Breaking News

ಜೆಸೀಐ ನೆಕ್ಕಿಲಾಡಿ ಘಟಕ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

13uppjci-1 13uppjci-2

ಉಪ್ಪಿನಂಗಡಿ: ಮಾನವರ ವ್ಯಕ್ತಿತ್ವ ವಿಕಸನದೊಂದಿಗೆ ಅವರಲ್ಲಿ ಸಮಾಜ ಸೇವೆಯ ಮನೋಭಾವನೆಯನ್ನು ಮೂಡಿಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರನ್ನು ನಿರ್ಮಿಸುವಲ್ಲಿ ಜೆಸಿಐ ಸಂಸ್ಥೆ ಸಹಕಾರಿಯಾಗಿದೆ ಎಂದು ಜೆಸಿಐ ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್ ತಿಳಿಸಿದರು.

34ನೇ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಸಭಾ ಭವನದಲ್ಲಿ ಅ.12ರಂದು ಜೆಸಿಐ ಉಪ್ಪಿನಂಗಡಿ ಪ್ರಾಂತ್ಯ ಇ ವಲಯ 15ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜೆಸಿಐ ನೆಕ್ಕಿಲಾಡಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸರಕಾರದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಸಂಘ -ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜೆಸಿಐ ಶ್ರಮಿಸುತ್ತಿದ್ದು, ವರ್ಷಂಪ್ರತಿ ಜೆಸಿ ಸಪ್ತಾಹದ ಮೂಲಕ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಸಮಾಜಕ್ಕೆ ಅರ್ಪಿಸುತ್ತಿದೆಯಲ್ಲದೆ, ಗ್ರಾಮೀಣ ಕ್ರೀಡೆ, ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುತ್ತಿದೆ ಎಂದರು.

ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ವಲಯ 15ರ ಪ್ರಾಂತ್ಯ ಇ ಯ ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ರೈ ಬಿ. ಮಾತನಾಡಿ, ಸಮಾಜ ಸೇವೆಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಜೆಸಿಐ ಸಂಸ್ಥೆ ಅಂತರಾಷ್ಟ್ರೀಯವಾಗಿ ಮುನ್ನಡೆಯುತ್ತಿದ್ದು, ನೆಕ್ಕಿಲಾಡಿ ಘಟಕದಿಂದಲೂ ಹಲವು ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಪಿಡಬ್ಲ್ಯೂಡಿ ಗುತ್ತಿಗೆದಾರ ರಾಧಾಕೃಷ್ಣ ನಾಯಕ್, ಲಯನ್ಸ್ ಕ್ಲಬ್‌ನ ಪುತ್ತೂರು ವಲಯಾಧ್ಯಕ್ಷೆ ಅನ್ನಪೂರ್ಣ ಎಸ್.ಕೆ. ರಾವ್ ಮಾತನಾಡಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ ಶಿವಕುಮಾರ್ ಬಾರಿತ್ತಾಯ, ಉಪಾಧ್ಯಕ್ಷರಾದ ಅಮಿತಾ ಹರೀಶ್, ನಿತೀಶ್ ಗಾಣಿಗ, ಭರತ್, ಪ್ರಶಾಂತ್ ಗಾಣಿಗ, ನಿತೀಶ್ ಶೆಟ್ಟಿ, ಕಾರ್ಯದರ್ಶಿ ವಿನೀತ್ ಶಗ್ರಿತ್ತಾಯ, ಜೊತೆ ಕಾರ್ಯದರ್ಶಿ ಗೌತಮ್ ಕೆ.ಎಸ್., ಖಜಾಂಚಿ ವೈಶಾಲಿ ಕುಂದರ್, ನಿರ್ದೇಶಕರಾದ ರಮೇಶ್, ಲೊಕೇಶ್, ಮಹೇಶ್ ಪಿ.ಕೆ. ಪದಗ್ರಹಣ ಸ್ವೀಕರಿಸಿದರು.

ಬಳಿಕ ಮಾತನಾಡಿದ ಶಿವಕುಮಾರ್ ಬಾರಿತ್ತಾಯ, ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಜೆಸಿಐ ಉಪ್ಪಿನಂಗಡಿ ಘಟಕದ ಜಯಪ್ರಕಾಶ್ ಶೆಟ್ಟಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜೇಸಿಐ ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ಶಶಿಧರ್ ನೆಕ್ಕಿಲಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ, ಹರೀಶ್ ನಾಯಕ್ ನಟ್ಟಿಬೈಲ್, ಕೇಶವ ರಂಗಾಜೆ, ಪುರುಷೋತ್ತಮ ಶೆಟ್ಟಿ, ಜನಾರ್ದನ್, ಗೋಪಾಲ ಹೆಗ್ಡೆ, ಪ್ರಕಾಶ್ ರೈ ಬೆಳ್ಳಿಪ್ಪಾಡಿ, ರಾಘವೇಂದ್ರ ನಾಯಕ್, ಸಂದೇಶ್ ನಟ್ಟಿಬೈಲ್, ಶೇಖರ ಗೌಂಡತ್ತಿಗೆ, ದುರ್ಗಾಕುಮಾರ್ ಪಾಲೆತ್ತಡಿ, ವೆಂಕಟೇಶ್ ರಾವ್, ಜಗದೀಶ್ ಶೆಟ್ಟಿ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ತೋಷಿತ್ ರೈ, ಉಮೇಶ್ ಆಚಾರ್ಯ, ಶ್ಯಾಂ ಪ್ರಸಾದ್ ಕೈಲಾರ್, ಪ್ರದೀಪ್ ಶೆಟ್ಟಿ, ಸುಂದರ ಗೌಡ ಅರ್ಬಿ, ದಯಾನಂದ, ನಿತಿನ್, ಭರತ್, ಕಾಮಾಕ್ಷಿ ಗೋಪಾಲ ಹೆಗ್ಡೆ, ಡಾ. ಗೋವಿಂದ ಪ್ರಸಾದ್ ಕಜೆ, ಹರೀಶ್ ಉಪಾಧ್ಯಾಯ, ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.

ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಜೂನಿಯರ್ ಜೇಸಿ ಅಧ್ಯಕ್ಷ ಪ್ರಶಾಂತ್ ಜೆಸಿ ವಾಣಿ ವಾಚಿಸಿದರು. ಜೆಸಿಐ ನೆಕ್ಕಿಲಾಡಿ ಘಟಕದ ಕಾರ್ಯದರ್ಶಿ ವಿನೀತ್ ಶಗ್ರಿತ್ತಾಯ ವಂದಿಸಿದರು.  ವಿಜಯಕುಮಾರ್ ಕಲ್ಲಳಿಕೆ, ಪುಷ್ಪವೇಣಿ, ಮುನೀರ್ ನಿನ್ನಿಕಲ್ಲ್, ಅತಿಥಿಗಳನ್ನು ಹೂನೀಡಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.