ಅನಾರೋಗ್ಯದಿಂದ ಕೇಪುಳು ನಿವಾಸಿ ರೋಹಿತ್.ಬಿ.ಕೆ ನಿಧನ

Puttur_Advt_NewsUnder_1
Puttur_Advt_NewsUnder_1

3ಪೆರಾಬೆ: ಆಲಂಕಾರು ಗ್ರಾಮದ ಕೇಪುಳು ನಿವಾಸಿ ಬಾಬು ಮುಗೇರವರ ಪುತ್ರ ರೋಹಿತ್.ಬಿ.ಕೆ.(18ವ)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.11ರಂದು ನಿಧನರಾಗಿದ್ದಾರೆ.

ಜ್ವರ, ವಾಂತಿ,ಭೇದಿಯಿಂದ ಬಳಲುತ್ತಿದ್ದ ರೋಹಿತ್‌ರವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಅ.11ರಂದು ಆಸ್ಪತ್ರೆಯಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ರೋಹಿತ್ ಕಳೆದ ಬಾರಿ ಪಿಯುಸಿ ಮುಗಿಸಿ ತಾಂತ್ರಿಕ ವಿದ್ಯಾಭ್ಯಾಸಕ್ಕಾಗಿ ನಿರ್ಧರಿಸಿದ್ದರು. ಆದರೆ ಸಕಾಲದಲ್ಲಿ ಅರ್ಜಿ ಸಲ್ಲಿಕೆಯಾಗದ ಕಾರಣ ಈ ವರ್ಷ ಮನೆಯಲ್ಲೇ ಉಳಿದಿದ್ದು ಮುಂದಿನ ವರ್ಷ ಪದವಿ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದ್ದರು. ಉತ್ತಮ ಕ್ರೀಡಾಪಟುವಾಗಿದ್ದು, ಕಬಡ್ಡಿ, ಕ್ರಿಕೆಟ್‌ನಲ್ಲಿ ಪ್ರತಿಭಾವಂತನಾಗಿದ್ದ ಈತ ತನ್ನ ಮಾವ, ಕಡಬ ಗ್ರಾಮದ ಕೆರೆಮುದೇಲು ನಿವಾಸಿ, ಬಂಟ್ರ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ(ಸಿಆರ್‌ಪಿ)ಯಾಗಿರುವ ಪೊಡಿಯಾ ಯಾನೆ ಪ್ರಸನ್ನಾರವರ ಮನೆಯಲ್ಲಿ ಉಳಿದುಕೊಂಡಿದ್ದರು. ರೋಹಿತ್ ಮೃತದೇಹವನ್ನು ಕೆರೆಮುದೇಲುಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ.

ಮೃತ ರೋಹಿತ್ ತಂದೆ ಬಾಬು ಮುಗೇರ, ಸಹೋದರಿ ಮಂಗಳೂರು ಮಂಗಳಾ ನರ್ಸಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಶಶಿಕಲಾ, ಕಡಬ ಏಮ್ಸ್ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ಪದ್ಮಾವತಿ, ಸಹೋದರ ಕಡಬ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಮಲಾಕ್ಷ (ಕಿರಣ್)ರನ್ನು ಅಗಲಿದ್ದಾರೆ. ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಸದಸ್ಯ ಅಶ್ರಫ್ ಶೇಡಿಗುಂಡಿ, ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಕಡಬ ಜೂನಿಯರ್ ಕಾಲೇಜು ಉಪನ್ಯಾಸಕ ವಾಸುದೇವ, ಮೊಗೇರಡ್ಕ ಶಾಲಾ ಅಧ್ಯಾಪಕ ರವೀಂದ್ರ.ಬಿ.ಆರ್, ಸ್ಥಳೀಯ ಪ್ರಮುಖರಾದ ಶ್ಯಾಂ, ಬಾಲಕೃಷ್ಣ ಕೆರೆಮುದೇಲು ಮತ್ತಿತರರು ಕೆರೆಮುದೇಲು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.