ಕೆದಂಬಾಡಿ ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗೆ ಗುದ್ದಲಿಪೂಜೆ ಕಂಟ್ರಾಕ್ಟ್‌ದಾರರಿಗೆ ಸಹಕಾರ ನೀಡಿ ಕೆಲಸ ಸಮರ್ಪಕವಾಗುವಂತೆ ನೋಡಿಕೊಳ್ಳಿ-ಶಕುಂತಳಾ ಟಿ.ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

7

ಜಾಗ ತೋರಿಸಿದರೆ ಅಂಬೇಡ್ಕರ್ ಭವನಕ್ಕೆ ಅನುದಾನ ಕೊಡುತ್ತೇನೆ-ಶಕುಂತಳಾ ಟಿ.ಶೆಟ್ಟಿ ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಆದಿ ದ್ರಾವಿಡ ಜನಾಂಗದ ಕಾಲನಿಯೊಂದಿದ್ದು ಸುಮಾರು ೭೦ಕ್ಕೂ ಅಧಿಕ ಮನೆಗಳಿವೆ. ಆದ್ದರಿಂದ ಇಲ್ಲಿ ಅಂಬೇಡ್ಕರ್ ಭವನದ ಅಗತ್ಯ ಇದೆ ಎಂದು ಈ ಭಾಗದ ಜನರು ಹಲವು ಸಮಯಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು, ಅಂಬೇಡ್ಕರ್ ಭವನಕ್ಕೆ ನಿಮಗೆ ಜಾಗ ಮಾಡಿಕೊಡಲು ಸಾಧ್ಯವಾಗಲಿಲ್ಲ. ಜಾಗ ಮಾಡಿಕೊಟ್ಟರೆ ಅನುದಾನ ಕೊಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

75 ಲಕ್ಷ ರುಪಾಯಿಯಲ್ಲಿ ಎಲ್ಲೆಲ್ಲಿ ಏನೇನು ಆಗುತ್ತದೆ ಕೆದಂಬಾಡಿ ಗ್ರಾಮದ ಗ್ರಾಮ ವಿಕಾಸ ಯೋಜನೆಯ 75 ಲಕ್ಷ ರುಪಾಯಿ ಅನುದಾನದಲ್ಲಿ ಗ್ರಾಮದ ಎಲ್ಲೆಲ್ಲಿ ಏನೇನು ಅಭಿವೃದ್ಧಿ ಕಾಮಗಾರಿ ಆಗುತ್ತದೆ ಎಂಬುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ. ಕೆದಂಬಾಡಿ ಬೋಳೋಡಿ ಪರಿಶಿಷ್ಟ ಪಂಗಡ ಕಾಲನಿಗೆ ರಸ್ತೆ ಕಾಂಕ್ರಿಟೀಕರಣ, ಕೊಡಂಕೀರಿ ಬೋಳೋಡಿ ಪ.ಜಾತಿ ಕಾಲನಿಗೆ ರಸ್ತೆ ಕಾಂಕ್ರಿಟೀಕರಣ, ಕೊಡಂಕೀರಿ ಬೋಳೋಡಿ ಪ,ಜಾತಿ ಕಲಾನಿಗೆ ರಸ್ತೆ ಕಾಂಕ್ರಿಟೀಕರಣ, ತಿಂಗಳಾಡಿ ಗಾಂಧಿನಗರ ಪ.ಜಾತಿ ಕಾಲನಿಗೆ ರಸ್ತೆ ಕಾಂಕ್ರಿಟೀಕರಣ, ತಿಂಗಳಾಡಿ ದರ್ಬೆ ಮಠ ರಸ್ತೆ ಕಾಂಕ್ರಿಟೀಕರಣ, ಕುಯ್ಯಾರು ಗಟ್ಟಮನೆ ರಸ್ತೆ ಕಾಂಕ್ರಿಟೀಕರಣ, ಪಂಚಾಯತು ಕಟ್ಟಡದ ಮೇಲಂತಸ್ತಿನಲ್ಲಿ ಸಾರ್ವಜನಿಕ ಸಭಾಭವನ, ಇದೇ ಕಟ್ಟಡದ ಮೇಲಂತಸ್ತಿನಲ್ಲಿ ಯುವಕ ಯುವತಿ ಮಂಡಲಗಳ ಕ್ರೀಡಾ ಅಭಿವೃದ್ಧಿಗೆ ಕಟ್ಟಡ ನಿರ್ಮಾಣ,ಯುವಕ ಯುವತಿ ಮಂಡಲಗಳ ಕ್ರೀಡಾ ಚಟುವಟಿಕೆಗಳಿಗೆ ಸಾಮಾಗ್ರಿ ಖರೀದಿ, ಬೋಳೋಡಿ ಅಂಗನವಾಡಿ ಬಳಿ, ಸನ್ಯಾಸಿಗುಡ್ಡೆ ಬಳಿ, ಸಾರೆಪುಣಿ ಜಂಕ್ಷನ್‌ನಲ್ಲಿ, ಇದ್ಯಾಪೆ ಕಾಲನಿ ಬಳಿ, ಮಠ ಕ್ರಾಸ್ ಬಳಿ, ಚಾವಡಿ ಬಳಿ, ತಿಂಗಳಾಡಿ ಶಾಲಾ ಬಳಿ, ತಿಂಗಳಾಡಿ ಅಂಬೇಡ್ಕರ್ ನಗರ ಸಮಾಜ ಮಂದಿರದ ಬಳಿ ಗ್ರಾ.ಪಂ ಕಟ್ಟಡದ ಬಳಿ ಸೇರಿದಂತೆ ಪ.ಜಾತಿ ಕಾಲನಿಗಳಲ್ಲಿ ಒಟ್ಟು 2 ಮತ್ತು ಇತರ 6 ತಲಾ ಒಂದರಂತೆ ಸೋಲಾರ್ ದೀಪ ಅಳವಡಿಕೆ ಮಾಡುವುದು, ದರ್ಮಲೆ ಎಂಬಲ್ಲಿ ಕಾದಿರಿಸಿದ ಸ್ಥಳದಲ್ಲಿ ವೈಜ್ಞಾನಿಕ ಹಾಗೂ ಆಧುನಿಕ ರೀತಿಯಲ್ಲಿ ಸಂಸ್ಕರಣ ಮಾಡುವ ಘಟಕಗಳ ನಿರ್ಮಾಣ, ಗ್ರಾ.ಪಂ ಕಛೇರಿ ಕಲಾಪ ಹಾಗೂ ವಿವಿಧ ಸಭಾ ಕಲಾಪಗಳ ನೇರ ಪ್ರಸಾರದ ಮೂಲ ಸೌಕರ್ಯ ಕಾರ್‍ಯಕ್ರಮ, ಗ್ರಾಮ ದೈವ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ, ಗಟ್ಟಮನೆ ಮಸೀದಿಗೆ ಕಟ್ಟಡ ಜೀರ್ಣೋದ್ಧಾರ ಇವಿಷ್ಟು ಅಭಿವೃದ್ಧಿ ಕಾರ್‍ಯಕ್ರಮಗಳು ಗ್ರಾಮ ವಿಕಾಸದಲ್ಲಿ ನಡೆಯಲಿದೆ. ಇಲ್ಲಿ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರಕ್ಕೆ 3 ಲಕ್ಷ, ಗಟ್ಟಮನೆ ಮನೀದಿ ಕಟ್ಟಡ ಜೀರ್ಣೋದ್ಧಾರಕ್ಕೆ 1.5 ಲಕ್ಷ, ಕಛೇರಿ ಕಲಾಪ, ಸಭಾ ಕಲಾಪ ನೇರ ಪ್ರಸಾರಕ್ಕೆ 1.5 ಲಕ್ಷ ರುಪಾಯಿ ಅನುದಾನ ಇಡಲಾಗಿದೆ. ಸೋಲಾರ್ ಬೀದಿ ದೀಪ ಅಳವಡಿಕೆ ಒಟ್ಟು 2 ಲಕ್ಷ 25 ಸಾವಿರ ಅನುದಾನ ಇಡಲಾಗಿದ್ದು, ದರ್ಮಲೆಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ 7.5 ಲಕ್ಷ ರುಪಾಯಿ ಇಡಲಾಗಿದೆ. ಈಗಿರುವ ಪಂಚಾಯತು ಕಟ್ಟಡದ ಮೇಲಂತಸ್ತಿನಲ್ಲಿ ಕ್ರೀಡಾ ಅಭಿವೃದ್ಧಿ ಕಟ್ಟಡ ನಿರ್ಮಾಣಕ್ಕೆ 6 ಲಕ್ಷ ರುಪಾಯಿ ಇಡಲಾಗಿದ್ದು, ಕ್ರೀಡಾ ಸಾಮಾಗ್ರಿ ಖರೀದಿಗೆ 3ಲಕ್ಷ ಇಟ್ಟಿದ್ದಾರೆ. ಮೇಲಂತಸ್ತಿನಲ್ಲಿ ಸಾರ್ವಜನಿಕ ಸಭಾಭವನ ನಿರ್ಮಾಣವಾಗಲಿದ್ದು ಬರೋಬ್ಬರಿ 9 ಲಕ್ಷ ರುಪಾಯಿ ಇದಕ್ಕೆ ಇಡಲಾಗಿದೆ. ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಒಟ್ಟು 41 ಲಕ್ಷ 25 ಸಾವಿರ ರುಪಾಯಿ ಮೀಸಲಿರಿಸಲಾಗಿದೆ.

