿಲಿಟರಿ ವಿಷಯವನ್ನು ರಾಜಕೀಯವಾಗಿ ಎಳೆದು ತರಬೇಡಿ. ದೇಶಕ್ಕೆ ಇದರಿಂದ ಹಾನಿ ಉಂಟಾಗಲಿದ್ದು, ನಾವು ಯೋಧರ ಋಣ ಸಂದಾಯ ಮಾಡುವ ಕೆಲಸವನ್ನು ಮಾಡಬೇಕು. ಅದನ್ನು ಬಿಟ್ಟು ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ ಎಂದ ಅವರು, ಮಕ್ಕಳಿಗೆ ದೇಶಭಕ್ತಿಯ ಬಗ್ಗೆ ತಿಳುವಳಿಕೆಯನ್ನು ನೀಡಿ ಈ ದೇಶದ ರಕ್ಷಣೆಗೆ ಅವರನ್ನು ಸೇರಿಸಿಕೊಳ್ಳಲು ಪ್ರೇರಣೆ ನೀಡಿ ಎಂದರು. ನನ್ನ ಮಕ್ಕಳು ಕೂಡಾ ಸೇನೆಗೆ ಸೇರಲು ಭಾರೀ ಸಾಹಸ ಮಾಡಿದರೂ ದೈಹಿಕವಾಗಿ ಸಾಧ್ಯವಾಗಲಿಲ್ಲ ಎಂದು ಶಕುಂತಳಾ ಶೆಟ್ಟಿಯವರು ಹೇಳಿದರು. ದೇಶದ ಸೇನೆಯಲ್ಲಿ ಯುವಕರ ಪಾತ್ರ ಅತ್ಯಮೂಲ್ಯವಾಗಿದೆ ಎಂದ ಅವರು, ನಾವು ಸೈನಿಕರಿಗೆ ಧೈರ್ಯ-ಸ್ಥೈರ್ಯ ನೀಡಿದಾಗ ಈ ದೇಶದ ರಕ್ಷಣೆ ಮತ್ತಷ್ಟು ಬಲಗೊಳ್ಳಲಿದೆ. ನಗರ ಕಾಂಗ್ರೆಸ್ ವತಿಯಿಂದ ಇಂತಹ ಒಂದು ಉಪಯುಕ್ತ ಹಾಗೂ ದೇಶಾಭಿಮಾನ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಕಾಂಗ್ರೆಸ್ ಸದಸ್ಯ, ಉದ್ಯಮಿಗಳೂ ಆದ ಕೆ.ಪಿ. ಅಹಮ್ಮದ್ ಹಾಜಿ ಯವರು ಮಾತನಾಡಿ, ದೇಶವನ್ನು ಕಾಯುವ ಸೈನಿಕರಿಗೆ ಗೌರವ ಕೊಡುವ ಕೆಲಸ ಎಲ್ಲರಿಂದಲೂ ನಡೆಯಬೇಕಾಗಿದೆ ಮತ್ತು ಸೇನೆಯ ಬಗ್ಗೆ ವಿವಿಧ ಹೇಳಿಕೆ ನೀಡಿ ಸೈನಿಕರ ಬಲವನ್ನು ಕುಗ್ಗಿಸದೆ ಅವರ ಸೇವೆಯನ್ನು ಸ್ಮರಿಸಿ ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ನಡೆಯಬೇಕು. ಸೈನಿಕರ ಬಲಿದಾನವನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ನ್ಯಾಯವಾದಿ ನೋಟರಿ ನಿರ್ಮಲ್ ಕುಮಾರ್ ಜೈನ್ ಮಾತನಾಡಿ, ಸೇನೆ ಎಂದರೆ ನಾವೆಲ್ಲರೂ ಗೌರವ ಕೊಡುವ ಸಂಸ್ಥೆಯಾಗಿದೆ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಅವರಿಗೆ ದೇಶದ ರಕ್ಷಣೆಗಾಗಿ ನಾವು ಸ್ಥೈರ್ಯ-ಧೈರ್ಯ ತುಂಬುವಂತಾಗಬೇಕು. ಮಿಲಿಟರಿ ರಹಸ್ಯವನ್ನು ರಾಜಕೀಯವಾಗಿ ಬಳಸುತ್ತಿರುವುದು ನಾಚಿಕೆ ಎಂದು ಹೇಳಿದರು. ಯುವಕರಿಗೆ ಸೇನೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸಬೇಕು ಮತ್ತು ಅವರಿಂದ ದೇಶ ಉಳಿಸುವ ಕೆಲಸ ನಡೆಸಬೇಕು ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮಾತನಾಡಿ, ಭಾರತೀಯರಾದ ನಾವು ನಮ್ಮ ಮನೆಯಲ್ಲಿ ಬೆಚ್ಚಗೆ ಮಲಗಿ ಕೊಂಡಿದ್ದರೆ ಅದು ನಮ್ಮ ದೇಶವನ್ನು ಕಾಯುವ ಸೈನಿಕರಿಂದಲೇ ಸಾಧ್ಯವಾಗಿದೆ. ಸರ್ಜಿಕಲ್ ದಾಳಿ ಹಲವಾರು ಸಲ ನಡೆದಿದ್ದು, ಇದು ಮೊದಲ ಸಲ ಅಲ್ಲ. ಈಗಿನ ಸರ್ಜಿಕಲ್ ದಾಳಿಯ ಬಗ್ಗೆ ರಾಜಕೀಯ ನಡೆಸುವುದು ಕಂಡುಬಂದಿದೆ. ಇದನ್ನು ನಾವು ಖಂಡಿಸಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈರವರು ಸರ್ಜಿಕಲ್ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ದುರದೃಷ್ಟಕರ. ೨೦೧೧ ಸೇರಿದಂತೆ ಹಲವಾರು ಸಲ ಸರ್ಜಿಕಲ್ ದಾಳಿಯಾಗಿದೆ. ಆದರೆ ದೇಶದ ಹಿತದೃಷ್ಟಿಯಿಂದ ಅದನ್ನು ಗೌಪ್ಯ ವಾಗಿಡಲಾಗಿದೆ. ಆದರೆ ಈಗಿನ ಸರ್ಜಿಕಲ್ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವುದು ಖೇದಕರ. ರಾಜಕೀಯವನ್ನು ದೂರ ಮಾಡಿ ಸರ್ಜಿಕಲ್ ದಾಳಿ ನಡೆಸಿದ ಸಂಪೂರ್ಣ ಫಲ ಭಾರತೀಯ ಸೇನೆಗೆ ಸಿಗಬೇಕಾಗಿದೆ ಎಂದರು. ಯುವಕರು ಸೇನೆಗೆ ಸೇರಿಕೊಳ್ಳುವ ಮೂಲಕ ದೇಶ ಸೇವೆಗೆ ಬದ್ಧರಾಗಬೇಕು. ದೇಶದ ರಕ್ಷಣೆಗೆ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬುವ ಕೆಲಸ ನಡೆಯಬೇಕು ಎಂದರು. ವೇದಿಕೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ ಉಪಸ್ಥಿತರಿದ್ದರು.

ಪುತ್ತೂರು ನಗರ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಸ್ವಾಗತಿಸಿ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ವಂದಿಸಿದರು. ಪುತ್ತೂರು ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಸಾಲ್ಮರ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಯೂನುಸ್ ಖಾನ್ ದೇಶ ಭಕ್ತಿಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪುತ್ತೂರು ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಪುತ್ತೂರು ತಾಲೂಕು ಎನ್.ಎಸ್.ಯು.ಐ. ಅಧ್ಯಕ್ಷ ಪಿ.ಜಿ. ರಾಕೇಶ್ ರಾವ್, ಪುತ್ತೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ಪಿ. ಗಣೇಶ್ ರಾವ್, ಉಪಾಧ್ಯಕ್ಷ ಬಿ.ಎ. ರಹಿಮಾನ್ ಬಪ್ಪಳಿಗೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಖಜಾಂಜಿ ಯಾಕೂಬ್ ಹಾಜಿ ದರ್ಬೆ, ಶಾರದಾ ಕೇಶವ ನಾಯ್ಕ, ಜೆ.ಕೆ. ವಸಂತ ಕುಮಾರ್ ರೈ, ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಅಬ್ದುಲ್ ರಝಾಕ್ ಆರ್.ಪಿ., ಪುತ್ತೂರು ನಗರ ಸಭಾ ಸದಸ್ಯೆ ವಾಣಿ ಶ್ರೀಧರ್, ಹಸೈನಾರ್ ಬನಾರಿ, ನ್ಯಾಯವಾದಿ ಕೆ.ಎಂ. ಸಿದ್ದೀಕ್, ಪುತ್ತೂರು ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಡಿ.ಕೆ. ಅಬ್ದುಲ್ ರಹಿಮಾನ್, ಮನ್ಮೋಹನ್ ರೈ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಶುಭಮಾಲಿನಿ ಮಲ್ಲಿ, ನೆಲ್ಲಿಕಟ್ಟೆ ಬಾಲಕೃಷ್ಣ ರೈ, ಶಾರದಾ ಅರಸ್, ವಿಶಾಲಾಕ್ಷಿ, ವಿಲ್ಫ್ರೆಡ್ ಫೆರ್ನಾಂಡೀಸ್ ಉರ್ಲಾಂಡಿ, ದಿನೇಶ್ ಪಿ.