ಪುತ್ತೂರು ದಸರಾ ಮಹೋತ್ಸವ ಸಮಾರೋಪ-ಸನ್ಮಾನ

Puttur_Advt_NewsUnder_1
Puttur_Advt_NewsUnder_1

dasara

* ಹಿಂದೂ ಧರ್ಮ ಧಾರ್ಮಿಕ ಚಿಂತನೆಗಳ ಕೇಂದ್ರಡೀಕಯ್ಯ ಪೆರ‍್ವೋಡಿ

* 15ನೇ ವರ್ಷದ ದಸರಾಕ್ಕೆ ವಿಜೃಂಭಣೆಪ್ರೀತಂ ಪುತ್ತೂರಾಯ

* ಕಾರ‍್ಯಕ್ರಮದ ಯಶಸ್ಸಿಗೆ ಭಾಗವಹಿಸುವುದೇ ಶಕ್ತಿಚಿದಾನಂದ ಕಾಮತ್

* ದಸರಾ ಹಬ್ಬದ ಮೂಲಕ ಕಲಾವಿದರಿಗೆ ವೇದಿಕೆಜಾನು ನಾಯ್ಕ್

ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ 14ನೇ ವರ್ಷದ ಗಣಪತಿ, ಶಾರದೆ, ನವದುರ್ಗೆಯರ ಸಹಿತ ಪುತ್ತೂರು ದಸರಾ ಮಹೋತ್ಸವದ ಸಮಾರೋಪ ಸಮಾರಂಭ ಅ.12ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.

ಹಿಂದೂ ಧರ್ಮ ಧಾರ್ಮಿಕ ಚಿಂತನೆಗಳ ಕೇಂದ್ರ: ವಿಶ್ವಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಡೀಕಯ್ಯ ಪೆರ‍್ವೋಡಿಯವರು ಮಾತನಾಡಿ ಸನಾತನ ಹಿಂದೂ ಧರ್ಮ ಅನಾದಿಕಾಲದಿಂದಲೂ ಧರ್ಮ ಸಂಸ್ಕಾರಗಳಿಂದ ಕೂಡಿದ ಧರ್ಮ. ಆದರೆ ಇಂತಹ ಶ್ರೇಷ್ಠ ಧರ್ಮದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ದುಷ್ಟರನ್ನು ಸಂಹರಿಸುವ ದುರ್ಗೆಯನ್ನು ಪೂಜಿಸುವ ನಿಟ್ಟಿನಲ್ಲಿ ನವರಾತ್ರಿ ಉತ್ಸವವೂ ಸಾರ್ವಜನಿಕರಿಗಾಗಿ ನಡೆಯುತ್ತಿದೆ. ಇದು ಕೇವಲ ಆಯೋಜಕರ ಕಾರ‍್ಯಕ್ರಮವಲ್ಲ. ಭಕ್ತರು, ಸಾರ್ವಜನಿಕರು ಸೇರಿಕೊಳ್ಳಬೇಕು ಎಂದರು.

೧೫ನೇ ವರ್ಷದ ದಸರಾಕ್ಕೆ ವಿಜ್ರಂಭಣೆ : ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ದಸರಾ ಹಬ್ಬದ ಸಂಚಾಲಕ ಕೆ.ಪ್ರೀತಂ ಪುತ್ತೂರಾಯರವರು ಮಾತನಾಡಿ ೧೪ ವರ್ಷಗಳ ಕಾಲ ಅತ್ಯಂತ ಭಕ್ತಿ ಭಾವದೊಂದಿಗೆ ಗಣಪತಿ, ಶಾರದೆ, ಸಹಿತ ನವದುರ್ಗೆಯರ ಆರಾಧನೆ ಉತ್ತಮ ರೀತಿಯಲ್ಲಿ ಮುಂದುವರಿದಿದೆ. ರಾಜ್ಯದಲ್ಲಿ ಕುದ್ರೋಳಿ ಬಳಿಕ ಪುತ್ತೂರಿನಲ್ಲೇ ನವದುರ್ಗೆಯರಿಗೆ ಆರಾಧನೆ ಸಲ್ಲುತ್ತದೆ. ಜೊತೆಗೆ ಪುತ್ತೂರಿನ ಜನತೆ ನೀಡಿದ ಸಹಕಾರದೊಂದಿಗೆ ಊರಿನ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೧೩ ದಿನ ನಿತ್ಯ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮ ನೀಡಲಾಗಿದೆ. ಮುಂದಿನ ವರ್ಷ ೧೫ನೇ ವರ್ಷದ ದಸರಾ ಸಂಭ್ರಮವನ್ನು ಅದ್ಧೂರಿಯಿಂದ ನಡೆಸಲು ಸಾರ್ವಜನಿಕರ ಸಹಕಾರಕ್ಕಾಗಿ ವಿನಂತಿಸಿದರು.

