ಶಾರದಾ ಭಜನಾ ಮಂದಿರದಲ್ಲಿ ಕನ್ನಡ ಡಿಂಡಿಮ 327

Puttur_Advt_NewsUnder_1
Puttur_Advt_NewsUnder_1

sharadaಪುತ್ತೂರು: ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಧ್ವನಿ ಮುದ್ರಿತ ವಾದ್ಯ ಸಂಗೀತದೊಂದಿಗೆ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದಲ್ಲಿ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ 327ನೇ ಕನ್ನಡ ಭಾವಗಾನ, ನೃತ್ಯ ವೈಭವದೊಂದಿಗೆ ಅ.9ರಂದು ನಡೆಯಿತು.

ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆ. ಸಾಯಿರಾಂ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕಲಾಕೇಂದ್ರದ ಸಕ್ರಿಯ ಸದಸ್ಯರುಗಳಾದ ವಸಂತಿ ಆರ್. ಐತಾಳ್, ಜ್ಯೋತಿ ಜನಾರ್ದನ್ ಉಪಸ್ಥಿತ ರಿದ್ದರು.

ಡಿಂಡಿಮ ಹಿರಿಯ ಪ್ರತಿಭೆ ಕೃತಿಕಾ ಆರ್. ಐತಾಳ್, ನಿರೀಕ್ಷಾ ಕೆ.ಜೆ. ಪ್ರಾರ್ಥಿಸಿದರು. ಗಾಯಕ ಶಿವಾನಂದ ಶೆಣೈ ದರ್ಬೆ ಸ್ವಾಗತಿಸಿದರು. ಚಿದಾನಂದ ಕಾಮತ್ ಕಾಸರಗೋಡು ಪ್ರಸ್ತಾವನೆ ಗೈದರು. ಕೆ. ಜಯಂತ್ ಉರ್ಲಾಂಡಿ ವಂದಿಸಿದರು. ಬಳಿಕ ನಡೆದ ಡಿಂಡಿಮ ಪ್ರದರ್ಶನದಲ್ಲಿ ಶರಣ್ ಎಸ್. ಮುಕ್ವೆ, ಶ್ರುತಿರಂಜಿನಿ ಎಸ್. ಮುಕ್ವೆ, ಮನಿಷಾ ಕೊಡಿಪ್ಪಾಡಿ, ಸಮೃದ್ಧಿ ಶೆಣೈ ಕೆಮ್ಮಿಂಜೆ, ವೈಷ್ಣವಿ ಅನ್ಯಾಡಿ, ಅಶ್ವಿನಿ ಪೈ ಪರ್ಲಡ್ಕ, ಸಮೃದ್ಧಿ ಜೆ. ಶೆಟ್ಟಿ ಕೆಮ್ಮಾಯಿ, ಕೃತಿಕಾ, ನಿರೀಕ್ಷಾ, ಯಜ್ಞ, ನೂತನ್, ಸಾನ್ವಿಕಾ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.