ವಿ., ವೇದನಾಥ ಸುವರ್ಣ, ಬನ್ನೂರು ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಶ್ಯಾಂ ಸುಂದರ ರೈ ಕೊಳ್ತಿಗೆ, ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀಧರ ಭಂಡಾರಿ, ಸೂಫಿ ಬಪ್ಪಳಿಗೆ, ಸೇವಾದಳದ ಹಂಝ ಕೂಡುರಸ್ತೆ, ಪ್ಯಾಟ್ರೀಕ್ ಲೋಬೋ ಕಲ್ಲಾರೆ, ಜೋಕಿಂ ರೆಬೆಲ್ಲೋ, ಎಪಿಎಂಸಿ ನಿರ್ದೇಶಕ ವಿ.ಎಚ್. ಅಬ್ದುಲ್ ಶಕೂರ್ ಹಾಜಿ, ಡಿಸಿಸಿ ಸದಸ್ಯ ಬೋಳೋಡಿ ಚಂದ್ರಹಾಸ ರೈ, ವನಿತಾ ಆಚಾರ್ಯ, ತಾ.ಪಂ. ಮಾಜಿ ಅಧ್ಯಕ್ಷ ಶಿವಪ್ಪ ಪೂಜಾರಿ, ಕೆ.ಪಿ. ಭಟ್, ಸಲೀಂ ಮುರ, ಅಬೂಬಕ್ಕರ್ ಮುಸ್ಲಿಯಾರ್, ಬಶೀರ್ ಸಾಲ್ಮರ, ನಗರ ಕಾಂಗ್ರೆಸ್ ಖಜಾಂಜಿ ಸೂತ್ರಬೆಟ್ಟು ಮೋಹನ್ ರೈ, ವಿ. ವೆಂಕಪ್ಪ, ಕೆದಂಬಾಡಿ ಗ್ರಾ.ಪಂ. ಉಪಾಧ್ಯಕ್ಷೆ ಅಸ್ಮಾ, ಶಶಿಕಿರಣ ರೈ ನೂಜಿಬೈಲು, ನರಿಮೊಗರು ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಹೊನ್ನಪ್ಪ ಪೂಜಾರಿ ಕೈಂದಾಡಿ, ಚಂದ್ರಾಕ್ಷ ಬನ್ನೂರು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅಝಾದ್, ಕನ್ನಡ ಸೇನೆಯ ಉಸ್ಮಾನ್ ಕೂರ್ನಡ್ಕ, ಶೀನಪ್ಪ ಪೂಜಾರಿ ಪಡ್ನೂರು, ಬನ್ನೂರು ಗ್ರಾ.ಪಂ. ಸದಸ್ಯ ಮೋಹನ ಗೌಡ, ಜಗನ್ನಾಥ ರೈ ಬನ್ನೂರು, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ರೋಶನ್ ಡಯಾಸ್, ಆದಂ ಕಲ್ಲರ್ಪೆ, ಅಶೋಕ್ ಕುಮಾರ್ ಸಂಪ್ಯ, ನಾರಾಯಣ ಕುಡ್ವ, ಸುರೇಂದ್ರ ಎ., ಸುರೇಶ್ ಪೂಜಾರಿ, ಅಬ್ದುಲ್ ಕುಂಞಿ, ರಫೀಕ್ ಎಂ. ಹರೀಶ್, ವಿಶ್ವಜಿತ್ ಅಮ್ಮುಂಜ, ಶಿವಪ್ರಕಾಶ್, ಜಾನ್ ಪಿಂಟೋ ಮೊಟ್ಟೆತ್ತಡ್ಕ, ಸತ್ತರ್ ಅಮಳ, ಶಾಹುಲ್ ಹಮೀದ್, ಭರತ್ ಕೆಮ್ಮಾರ, ವೆಂಕಪ್ಪ ಕೆಮ್ಮಾರ, ಪ್ರವೀಣ್ ಕುಮಾರ್, ಸತೀಶ್ ನೂಜಿ, ಬಾಲಕೃಷ್ಣ ಪಡೇರಿ, ಕೇಶವ ಕೆಮ್ಮಾರ, ಝಕರಿಯಾ ಕೆಮ್ಮಾರ, ಯೋಗೀಶ ಕೆಮ್ಮಾರ, ಶಶಿಕುಮಾರ್ ನೆಲ್ಲಿಕಟ್ಟೆ ಸಹಿತ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪುತ್ತೂರು ನಗರ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ರೋಶನ್ ಭಂಡಾರಿ, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸಾದಿಕ್ ಬರೆಪ್ಪಾಡಿ, ಪೂರ್ಣೇಶ್ ಕುಮಾರ್‌ರವರು ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಬಳಿಕ ಈ ಹಿಂದೆ ನಡೆದ ಸರ್ಜಿಕಲ್ ದಾಳಿಯ ವೀಡಿಯೋ ಪ್ರದರ್ಶನ ಪ್ರೊಜೆಕ್ಟರ್ ಮೂಲಕ ನಡೆಯಿತು.

dsc_5483 dsc_5516

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.