ಕೆದಂಬಾಡಿ ಶ್ರೀರಾಮ ಮಂದಿರದಲ್ಲಿ ನವರಾತ್ರಿ ಉತ್ಸವ

Puttur_Advt_NewsUnder_1
Puttur_Advt_NewsUnder_1

12ಪುತ್ತೂರು: ಶ್ರೀರಾಮ ಮಂದಿರ ಕೆದಂಬಾಡಿ ಶ್ರೀಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ಅ.1ರಿಂದ 11ರ ತನಕ 10 ದಿನಗಳ ನವರಾತ್ರಿ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಪ್ರಥಮ ದಿನ ನವರಾತ್ರಿ ಉತ್ಸವವನ್ನು ಮಂದಿರದ ಸೇವಾರ್ಥಿ ಬೋಳೋಡಿ ಚಂದ್ರಹಾಸ ರೈ ಉದ್ಘಾಟಿಸಿ ಶುಭಹಾರೈಸಿದರು. ಪ್ರತಿನಿತ್ಯ ಭಜನೆ, ಅನ್ನಸಂತರ್ಪಣೆ ಜರಗಿತು. ವಿವಿಧ ಭಜನಾ ಮಂಡಳಿಗಳಾದ ಶ್ರೀರಾಮ ಭಜನಾ ಮಂಡಳಿ ಕುಂಬ್ರ, ಶ್ರೀ ವೆಂಕಟ್ರ ಮಣ ಮಠ ಭಜನಾ ಮಂಡಳಿ ಮಡ್ಯಂಗಳ ಅರಿಯಡ್ಕ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಪುತ್ತೂರು, ಶ್ರೀ ದೇವತಾ ಭಜನಾ ಮಂಡಳಿ ಶ್ರೀ ದೇವಗಿರಿ ತಿಂಗಳಾಡಿ ಇವರಿಂದ ಭಜನೆ ಸೇವೆ ಜರಗಿತು. ಅ.5ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಶಲ್ಯ, ಸಾರಥ್ಯ ಯಕ್ಷಗಾನ ತಾಳಮದ್ದಳೆ ಜರಗಿತು. ಅ.10ರಂದು ಉಪ್ಪಿನಂಗಡಿ ಪ.ಪೂ. ಕಾಲೇಜು ಉಪನ್ಯಾಸಕಿ ಕಾವ್ಯ ಸುರೇಶ ಶೆಟ್ಟಿ ಇವರಿಂದ ‘ಸಕಾರಾತ್ಮಕ ಯೋಚನೆ’ ಬಗ್ಗೆ ಧಾರ್ಮಿಕ ಉಪನ್ಯಾಸ ಜರಗಿತು.

ಶ್ರೀರಾಮ ಮಂದಿರದ ಅಧ್ಯಕ್ಷ ಕಡಮಜಲು ಸುಧಾಸ್ ರೈಯವರು ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿ, ನಿತ್ಯ ಜೀವನದಲ್ಲಿ ನಾವು ಸಕಾರಾತ್ಮಕ ಯೋಚನೆ ಗಳನ್ನು ಬೆಳೆಸಿಕೊಂಡರೆ ನಮ್ಮ ಬದುಕು ಸ್ವರ್ಗ ಸಮಾನವಾಗುತ್ತದೆ. ನಕಾರಾತ್ಮಕ ಯೋಚನೆಗಳನ್ನು ಬೆಳೆಸಿ ಕೊಂಡರೆ ನರಕ ಸದೃಶವಾಗುತ್ತದೆ. ಆದುದರಿಂದ ಉತ್ತಮ ಯೋಚನೆಯಿಂದ ಉತ್ತಮ ಭವಿಷ್ಯದ ಕಡೆಗೆ ಗಮನಹರಿಸೋಣವೆಂದರು.

ಭಜನಾ ಮಂಡಳಿಯ ಅಧ್ಯಕ್ಷ ಕೋರಂಗ ವಿಜಯ ಕುಮಾರ್ ರೈ ಸ್ವಾಗತಿಸಿ ದರು. ಭಜನಾ ಮಂಡಳಿ ಕಾರ್ಯದರ್ಶಿ ಸಂತೋಷ್ ಕುಮಾರ್ ರೈ ಕೋರಂಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.