Breaking News

ಉಪ್ಪಿನಂಗಡಿ: ಲಾರಿ ಚಾಲಕ, ಕ್ಲೀನರ್‌ಗೆ ಹಲ್ಲೆ, ಬೆದರಿಕೆ ರಿಕ್ಷಾದಲ್ಲಿ ಬಂದ ತಂಡದ ಕೃತ್ಯ-ದೂರು

Puttur_Advt_NewsUnder_1
Puttur_Advt_NewsUnder_1

 

ಲಾರಿ ದರೋಡೆ ವದಂತಿ-ಪೊಲೀಸರಿಂದ ನಿರಾಕರಣೆ

ಉಪ್ಪಿನಂಗಡಿ: ಲಾರಿಯೊಂದನ್ನು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಸಂದರ್ಭ ಅಟೋ ರಿಕ್ಷಾದಲ್ಲಿ ಬಂದ ತಂಡವೊಂದು ಲಾರಿ ಚಾಲಕ ಹಾಗೂ ಕ್ಲೀನರ್‌ನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಹಲ್ಲೆಗೆ ನಡೆಸಿ, ಲಾರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆಯೊಡ್ಡಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಲಾರಿ ಚಾಲಕ ಬಾಗಲಕೋಟೆ ನಿವಾಸಿ ತಿರುಪತಿ ಎಂಬವರು ದೂರು ನೀಡಿದ್ದು, ತಡರಾತ್ರಿ ಅಟೋ ರಿಕ್ಷಾದಲ್ಲಿ ಬಂದ ತಂಡವೊಂದು ತನ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಲಾರಿಯನ್ನು ಉರಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಗುರುವಾರ ಸಂಜೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅಟೋ ರಿಕ್ಷಾದಲ್ಲಿದ್ದವರು ೩೪ನೇ ನೆಕ್ಕಿಲಾಡಿಯವರು ಎಂದು ತಿಳಿದು ಬಂದಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

ದರೋಡೆ ವದಂತಿ: ತಡರಾತ್ರಿ ನಡೆದ ಘಟನೆ ಗುರುವಾರ ಸಂಜೆಯ ಹೊತ್ತಿಗೆ ಸಾರ್ವಜನಿಕರ ಬಾಯಲ್ಲಿ ಹರಿದಾಡತೊಡಗಿದ್ದು, ಲಾರಿಯಿಂದ ದರೋಡೆ ನಡೆಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಇದನ್ನು ಪೊಲೀಸರು ನಿರಾಕರಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಅಟೋ ರಿಕ್ಷಾದಲ್ಲಿ ಬಂದವರು ಪಾನಮತ್ತರಾಗಿದ್ದು, ಇವರಲ್ಲಿ ಓರ್ವ ರಾಷ್ಟ್ರೀಯ ಹೆದ್ದಾರಿ ಬದಿ ಮೂತ್ರ ಶಂಕೆಗೆಂದು ತೆರಳಿದ್ದಾನೆ. ಅಲ್ಲಿ ಮಂಗಳೂರಿನ ಸಂಸ್ಥೆಯೊಂದಕ್ಕೆ ಸೇರಿದ್ದ ಮೂರು ಲಾರಿಗಳನ್ನು ನಿಲ್ಲಿಸಲಾಗಿದ್ದು, ಅಲ್ಲಿಯೇ ಈತ ಮೂತ್ರ ಮಾಡಲು ಮುಂದಾದಾಗ ಇದನ್ನು ಲಾರಿ ಚಾಲಕ ಪ್ರಶ್ನಿಸಿದ್ದು, ಆಗ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಈ ಬಗ್ಗೆ ಸುದ್ದಿ ತಿಳಿದ ರಾತ್ರಿ ಗಸ್ತಿನಲ್ಲಿದ್ದ ಎಸ್‌ಐ ತಿಮ್ಮಪ್ಪ ನಾಯ್ಕ ಅವರು ರಾತ್ರಿಯೇ ಲಾರಿ ಚಾಲಕರಲ್ಲಿ ವಿಚಾರಿಸಿದ್ದು, ಅವರು ಈ ಸಂದರ್ಭ ದೂರು ದಾಖಲಿಸಲು ನಿರಾಕರಿಸಿದ್ದಾರೆ. ಅಲ್ಲದೇ, ಪೊಲೀಸರು ಇವರಿಗಾಗಿ ರಾತ್ರಿಯೇ ಕರ್ವೇಲು, ಪುತ್ತೂರು ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಗುರುವಾರ ಸಂಜೆಯಾಗುತ್ತಲೇ ಈ ಪ್ರಕರಣ ಬೇರೊಂದು ತಿರುವು ಪಡೆದು ಸಾರ್ವಜನಿಕರ ಬಾಯಲ್ಲಿ ದರೋಡೆ ವದಂತಿ ಹರಿದಾಡುತ್ತಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.