ಭರತನಾಟ್ಯ: ಅನನ್ಯಾ ರೈ ರಾಜ್ಯಕ್ಕೆ ಪ್ರಥಮ

Puttur_Advt_NewsUnder_1
Puttur_Advt_NewsUnder_1

ananyaಪುತ್ತೂರು: ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠದ ಆಶ್ರಯದಲ್ಲಿ ಅ.೫ರಿಂದ ೭ರವರೆಗೆ ನಡೆದ ರಾಜ್ಯ ಮಟ್ಟದ ‘ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ೨೦೧೬-೧೭’ ಸ್ಪರ್ಧೆಯ ಭರತನಾಟ್ಯ ವಿಭಾಗದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮಂಗಳೂರು ಜೆಪ್ಪುವಿನ ಸಂತ ಜೆರೋಸಾ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಎನ್.ಆರ್. ಅನನ್ಯಾ ರೈ ಪ್ರಥಮ ಬಹುಮಾನ ಪಡೆದಿದ್ದಾರೆ.

ಭರತನಾಟ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಕೇಂದ್ರ ಸರಕಾರದ ಸಿಸಿಆರ್‌ಟಿ ಶಿಷ್ಯ ವೇತನ ವನ್ನು ಪಡೆಯುತ್ತಿರುವ ಇವರು ನೃತ್ಯ ವಿದುಷಿ ಜ್ಯೋತಿ ಪುರುಷೋತ್ತಮ ಮತ್ತು ವಿದ್ವಾನ್ ಬಾಲಕೃಷ್ಣ ಮಂಜೇ ಶ್ವರರವರ ಶಿಷ್ಯೆ.

ಜಿಲ್ಲಾ, ರಾಜ್ಯ ಹಾಗೂ ಭರತನಾಟ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಬಹುಮಾನಗಳನ್ನು ಪಡೆದ ಪ್ರತಿಭಾ ನ್ವಿತ ವಿದ್ಯಾರ್ಥಿನಿಯಾಗಿರುವ ಇವರು ನುಳಿಯಾಲು ರಾಧಾಕೃಷ್ಣ ರೈ ಮತ್ತು ಲತಾ ಆರ್.ಕೆ.ರವರ ಪುತ್ರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.