ಕಟ್ಟತ್ತಾರು ಶಾಲೆಯಲ್ಲಿ ಸಮುದಾಯದತ್ತ ಶಾಲೆ, ವಿಶ್ವ ಕೈ ತೊಳೆಯುವ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

kattatharuಪುತ್ತೂರು: ಕಟ್ಟತ್ತಾರು ಹಿ.ಪ್ರಾ ಶಾಲೆಯಲ್ಲಿ 2016-17ನೇ ಸಾಲಿನ ಪ್ರಥಮ ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಾಗೂ ವಿಶ್ವ ಕೈ ತೊಳೆಯುವ ದಿನ ಅ.7ರಂದು ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮ್ಮರ್. ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಕೆಯ್ಯೂರು ಪ್ರೌಢಶಾಲೆಯ ನಳಿನಿಯವರು ಮಾರ್ಗದರ್ಶಿ ಶಿಕ್ಷಕರಾಗಿ ಭಾಗವಹಿಸಿದ್ದರು.ವಿಶ್ವ ಕೈ ತೊಳೆಯುವ ದಿನದ ಪ್ರಯುಕ್ತ ಕೈ ತೊಳೆಯುವ ವಿವಿಧ ಹಂತಗಳನ್ನು  ಸಹಶಿಕ್ಷಕ ಗಂಗಾಧರ ನಾಯ್ಕರವರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಮಕ್ಕಳ ಉತ್ತರ ಪತ್ರಿಕೆಗಳನ್ನು ಪೋಷಕರಿಗೆ ವಿತರಿಸಿ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಪೋಷಕರೊಂದಿಗೆ ಚರ್ಚಿಸಲಾಯಿತು. ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮ್ಮರ್. ಬಿ.ಎಂ. ಹಾಗೂ ಸದಸ್ಯ ಸತೀಶ್ ರೈ ಯವರು ತ್ರೋಬಾಲ್ ನೆಟ್ ಮತ್ತು  ಚೆಂಡನ್ನು  ಶಾಲೆಗೆ  ಕೊಡುಗೆ ನೀಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯಗುರು ತಾರಾ.ಎಸ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಇಂದಿರಾ.ಕೆ. ವಂದಿಸಿದರು. ಸಹಶಿಕ್ಷಕಿ ವಸಂತಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ನಳಿನಿ ಡಿ. ಮತ್ತು ಹರ್ಷಿತಾ ಬಿ. ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.