ಕಾರ‍್ಯಕ್ರಮದ ಯಶಸ್ಸಿಗೆ ಭಾಗವಹಿಸುವುದೇ ದೊಡ್ಡ ಶಕ್ತಿಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡುರವರು ಮಾತನಾಡಿ ಮೈಸೂರು, ಮಡಿಕೇರಿ, ಮಂಗಳೂರಿನಲ್ಲಿ ಅದ್ಧೂರಿಯ ದಸರಾ ನಡೆಯುತ್ತದೆ. ಪುತ್ತೂರು ದಸರಾವನ್ನು ಎಷ್ಟು ಮಂದಿ ಸ್ವೀಕರಿಸಿದ್ದಾರೆ ಎಂಬುದನ್ನು ಊರಿನ  ಜನ ತಿಳಿದು ಕೊಳ್ಳಬೇಕು. ಈ ನಿಟ್ಟಿನಲ್ಲಿ ಊರಿನ ಕಾರ‍್ಯಕ್ರಮಕ್ಕೆ ಆರ್ಥಿಕ ಸಹಕಾರಕ್ಕಿಂತ ಭಾಗವಹಿಸುವುದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ದೊಡ್ಡ ಶಕ್ತಿ ನೀಡಬೇಕು ಎಂದು ಹೇಳಿದರಲ್ಲದೆ ಮುಂದೆ ಪುತ್ತೂರು ದಸರಾಕ್ಕೂ ಸರಕಾರದ ಆರ್ಥಿಕ ಸಹಕಾರ ಸಿಗುವಂತಾಗಲಿ ಎಂದರು.

ದಸರಾ ಹಬ್ಬದ ಮೂಲಕ ಕಲಾವಿದರಿಗೆ ವೇದಿಕೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಾನು ನಾಯ್ಕರವರು ಮಾತನಾಡಿ ಪುತ್ತೂರು ದಸರಾ ಹಬ್ಬ ಊರಿನ ಕಲಾವಿದರಿಗೆ ಹೆಚ್ಚು ವೇದಿಕೆ ನೀಡಿರುವುದು ಔಚಿತ್ಯ ಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಊರಿನ ಕಲಾವಿದರ ಬೆಳವಣಿಗೆಗೆ ಪುತ್ತೂರು ದಸರಾವೂ ಒಂದು ಕಾರಣವಾಗಿದೆ ಎಂದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಯನಾ ರೈ ಶುಭ ಹಾರೈಸಿದರು. ತನ್ವಿತಾ ಶೆಟ್ಟಿ ಪ್ರಾರ್ಥಿಸಿ, ದೇವಳದ ಬಾಲಸುಬ್ರಹ್ಮಣ್ಯ ಭಟ್ ಅತಿಥಿಗಳನ್ನು ಗೌರವಿಸಿದರು. ಪತ್ರಕರ್ತ ಲೋಕೇಶ್ ಬನ್ನೂರು ವಂದಿಸಿದರು. ನಗರಸಭಾ ಸದಸ್ಯ ರಾಜೇಶ್ ಬನ್ನೂರು ಕಾರ‍್ಯಕ್ರಮ ನಿರೂಪಿಸಿದರು. ಸಭಾಕಾರ‍್ಯಕ್ರಮದ ಬಳಿಕ ಬೊಳುವಾರು ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಬಾರಿಸು ಕನ್ನಡ ಡಿಂಡಿಮವ ಕಾರ‍್ಯಕ್ರಮ ನಡೆಯಿತು. ಸಭಾಕಾರ‍್ಯಕ್ರಮದ ಪ್ರಾರಂಭದಲ್ಲಿ ಒಡಿಯೂರು ವಜ್ರಮಾತಾ ಮಹಿಳಾ ತಂಡದಿಂದ ಭಜನಾ ಸ್ಪರ್ಧೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

ಇಂದು ಚಂಡಿಕಾ ಹವನ- ಶೋಭಾಯಾತ್ರೆ; ಪುತ್ತೂರು ದಸರಾ ಮಹೋತ್ಸವದ ಕೊನೆಯ ದಿನವಾದ ಅ.೧೩ರಂದು ಬೆಳಿಗ್ಗೆ ಚಂಡಿಕಾ ಹವನ ನಡೆಯಲಿದೆ. ಸಂಜೆ ಗಣಪತಿ, ಶಾರದೆ ಸಹಿತ ನವದುರ್ಗೆಯರ ವಿಗ್ರಹದ ಶೋಭಾಯಾತ್ರೆ ನಡೆಯಲಿದೆ. ಉದ್ಯಮಿ ಅಶೋಕ್ ರೈ ಕೋಡಿಂಬಾಡಿ ಶೋಭಾಯಾತ್ರೆಯನ್ನು ಉದ್ಘಾಟಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.