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ ಗ್ರಾಮ ವಿಕಾಸ ಯೋಜನೆಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳಲ್ಲಿ ಮೊದಲನೆಯದಾಗಿ ರಸ್ತೆ ಕಾಂಕ್ರಿಟೀಕರಣಕ್ಕೆ ಅ.5 ರಂದು ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ತಿಂಗಳಾಡಿ ಗಾಂಧಿನಗರ ಕಾಲನಿಯಲ್ಲಿ ದೀಪ ಬೆಳಗಿಸಿ, ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕೆದಂಬಾಡಿ ಗ್ರಾಮದ ಅಭಿವೃದ್ಧಿಗಾಗಿ 75 ಲಕ್ಷ ರುಪಾಯಿ ಅನುದಾನವನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ನೀಡಿದ್ದೇನೆ. ಇದರಲ್ಲಿ ಗ್ರಾಮದ ಕೆಲವೊಂದು ಮುಖ್ಯ ಬೇಡಿಕೆಗಳು ಈಡೇರಲು ಸಾಧ್ಯವಾಗಲಿದೆ.ಮುಖ್ಯವಾಗಿ ರಸ್ತೆ ಅಭಿವೃದ್ಧಿಯಲ್ಲಿ ಕಾಲನಿಗೆ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದೇನೆ. ಇಲ್ಲಿ ಕಾಂಕ್ರೀಟ್ ರಸ್ತೆ ಆಗುವುದರಿಂದ ಗ್ರಾಮಸ್ಥರು ಮುಖ್ಯವಾಗಿ ಈ ರಸ್ತೆಯನ್ನು ಅವಲಂಬಿಸುವವರು ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕು. ಕಂಟ್ರಾಕ್ಟ್‌ದಾರರಿಗೆ ಸಹಕಾರ ನೀಡುತ್ತಾ, ಅವರು ರಸ್ತೆಗೆ ನೀರು ಹಾಕಿದ್ದರೂ ಗ್ರಾಮಸ್ಥರು ಕೂಡ ನೀರು ಹಾಕುವ ಮೂಲಕ ಇದು ನಮ್ಮ ಮನೆಯ ಕೆಲಸ ಎಂಬಂತೆ ನೋಡಿಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ. ಇದು ಎಲ್ಲರ ರಸ್ತೆ ಎಂಬುದನ್ನು ನಾವೆಲ್ಲರೂ ಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಕಾಲನಿಯ ಹಿರಿಯ ವ್ಯಕ್ತಿ ಮಾಯಿಲರವರು ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿದರು. ತಾ.ಪಂ ಕಾರ್‍ಯನಿರ್ವಹಣಾಧಿಕಾರಿ ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಮ್, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರುಗಳಾದ ಕೃಷ್ಣ ಕುಮಾರ್ ರೈ, ವಿಜಯ ಕುಮಾರ್ ರೈ ಕೋರಂಗ, ರಾಘವ ಗೌಡ ಕೆರೆಮೂಲೆ, ಲಲಿತಾ ರಾಮನಗರ, ಚಂದ್ರಾವತಿ ರೈ, ರೇವತಿ, ತಾ.ಪಂ. ಕೆಡಿಪಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ, ಎಪಿಎಂಸಿ ನಿರ್ದೇಶಕ ಮಹೇಶ್ ರೈ ಅಂಕೊತ್ತಿಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿಕ್ರಂ ರೈ ಸಾಂತ್ಯ, ಕೆದಂಬಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು, ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ, ಕೆದಂಬಾಡಿ ಸಿಎ ಬ್ಯಾಂಕ್ ನಿರ್ದೇಶಕ ಸೂರ್‍ಯಪ್ರಸನ್ನ ರೈ, ಗುತ್ತಿಗೆದಾರ ಕೆಆರ್‌ಡಿಐಎಲ್‌ನ ಸುನೀಲ್ ರೈ ಪುಡ್ಕಾಜೆ, ಗ್ರಾ.ಪಂ ಮಾಜಿ ಸದಸ್ಯ ಮೊದು ಕುಟ್ಟಿ, ಕಾಲನಿಯ ಸೋಮಯ್ಯ, ಶೀನಪ್ಪ ರೈ ಮುಂಡಾಳ, ಉಮ್ಮರ್ ಸಾರೆಪುಣಿ, ಅಬ್ದುಲ್ಲಾ ಗಟ್ಟಮನೆ, ಇಸ್ಮಾಯಿಲ್ ಖಲಂದರಿಯಾ, ಇಸುಬು ಹಾಜಿ ಕಣ್ಣೂರು, ಕಾಲನಿ ನಿವಾಸಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಅಸ್ಮಾ ಉಮ್ಮರ್ ಗಟ್ಟಮನೆಯವರು ಶಾಸಕಿಯವರಿಗೆ ಎಲೆ ಅಡಿಕೆ ನೀಡಿ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ಬೋಳೋಡಿ ಚಂದ್ರಹಾಸ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಅಜಿತ್.ಜಿ.ಕೆ ವಂದಿಸಿದರು.ಗ್ರಾ.ಪಂ ಸಿಬ್ಬಂದಿ ಜಯಂತ ಮೇರ್ಲ, ಗಣೇಶ್ ಸಹಕರಿಸಿದ್ದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.