ನೆಲ್ಯಾಡಿ ಜೇಸಿಐನ 33ನೇ ವರ್ಷದ ಜೇಸಿ ಸಪ್ತಾಹ-2016 ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಜೇಸಿಐ, ಜೇಸಿರೆಟ್ ಹಾಗೂ ಜೂನಿಯರ್ ಜೇಸಿವಿಂಗ್, ನೆಲ್ಯಾಡಿ ಇದರ 33ನೇ ವರ್ಷದ ’ಜೇಸಿ ಸಪ್ತಾಹ-2016’ರ ಉದ್ಘಾಟನೆ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆ ಕಾರ‍್ಯಕ್ರಮ ಅ.13ರಂದು ನಡೆಯಿತು.

ಸಭಾ ಕಾರ್ಯಕ್ರಮ: ಶಾಶ್ವತ ಯೋಜನೆಗಳ ಲೋಕಾರ್ಪಣೆ ಬಳಿಕ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಜೇಸಿಐ ಇಂಡಿಯಾದ ವಲಯ 15ರ ವಲಯಾಧ್ಯಕ್ಷ ಸಂದೀಪ್ ಕುಮಾರ್‌ರವರು ದೀಪ ಬೆಳಗಿಸಿ ಜೇಸಿ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಜೇಸಿಐ ಅಧ್ಯಕ್ಷ ಮೋಹನ ವಿ.ಯವರು ಮಾತನಾಡಿ, ಅ.19ರ ತನಕ ಜೇಸಿ ಸಪ್ತಾಹ ಕಾರ‍್ಯಕ್ರಮ ನಡೆಯಲಿದ್ದು ಕ್ರೀಡೆ, ಮಾಹಿತಿ ಶಿಬಿರಗಳು ನಡೆಯಲಿವೆ. ಈ ಕಾರ‍್ಯಕ್ರಮಗಳಲ್ಲಿ ಜೇಸಿ ಕುಟುಂಬದ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡು ಜೇಸಿಐನ ಸಾಮಾಜಿಕ ಕೆಲಸಗಳನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.  ಜೇಸಿ ಸಪ್ತಾಹದ ಯೋಜನಾ ನಿರ್ದೇಶಕರೂ ಆಗಿರುವ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಸಿಐನ ವಲಯ 15 ಪ್ರಾಂತ್ಯ ಜಿಯ ವಲಯ ಉಪಾಧ್ಯಕ್ಷ ಅಶೋಕ್ ಚೂಂತಾರು, ನೆಲ್ಯಾಡಿ ಗ್ರಾ.ಪಂ.ಪಿಡಿಒ ದೇವರಾಜ್ ಎಂ., ರವರು ಶುಭಹಾರೈಸಿದರು. ದಾನಿಗಳಾದ ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಹೋಟೆಲ್ ಶ್ರೀ ಸಾಯಿಕೃಷ್ಣ ಭವನದ ಮಾಲಕ ಗಣೇಶ್ ಕೆ., ರವರನ್ನು ಕಾರ‍್ಯಕ್ರಮದಲ್ಲಿ ಗೌರವಿಸಲಾಯಿತು. ಜೇಸಿರೆಟ್ ಅಧ್ಯಕ್ಷೆ ಲೀಲಾ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹಾವೀರ ಜೈನ್ ವಂದಿಸಿದರು. ನೆಲ್ಯಾಡಿ ಸಂತ ಜಾರ್ಜ್ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರವೀಂದ್ರ ಟಿ., ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಎಲ್ಸಿ ಪಿ.ಪಿ., ಜೇಸಿವಾಣಿ ವಾಚಿಸಿದರು.

ಯೋಜನಾ ನಿರ್ದೇಶಕ ಹಾಜಿ ಇಸ್ಮಾಯಿಲ್, ನಿಕಟಪೂರ್ವಾಧ್ಯಕ್ಷ ಜೋನ್ ಪಿ.ಎಸ್., ಸದಸ್ಯರುಗಳಾದ ಪ್ರಕಾಶ್ ಕೆ.ವೈ., ಅಬ್ದುಲ್ ರಹಿಮಾನ್, ಹಾಜಿ ಇಸ್ಮಾಯಿಲ್, ಆನಂದ ಅಜಿಲ, ವಿಮಲ್ ಕುಮಾರ್,ಜನಾರ್ದನ ಟಿ., ತೋಮಸ್ ಪಿ.ಎಸ್., ಶಿವಾನಂದ ಎಸ್., ಯತೀಶ್ ಶೆಟ್ಟಿ,ಶಿವಪ್ರಕಾಶ್, ಗಣೇಶ್ ಪೂಜಾರಿ ಸಹಕರಿಸಿದರು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಸಂಚಾಲಕ ಅಬ್ರಹಾಂ ವರ್ಗೀಸ್, ನೆಲ್ಯಾಡಿ ವರ್ತಕ ಸಂಘದ ಕಾರ‍್ಯದರ್ಶಿ ಸುಬ್ರಹ್ಮಣ್ಯ ಜಿ., ನಾರಾಯಣ ಎನ್.ಬಲ್ಯ, ಚಂದ್ರಶೇಖರ ಬಾಣಜಾಲು, ಮೋಹನ ವಿ., ಮೇರಿ ಜೋನ್, ಗ್ರಾ.ಪಂ.ಸದಸ್ಯರುಗಳಾದ ಅಬ್ರಹಾಂ ಕೆ.ಪಿ., ಉಷಾ ಒ.ಕೆ., ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಾಶ್ವತ ಯೋಜನೆ ಉದ್ಘಾಟನೆ: ಶಾಶ್ವತ ಯೋಜನೆಗಳಾದ ನೆಲ್ಯಾಡಿ ಗಾಂಧಿ ಮೈದಾನದ ಬಳಿ ನಿರ್ಮಾಣಗೊಂಡ ಧ್ವಜಸ್ತಂಭವನ್ನು ಜೇಸಿಐ ಇಂಡಿಯಾದ ವಲಯ ೧೫ರ ವಲಯಾಧ್ಯಕ್ಷ ಸಂದೀಪ್ ಕುಮಾರ್ ಹಾಗೂ ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್ ಉದ್ಘಾಟಿಸಿದರು. ಬಳಿಕ ಪೆರಿಯಶಾಂತಿಯಲ್ಲಿ ಅಳವಡಿಸಲಾದ ಮಾರ್ಗದರ್ಶಿ ನಾಮಫಲಕದ ಉದ್ಘಾಟನೆಯನ್ನು ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು ಹಾಗೂ ನೆಲ್ಯಾಡಿ ಹೋಟೆಲ್ ಶ್ರೀ ಸಾಯಿಕೃಷ್ಣ ಭವನದ ಮಾಲಕ ಗಣೇಶ್ ಕೆ.,ಉದ್ಘಾಟಿಸಿದರು. ನೆಲ್ಯಾಡಿ-ಪಡುಬೆಟ್ಟು ರಸ್ತೆಯಲ್ಲಿ ಅಳವಡಿಸಲಾದ ಹುಬ್ಬು ದರ್ಪಣವನ್ನು ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಹಾಗೂ ಪಿಡಿಒ ದೇವರಾಜ್ ಎಂ.,ರವರು ಲೋಕಾರ್ಪಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.