ಬಂಟರ ಯಾನೆ ನಾಡವರ ಮಾತೃಸಂಘ ಕೇಂದ್ರ ಕಾರ‍್ಯಕಾರಿ ಸಮಿತಿ; ಪುತ್ತೂರಿನಿಂದ 8 ಮಂದಿ ಅವಿರೋಧ ಆಯ್ಕೆ

Puttur_Advt_NewsUnder_1
Puttur_Advt_NewsUnder_1

banta

ಪುತ್ತೂರು: ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಕೇಂದ್ರ ಕಾರ‍್ಯಕಾರಿ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಪುತ್ತೂರಿನಿಂದ ಕಾವು ಹೇಮನಾಥ ಶೆಟ್ಟಿ, ಸವಣೂರು ಸೀತಾರಾಮ ರೈ, ದಯಾನಂದ ರೈ ಮನವಳಿಕೆಗುತ್ತು, ಚಿಕ್ಕಪ್ಪ ನೈಕ್ ಅರಿಯಡ್ಕ, ಎನ್.ಚಂದ್ರಹಾಸ್ ಶೆಟ್ಟಿ, ಜಯಪ್ರಕಾಶ್ ರೈ ನೂಜಿಬೈಲು, ಅಜಯ್ ಆಳ್ವ ಬಳ್ಳಮಜಲು ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಮಲ್ಲಿಕಾ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ನಾಮಪತ್ರ ಸಲ್ಲಿಸಿದವರು: ಕಾವು ಹೇಮನಾಥ ಶೆಟ್ಟಿ, ಸವಣೂರು ಸೀತಾರಾಮ ರೈ, ದಯಾನಂದ ರೈ ಮನವಳಿಕೆಗುತ್ತು, ಚಿಕ್ಕಪ್ಪ ನಾಕ್ ಅರಿಯಡ್ಕ, ಚಂದ್ರಹಾಸ್ ಶೆಟ್ಟಿ, ಜಯಪ್ರಕಾಶ್ ರೈ ನೂಜಿಬೈಲು, ಅಜಯ್ ಆಳ್ವ ಬಳ್ಳಮಜಲು, ಕರುಣಾಕರ ರೈ ದೇರ್ಲ, ಕೃಷ್ಣ ಪ್ರಸಾದ್ ಆಳ್ವ, ಎಸ್.ಬಿ.ಜಯರಾಮ ರೈ, ವಸಂತ್ ಕುಮಾರ್ ರೈ, ಶ್ರೀಧರ್ ರೈ, ಜಗಜೀವನ್‌ದಾಸ್ ರೈ, ನಿರಂಜನ್ ರೈ ಮಠಂತಬೆಟ್ಟು, ರಾಕೇಶ್ ರೈ ಕೆಡೆಂಜಿ, ಜೈರಾಜ್ ಭಂಡಾರಿ, ಮಹೇಶ್ ರೈ ಅಂಕೊತ್ತಿಮಾರ್, ಚನಿಲ ತಿಮ್ಮಪ್ಪ ಶೆಟ್ಟಿ ಹಾಗೂ ಮಹಿಳಾ ಮೀಸಲು ಸ್ಥಾನದಿಂದ ಮಲ್ಲಿಕಾ ಪ್ರಸಾದ್ ಮತ್ತು ಹರಿಣಾಕ್ಷಿ ಜೆ. ಶೆಟ್ಟಿ ಸೇರಿದಂತೆ 8 ಸ್ಥಾನಗಳಿಗೆ 20 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 10 ಮಂದಿ ನಾಮಪತ್ರವನ್ನು ವಾಪಾಸು ತೆಗೆದುಕೊಂಡಿದ್ದು, ಇಬ್ಬರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಅ.11 ರಂದು ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿತ್ತು.

ಆಯ್ಕೆಯಾದವರ ಪರಿಚಯ: ಕಾವು ಹೇಮನಾಥ ಶೆಟ್ಟಿಯವರು ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿಯಾಗಿದ್ದು, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾಗಿದ್ದಾರೆ. ಸವಣೂರು ಸೀತಾರಾಮ ರೈಯವರು ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿದ್ದಾರೆ. ದಯಾನಂದ ರೈ ಮನವಳಿಕೆಗುತ್ತುರವರು ಪ್ರಸ್ತುತ ಪುತ್ತೂರು ಬಂಟರ ಸಂಘದ ಅಧ್ಯಕ್ಷರಾಗಿದ್ದು, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾಗಿದ್ದಾರೆ. ಅರಿಯಡ್ಕ ಚಿಕ್ಕಪ್ಪ ನಾಕ್ರವರು ಉದ್ಯಮಿಯಾಗಿದ್ದು ಮಯೂರ ಇನ್‌ಲ್ಯಾಂಡ್‌ನ ಮಾಲಕರಾಗಿದ್ದಾರೆ. ಎನ್. ಚಂದ್ರಹಾಸ ಶೆಟ್ಟಿಯವರು ಉದ್ಯಮಿಯಾಗಿದ್ದು, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿಯ ಅಧ್ಯಕ್ಷರಾಗಿದ್ದಾರೆ. ಜಯಪ್ರಕಾಶ್ ರೈ ನೂಜಿಬೈಲುರವರು ಪುತ್ತೂರು ತಾಲೂಕು ಒಡಿಯೂರು ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಚರಾಗಿದ್ದಾರೆ. ಅಜಯ್ ಆಳ್ವರವರು ಉದ್ಯಮಿಯಾಗಿದ್ದು, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಮಲ್ಲಿಕಾ ಪ್ರಸಾದ್ರವರು ಪುತ್ತೂರಿನ ಮಾಜಿ ಶಾಸಕರು, ತಾಲೂಕು ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷರು.  ಚುನಾವಣಾಧಿಕಾಯಾಗಿ ಶಿವರಾಮ ಆಳ್ವ ಬಳ್ಳಮಜಲು ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.