ಮೌಲ್ಯ ಜೀವನದ ‘ಅಲಂಕಾರ’ಕ್ಕೆ ಸಿದ್ಧವಾದ ಮಕ್ಕಳು; ಪ್ರಿಯದರ್ಶಿನಿಯಲ್ಲಿ ಮಕ್ಕಳ ಸನಿವಾಸ ಶಿಬಿರಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1

priya1 priya12

ಊಟ ಉಪಚಾರ

ಶಾಲೆಯ ಆವರಣ ಬರುತ್ತಿದ್ದಂತೆ ಬೆಲ್ಲ ನೀರಿನಿಂದ ಸಾಂಪ್ರದಾಯಿಕ ಉಪಚಾರ, ಪನ್ನೀರ ಸೇವೆ, ಸಮಾರಂಭದ ಬಳಿಕ ಪಾಯಸದೂಟ

ಹಳ್ಳಿಯ ಸೊಗಡಿನ ’ಅಲಂಕಾರ’

ಮುನ್ನುಡಿ ಸಮಾರಂಭಕ್ಕೆ ಅಚ್ಚುಕಟ್ಟಿನ ಹಳ್ಳಿಯ ಸೊಗಡಿನ ವೇದಿಕೆ ನಿರ್ಮಿಸಲಾಗಿತ್ತು. ಶಿಕ್ಷಕಿಯರೇ ನಿರ್ಮಿಸಿದ ತೆಂಗಿನ ‘ತಟ್ಟಿ’ಯ ಹಸಿರ ವೇದಿಕೆ, ಬೆಳಕಿನ ವೈಭವ ನೀಡಿದ ಗೂಡುದೀಪಗಳು, ಬಿದಿರಿನ ಕಮಾನುಗಳಲ್ಲಿ ಕರಕುಶಲ ಕಲೆಯ ಅನಾವರಣ, ಬಣ್ಣ ಬಣ್ಣದ ತಾಳೆಮರದ ಗರಿಯ ಚಿತ್ತಾರ, ಸೀರೆ ತೋರಣ, ಶಾಲಾಗಂಬಗಳಲ್ಲಿ ಐತಿಹಾಸಿಕ ವ್ಯಕ್ತಿಗಳ, ಕವಿಗಳ ಭಾವಚಿತ್ರಗಳು ಶಿಬಿರಕ್ಕೆ ಅರ್ಥ ನೀಡುತ್ತಿವೆ.

ಒಟ್ಟು ಶಿಬಿರಾರ್ಥಿಗಳು– 53

ಯೋಗಾಭ್ಯಾಸ-ವ್ಯಾಯಾಮ

3-ಮಾತುಕತೆಯ (ಕಾರ‍್ಯಾಗಾರ) ಅವಧಿಗಳು

ವಿವಿಧ ಕಲಾ ಕಾರ‍್ಯಾಗಾರಗಳು

ಭಜನೆ

ಶಾರೀರಿಕ, ಬೌದ್ಧಿಕ ಆಟಗಳು

ಸಾಂಸ್ಕೃತಿಕ ಅಭ್ಯಾಸಗಳು

ಮುನ್ನುಡಿಯ ಮುನ್ನ….

ಬೇಲಿ ದಾಟಿ ಒಳಬಂದಾಗ..

