ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಂಜನಾ ರೈ, ರಕ್ಷಿತ್‌ಪ್ರಸಾದ್ ರಾಷ್ಟ್ರಮಟ್ಟಕ್ಕೆ

Puttur_Advt_NewsUnder_1
Puttur_Advt_NewsUnder_1

swimming_2

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಂಜನಾ ರೈ ಮತ್ತು ರಕ್ಷಿತ್‌ಪ್ರಸಾದ್ ರಾಷ್ಟ್ರ ಮಟ್ಟದ ಅಂತರ್ ವಿಶ್ವದ್ಯಾನಿಲಯ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದು, ಅ.24ರಿಂದ ಚಂಡೀಗಡದ ಪಂಜಾಬ್ ವಿಶ್ವದ್ಯಾನಿಲಯದ ಆಶ್ರಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಂತರ್ ವಿಶ್ವದ್ಯಾನಿಲಯ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಅಂಜನಾ ರೈ 200 ಮೀ ಬಟರ್ ಫ್ಲೈ ಸ್ಪರ್ಧೆಯಲ್ಲಿ ದ್ವಿತೀಯ, 400 ಮೀ ವೈಯಕ್ತಿಕ ಮೆಡ್ಲೆ ಮತ್ತು 200ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಸಂಪ್ಯದ ಪ್ರಸನ್ನ ಕುಮಾರ್ ರೈ ಮತ್ತು ತ್ರಿವೇಣಿ ರೈ ಯವರ ಪುತ್ರಿ.
ಪ್ರಥಮ ವರ್ಷದ ಸಿವಿಲ್ `ವಿಭಾಗದ ವಿದ್ಯಾರ್ಥಿ ರಕ್ಷಿತ್‌ಪ್ರಸಾದ್ 3ಮೀ ಸ್ಪ್ರಿಂಗ್‌ಬೋರ್ಡ್ ಡೈವಿಂಗ್‌ನಲ್ಲಿ ವಿಶ್ವದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಹಾಸನದ ತೀರ್ಥಪ್ರಸಾದ್ ಮತ್ತು ರಾಣಿ ಎಸ್ ದಂಪತಿಯ ಪುತ್ರ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.