Breaking News

ಇಳಂತಿಲ:ಸ್ಕೂಟರ್‌ನಿಂದ ಬಿದ್ದು ಗಾಯಗೊಂಡಿದ್ದ ಮಾಣಿ ನಿವಾಸಿ ಹಾಜಿರಾ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಉಪ್ಪಿನಂಗಡಿ ಸಮೀಪದ ಇಳಂತಿಲ ಎಂಬಲ್ಲಿ ಸ್ಕೂಟರ್‌ನಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಮಹಿಳೆ ಅ.12ರಂದು ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲೂಕು ಮಾಣಿ ನಾಲ್ಕೂರು ನಡುಮೊಗ್ರು ಬಶೀರ್‌ರವರ ಪತ್ನಿ ಹಾಜಿರಾ(40.ವ) ಮೃತಪಟ್ಟ ಮಹಿಳೆ. ಅ.9ರಂದು ಉಪ್ಪಿನಂಗಡಿ ಇಳಂತಿಲ ರಸ್ತೆಯಲ್ಲಿ ಸ್ಕೂಟರ್(ಕೆಎ೦3ಎಚ್‌ಎಸ್3808)ನಲ್ಲಿ ಪತಿ ಜತೆ ಹಿಂಬದಿ ಸವಾರೆಯಾಗಿ ಬರುತ್ತಿರುವ ವೇಳೆ ಇಳಂತಿಲ ಸಮೀಪದ ಕುಂಟಲಕಟ್ಟೆ ಸೇತುವೆ ಬಳಿ ಹೊಂಡಗುಂಡಿ ರಸ್ತೆಯಲ್ಲಿ ಸ್ಕೂಟರ್‌ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರು. ಅಪಘಾತದಿಂದ ಅವರ ತಲೆಗೆ ತೀವ್ರ ಗಾಯವಾಗಿದ್ದು ಇಲ್ಲಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿದ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಬ್ದುಲ್ಲಾರವರು ನೀಡಿದ ದೂರಿನಂತೆ ಪುತ್ತೂರು ಸಂಚಾರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.