.11: ಸಂಜೆ 7.30: ಒಮ್ಮಿಂದೊಮ್ಮೆಲೆ ಬೆಳಕು ಆರಿತು. ವೇದಿಕೆಯಲ್ಲಿ ಶಿಬಿರಾರ್ಥಿಗಳು ವಿದ್ಯಾಭಾರತಿ ಪ್ರಾರ್ಥನೆ ಆರಂಭಿಸಿದರು. ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಗಣ್ಯರು ಬಿದಿರಿನ ಮುಳ್ಳಿನ ಬೇಲಿಯನ್ನು ತೆರೆದು ಒಳಬಂದರು. ಒಳಗೆ ಬಂದಂತೆ ಬಿದಿರಿನ ಕಮಾನಿನಲ್ಲಿ ಹಳೆಯ ಲಾಟೀನು ಗಣ್ಯರಿಗೆ ಮಂದ ಬೆಳಕಿನ ಹಾದಿಯ ತೋರಿಸಿತು. ಮುಂದೆ ಬಂದಂತೆ ಸಣ್ಣ ತೊರೆ. ಅಡ್ಡಲಾಗಿ ಹಾಕಿದ್ದ ಬಿದಿರಿನ ಕಾಲು ಸಂಕದ ಮೂಲಕ ಸಾಗಬೇಕಾಯಿತು. ತೊರೆಯ ನೀರಿನಲ್ಲಿ ಮಕ್ಕಳ ದೋಣಿಗಳನ್ನು ತೇಲಿಬಿಟ್ಟ ಅತಿಥಿಗಳಿಗೆ ಹಳ್ಳಿಯ ‘ತಡಮೆ’ ಎದುರಾಯಿತು. ಕಷ್ಟ-ಕಲ್ಲು-ಮುಳ್ಳುಗಳನ್ನು ದಾಟಿಬಂದು ದೀಪದ ಬೆಳಕಿನತ್ತ ಸಾಗಿಬಂದವರೇ ಭತ್ತದ ರಂಗೋಲಿಯಲ್ಲಿ ನಿರ್ಮಿಸಿದ ’ಬಾಳೆರಥ’ ದ ಹಣತೆಗಳಿಗೆ ದೀಪ ಹಚ್ಚಿದಾಗ ಮತ್ತಷ್ಟು ಮಂದಿಗೆ ಬೆಳಕು ಪಸರಿಸಿತು. ಮುಂದುವರಿದ ಎಲ್ಲರೂ ಓಂಕಾರ, ತಾಯಿ ಭಾರತಿ ಹಾಗೂ ಸರಸ್ವತಿ ದೇವಿಗೆ ಪುಷ್ಪಾರ್ಚನೆ ಮಾಡಿದಾಗ ಶಿಬಿರದ ರಾಷ್ಟ್ರೀಯತೆಯ ಪರಿಕಲ್ಪನೆಯ ಬೆಳಕಿನ ಕಿರಣ ಮೂಡಿತು. ಅಲ್ಲಿಂದ ತೆರಳಿದ ಗಣ್ಯರು ಕೊಠಡಿಯೊಂದರತ್ತ ಸಾಗಿದರು. ಹಣತೆಯ ಬೆಳಕಿನಲ್ಲಿ ಮಂದವಾಗಿ ಕಾಣುತ್ತಿದ್ದ ಕೊಠಡಿಯಲ್ಲಿ ದೀಪ ಪ್ರಜ್ವಲನೆಗೊಂಡಾಗ ಮಂಚಿ ಮಕ್ಕಳ ‘ಕೊಲಾಜ್’ ಚಿತ್ರ ಪಯಣದ ಕೊಲಾಜ್ ದೃಶ್ಯಾವಳಿಗಳು ಕಂಡವು. ಅಲ್ಲಿಂದ ಅತಿಥಿಗಳು ಹಸಿರ ತಟ್ಟಿಯ ವೇದಿಕೆಯತ್ತ ನಡೆದರು.

ಅ.12ರಂದು ನಡೆಯಿತು ಇವಿಷ್ಟು..

*ಬೆಳಿಗ್ಗೆ– ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ  ಕೃಷ್ಣಪ್ರಸಾದ್‌ರವರಿಂದ ‘ಸಂಸ್ಕೃತಿ’ ಮಾತು

*ರಮೇಶ್ ಉಳಯರಿಂದ ಪದ್ಯ-ಓದು

*ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ಮುಖ್ಯಸ್ಥ ರಾಕೇಶ್  ಕಮ್ಮಾಜೆಯವರಿಂದ ‘ಓದು’ ಮಾತು

*ಮಧ್ಯಾಹ್ನ – ಶಿಕ್ಷಕಿಯರಿಂದ ಕ್ರಾಫ್ಟ್ ಕಾರ‍್ಯಾಗಾರ

*ಸಂಜೆ– ಶಾರೀರಿಕ, ಬೌದ್ಧಿಕ ಆಟಗಳು

*ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಮುಖ್ಯಗುರು ಅವಿನಾಶ್    ಕೊಡೆಂಕಿರಿಯವರಿಂದ ‘ಆಚರಣೆ’ ಮಾತು

*ರಮೇಶ್ ಉಳಯ, ರಾಮನಾಯ್ಕ ಕೊಜಪ್ಪೆಯವರಿಂದ ಗಮಕ ವಾಚನ

*ಪ್ರಹಸನ ಅಭ್ಯಾಸ

ಇಂದು ನಡೆಯಲಿದೆ ಇವಿಷ್ಟು..

