ಉಪ್ಪಿನಂಗಡಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 6ನೇ ವರ್ಷಕ್ಕೆ ಪಾರ್ದಾಪಣೆ: ಅ.16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ತಾಹಿರಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರವರ್ತಿತ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ  ಉಪ್ಪಿನಂಗಡಿ ಶಾಖೆಯು ಅ.16ರಂದು 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಈ ಸಂದರ್ಭದಲ್ಲಿ  ಶಾಖೆಯಲ್ಲಿ ಗಣಹೋಮ ಮತ್ತು ಲಕ್ಷ್ಮೀಪೂಜೆ  ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 2002ರಲ್ಲಿ ಪ್ರಾರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ೨ನೇ ಶಾಖೆ ಉಪ್ಪಿನಂಗಡಿಯಲ್ಲಿ 2011 ಅಕ್ಟೋಬರ್ 16ರಂದು ಪ್ರಾರಂಭಗೊಂಡು ಸದಸ್ಯ ಬಾಂಧವರ ಮತ್ತು ಗ್ರಾಹಕ ಬಂಧುಗಳ ಸಹಕಾರದಿಂದ ಯಶಸ್ವಿಯಾಗಿ ೫ ವರ್ಷಗಳನ್ನು ಪೂರೈಸಿ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಹೆಚ್ಚು ವ್ಯವಹಾರ ಮತ್ತು ಲಾಭಾಂಶದಲ್ಲಿ ಪ್ರಶಸ್ತಿ ಪಡೆದ ಶಾಖೆ: ೨೦೧೫-೧೬ನೇ ಸಾಲಿನಲ್ಲಿ ಸುಮಾರು ೨೫ ಕೋಟಿಗಿಂತ ಹೆಚ್ಚು ವ್ಯವಹಾರ ಮಾಡಿ, ಸುಮಾರು ೧೪.೬೬ ಲಕ್ಷ ಲಾಭಾಂಶವನ್ನು ಪಡೆದಿರುತ್ತದೆ.ಅಲ್ಲದೆ  ೨೦೧೫-೧೬ನೇ ವಾರ್ಷಿಕ ಮಹಾಸಭೆಯಲ್ಲಿ ವ್ಯವಹಾರಕ್ಕಾಗಿ ಮತ್ತು ಲಾಭಾಂಶದ ಬಗ್ಗೆ  ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

 ಕಳೆದ ವಾರ್ಷಿಕ ಅವಧಿಯಲ್ಲಿ ಉಪ್ಪಿನಂಗಡಿ ಶಾಖೆಯು ೫ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದ್ದು, ಸುಮಾರು ೧೩೦೦ ಸದಸ್ಯರಿಗೆ ೪.೫೦ ಕೋಟಿ ಸಾಲ ನೀಡಲಾಗಿದೆ. ಸಾಲವನ್ನು ಕ್ಲಪ್ತ ಸಮಯದಲ್ಲಿ ಶೇ.೯೯.೬೨ ವಸೂಲಾತಿ ಮಾಡಲಾಗಿದೆ. ೨೦೧೫-೧೬ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಲೆಕ್ಕಪರಿಶೋಧಕರಿಂದ  ಪ್ರಥಮ ಬಾರಿಗೆ ‘ಎ’ ಗ್ರೇಡ್ ಪಡೆದಿರುತ್ತದೆ. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು ೧ ಕೋಟಿಗೂ ಮಿಕ್ಕಿ ಪಾಲು ಬಂಡವಾಳವಿದ್ದು, ೨೦೧೫-೧೬ನೇ ಸಾಲಿನಲ್ಲಿ ಶೇ.೧೫ ಡಿವಿಡೆಂಟ್ ನೀಡಲಾಗಿದೆ. ಪುತ್ತೂರು ಕೇಂದ್ರವಾಗಿಟ್ಟುಕೊಂಡು ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ ಶಾಖೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಉಪ್ಪಿನಂಗಡಿ ಶಾಖೆಯ ಉಸ್ತುವಾರಿ ಮತ್ತು ಉಪಾಧ್ಯಕ್ಷರಾಗಿ ರಾಮಕೃಷ್ಣ ಗೌಡ ಕರ್ಮಲ, ನಿರ್ದೇಶಕರಾಗಿ ಮೋಹನ್ ಗೌಡ ಇಡ್ಯಡ್ಕ, ಚಂದ್ರಶೇಖರ ಗೌಡ ಬಂತ್ರೋಡು, ಸುಬ್ಬಯ್ಯ ಗೌಡ  ಕುದ್ಕುಳಿ, ಲಿಂಗಪ್ಪ ಗೌಡ ಕಡೆಂಬ್ಯಾಳ್, ಮಂಜುನಾಥ ಎನ್.ಎಸ್, ಶ್ರೀಮತಿ ವಿಜಯ, ಸಾಂತಪ್ಪ ಗೌಡ  ಪಿಜಕ್ಕಳ, ನಾಗೇಶ್ ನಳಿಯಾರ್, ಶಿವರಾಮ ಗೌಡ  ಇಡ್ಯಪೆ, ಗೌರವ ಸಲಹೆಗಾರರಾಗಿ ಈಶ್ವರ ಗೌಡ ಪಜ್ಜಡ್ಕ, ಸೂಕ್ತ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುತ್ತಿರುವ ಸಲಹಾ ಸಮಿತಿ ಅಧ್ಯಕ್ಷರು ಮತ್ತು ನಿರ್ದೇಶಕರಾಗಿರುವ ವೆಂಕಟ್ರಮಣ ಗೌಡ ಕರೆಂಕಿ, ಸದಸ್ಯರಾಗಿ ಶಿವಣ್ಣ ಗೌಡ, ಬಿದಿರಾಡಿ, ಮನೋಹರ ಡಿ.ಬಿ., ವೆಂಕಪ್ಪ ಗೌಡ ಉಪ್ಪಿನಂಗಡಿ, ಸಂಜೀವ ಕುದ್ಲೂರು, ಶೀನಪ್ಪ  ಗೌಡ ವಳಕಡಮ, ರಮೇಶ್ ಬೇರಿಕೆ, ಶ್ರೀಮತಿ ರತ್ನಾವತಿ ಎನ್. ಗೌಡ, ಶ್ರೀಮತಿ ಅರುಣಾ ಉಪ್ಪಿನಂಗಡಿ, ಶಾಖೆಯ ಶಾಖಾ ಮೆನೇಜರ್ ಸುಧಾಕರ್ ಕೆ., ಸಿಬ್ಬಂದಿ ರೇವತಿ ಎಚ್., ಹರೀಶ್ ವೈ., ಸುರೇಶ್ ಕೆ. ಪಿಗ್ಮಿ ಸಂಗ್ರಾಹಕರಾದ  ಪದ್ಮನಾಭ ಪಿ., ಚಂದ್ರಶೇಖರ ವಿ, ಮೋನಪ್ಪ ಗೌಡ ಇವರು ಶಾಖೆಯ ಯಶಸ್ವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.