ಹೆಜ್ಜೇನು ದಾಳಿ: ನಾಲ್ವರಿಗೆ ಗಾಯ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಹೆಜ್ಜೇನು ದಾಳಿ ನಡೆಸಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ವರನ್ನು ಗಾಯಗೊಳಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನೇಜಿಕಾರುವಿನ ಹಳೆಮಾರು ಎಂಬಲ್ಲಿ ಅ.12ರಂದು ಬೆಳಗ್ಗೆ ನಡೆದಿದೆ.

ಅಂಬೊಟ್ಟು ನಿವಾಸಿಗಳಾದ ಜೈನಾಬು (೩೦ವ), ಸಫಿಯಾ (೩೨ವ), ಸಫೀಲಾ (೧೩ವ), ಸುರ್ಮಿ (೮ವ) ಗಾಯಗೊಂಡವರು. ಅ.೧೨ರಂದು ಇವರು ಬೆಳಗ್ಗೆ ಹಳೆಮಾರು ಬಳಿಯ ತೋಡಿಗೆ ಬಟ್ಟೆ ಒಗೆಯಲೆಂದು ತೆರಳಿದ್ದು, ಈ ಸಂದರ್ಭ ಸಮೀಪದ ಪೊದೆಯಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಏಕಾಏಕಿ ಇವರ ಮೇಲೆ ದಾಳಿ ನಡೆಸಿವೆ. ಹರಸಾಹಸ ಪಟ್ಟು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಂಡು ಬಂದ ಇವರು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.