ತಾಲೂಕು ಕೆ.ಡಿ.ಪಿ ಸದಸ್ಯರಾಗಿ ಅಶೋಕ್ ಸಂಪ್ಯ ನಾಮನಿರ್ದೇಶನ

Puttur_Advt_NewsUnder_1
Puttur_Advt_NewsUnder_1

ashok-sampya

ಪುತ್ತೂರು: ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಕೆ.ಡಿ.ಪಿ. ಸದಸ್ಯರಾಗಿ ಅಶೋಕ್ ಸಂಪ್ಯ ಅವರನ್ನು ಸರಕಾರ ನಾಮ ನಿರ್ದೇಶನ ಮಾಡಿದೆ.

ಯುವ ವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿಯಾಗಿ, ಎನ್.ಎಸ್.ಯು.ಐ ಜಿಲ್ಲಾ ಉಪಾಧ್ಯಕ್ಷರಾಗಿ, ಕುಂಬ್ರ ಜೇಸಿಸ್ ಕಾರ್ಯದರ್ಶಿಯಾಗಿ, ಆರ್ಯಾಪು ಪಂಚಾಯತ್ ಸದಸ್ಯರಾಗಿ, ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ, ಆರ್ಯಾಪು ಕಂಬಳತ್ತಡ್ಡ ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಬಿಲ್ಲವ  ವಿದ್ಯಾರ್ಥಿ  ಸಂಘದ ಅಧ್ಯಕ್ಷರಾಗಿ, ವಿವೇಕಾನಂದ ತಾಂತ್ರಿಕ  ಕಾಲೇಜು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ದುಡಿದಿರುವ ಅಶೋಕ್  ಪ್ರಸ್ತುತ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಆರ್ಯಾಪು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.  ಇವರು ಆರ್ಯಾಪು ದಿ.ಮಾಯಿಲಪ್ಪ ಪೂಜಾರಿ-ನೀಲಮ್ಮ ದಂಪತಿಯ ಪುತ್ರ

ಈ ಹಿಂದೆ ನಾಮನಿರ್ದೇಶನ ಮಾಡಲಾಗಿದ್ದ ಹಿಂದುಳಿದ ವರ್ಗ ಎ ಸದಸ್ಯ ಸುರೇಶ್ ಕುಮಾರ್ ಸೊರಕೆ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅಶೋಕ್ ಸಂಪ್ಯ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.