*ವಿವೇಕಾನಂದ ಪಿಯು ಕಾಲೇಜಿನ ಅಧ್ಯಕ್ಷ ರವೀಂದ್ರ ರವರಿಂದ ’ದೇಶ  ಮತ್ತು ನಾನು’ ಮಾರ್ಗದರ್ಶನ

*ಮಣಿಪಾಲ ಎಂಐಟಿ ಸಿವಿಲ್ ವಿಭಾಗದ ಮುಖ್ಯಸ್ಥ ನಾರಾಯಣ  ಶೆಣೈಯವರಿಂದ ‘ನೀರು’ ಮಾಹಿತಿ-ಪ್ರಾತ್ಯಕ್ಷತೆ

*ನಾ. ಕಾರಂತ ಪೆರಾಜೆಯವರಿಂದ ’ಆಹಾರ’ ಮಾತು

*ಜೇಸಿ ತರಬೇತುದಾರ ಕೃಷ್ಣಮೋಹನ್ ರವರಿಂದ ’ಸಮಯಪಾಲನೆ’ ಮಾತು

*ವಿವಿಧ ಕಲಾ ಕಾರ‍್ಯಾಗಾರಗಳು

 

ವಿದ್ಯೆ ಎಂಬುದು ಯುನಿವರ್ಸಿಟಿಗಳು ಕೊಡುವ ಸರ್ಟಿಫಿಕೇಟ್‌ಗಳಲ್ಲ, ಸತ್ಯ, ಬ್ರಹ್ಮಚರ್ಯೆ, ವ್ಯಾಯಾಮ, ವಿದ್ಯೆ, ದೇಶಭಕ್ತಿ ಮತ್ತು ಆತ್ಮತ್ಯಾಗ ಇವೆಲ್ಲದರ ಸಮ್ಮಿಳಿತ ತಿಳುವಳಿಕೆ ಮೂಡುವುದಾಗಿದೆ’ – ಆದರ್ಶ ಗೋಖಲೆ

 

ತಾಯಿಯ ಮಡಿಲಲ್ಲಿ ಮಗು ವಿದೇಶಿಗನಾಗಿ ವಿದೇಶಿ ಸಂಸ್ಕೃತಿಯತ್ತ ವಾಲುತ್ತಿರುವ ಈ ಕಾಲ ಘಟ್ಟದಲ್ಲಿ ರಜೆಯ ಮಜವನ್ನು ಕಾಲಹರಣ ಮಾಡದೆ ಸನಾತನ ಸಂಸ್ಕೃತಿಯ ಮೂಲೋದ್ಧೇಶವನ್ನು ಅರಿತುಕೊಂಡು ತಮ್ಮತನವನ್ನು ಪ್ರದರ್ಶಿಸಿ ನೈತಿಕ ಜೀವನಕ್ಕೆ ತಳಹದಿ ಹಾಕುವ ಈ ಪ್ರಯತ್ನವೇ ಅಲಂಕಾರ. – ರಾಜೇಶ್ ನೆಲ್ಲಿತ್ತಡ್ಕ ಮುಖ್ಯಗುರುಗಳು

ಮೌಲ್ಯಗಳ ಅರಿವುನೊಂದಿಗೆ ನೈತಿಕತೆಯ ತಳಹದಿಯಲ್ಲಿ ಬದುಕುವ ಕಲೆ ನೀಡಿರುವ ಭಾರತೀಯ ಸಂಸ್ಕೃತಿ ಎಳೆಯ ಮಕ್ಕಳಲ್ಲಿ ಭದ್ರವಾಗಿ ನೆಲೆಯೂರಿ ಆ ಮೂಲಕ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ’ಅಲಂಕಾರ’ ನಾಂದಿ ಹಾಡಲಿದೆ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಂiiಲ್ಲಿ ೪ ದಿನಗಳ ಕಾಲ ನಡೆಯಲಿರುವ ಜಿಲ್ಲಾಮಟ್ಟದ ಮಕ್ಕಳ ಸನಿವಾಸ ಶಿಬಿರ ’ಅಲಂಕಾರ’ಕ್ಕೆ ಅ. ೧೧ರಂದು ಸಂಜೆ ನಡೆದ ಮುನ್ನುಡಿಯ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣಗೈದರು. ಮಕ್ಕಳು ತಮ್ಮ ಜ್ಞಾನೇಂದ್ರಿಯದ ಮೂಲಕ ಮೌಲ್ಯಗಳನ್ನು ಅರಿತುಕೊಂಡಾಗ ಮಾತ್ರ ಅದು ಸಮಾಜದಲ್ಲಿ ಅನುಷ್ಠಾನಕ್ಕೆ ಬರಲು ಸಾಧ್ಯ. ಹೊರಗಿನ ಅಲಂಕಾರ ಶಾಶ್ವತವಾದುದಲ್ಲ. ವ್ಯಕ್ತಿಯ ಒಳಗಿನ ಅಲಂಕಾರ ಶೃಂಗಾರಗೊಂಡಾಗಲೇ ನಿಜವಾದ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಬಲ್ಲ. ಈ ದಿಶೆಯಲ್ಲಿ ’ಅಲಂಕಾರ’ ಮಕ್ಕಳಿಗೂ ಪೋಷಕರಿಗೂ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಸಭಾಧ್ಯಕ್ಷತೆ ವಹಿಸಿದ್ದರು.

ಮೌಲ್ಯಯುತ ಶಿಕ್ಷಣವೇ ದೇಶದ ಪ್ರಾಣಶಕ್ತಿ – ಸತೀಶ್ ರೈ

ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್ ರೈ ರವರು ಶಿಬಿರವನ್ನು ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಮುನ್ನುಡಿ ಮಾತುಗಳನ್ನಾಡಿದರು. ನೈತಿಕ ಜೀವನಕ್ಕೆ ತಳಪಾಯ ನೀಡುವ ಮೌಲ್ಯ ಶಿಕ್ಷಣವನ್ನು ವಿದ್ಯಾಭಾರತಿ ಅಧೀನದಲ್ಲಿ ಬರುವ ಸಂಸ್ಥೆಗಳು ನೀಡುತ್ತಿವೆ. ಇಂದಿನ ಅಪಾಯಕಾರಿ ಯುವಶಕ್ತಿಯೆಡೆಗೆ ಮಕ್ಕಳು ಹಾದಿಹಿಡಿಯದಂತೆ ಎಳೆಯದಿಂದಲೇ ಮೌಲ್ಯಗಳನ್ನು ತುಂಬುತ್ತಾ ಹೋದರೆ ಸಮಾಜದಲ್ಲಿ ಓರ್ವ ಪರಿಪೂರ್ಣ ವ್ಯಕ್ತಿ ಎಂದು ಕರೆಸಿಕೊಳ್ಳುತ್ತಾನೆ. ದೇಶ ನಿರ್ಮಾಣದಲ್ಲೂ ಮೌಲ್ಯಶಿಕ್ಷಣವೇ ಪ್ರಾಣ ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಬಿ.ಜಿ. ನಾಯ್ಕ್, ಕ್ಯಾಂಪ್ಕೋ ಎಜಿಎಂ ರವೀಶ ಎಂ. ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಶಶಿಕುಮಾರ್ ಬೈಲಾಡಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಪಾಶಂಕರ್, ಆಡಳಿತ ಮಂಡಳಿ ಸದಸ್ಯ ಡಾ. ಸತೀಶ್ ರಾವ್, ಕರುಣಾಕರ ಶೆಟ್ಟಿ ಕೊಮ್ಮಂಡ, ಪ್ರಕಾಶ್ ರೈ ಬೈಲಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಣಾಧಿಕಾರಿ ರಘುರಾಜ್ ಉಬರಡ್ಕ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಿಂದ ವಿದ್ಯಾಭಾರತಿ ಪ್ರಾರ್ಥನೆ ಜರಗಿತು. ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ಸಹಶಿಕ್ಷಕ ರಮೇಶ್ ಬಳ್ಳ ವಂದಿಸಿದರು. ಸಹಶಿಕ್ಷಕ, ಶಿಬಿರಾಧಿಕಾರಿ ಪ್ರಶಾಂತ್ ಹಾಗೂ ಸುಮನ ಕಾರ‍್ಯಕ್ರಮ ನಿರೂಪಿಸಿದರು. ಶಿವಕುಮಾರ್ ಬಲ್ಲಾಳ್, ರಮೇಶ್ ಉಳಯ, ಜಗನ್ನಾಥ ಶೆಟ್ಟಿ ಕೊಮ್ಮಂಡ, ಮುರಳೀ ಎಚ್. ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.