ಶಿರಾಡಿ ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಅಕ್ರಮ ಮರ ಸಾಗಾಟ ಪತ್ತೆ; ಲಾರಿ, ಮರ ವಶ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಸಕಲೇಶಪುರ ತಾಲೂಕಿನ ಮಾರನಹಳ್ಳಿಯಿಂದ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಶಿರಾಡಿ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಪತ್ತೆಹಚ್ಚಿ ಲಾರಿ ಹಾಗೂ ಮರದ ದಿಮ್ಮಿ ವಶಪಡಿಸಿಕೊಂಡಿದ್ದಾರೆ.

ಸಕಲೇಶಪುರ ನಿವಾಸಿ ಹರೀಶ್ ಎಂಬವರಿಗೆ ಸೇರಿದ ಲಾರಿಯೊಂದರಲ್ಲಿ ಚಾಲಕ ಲತೇಶ್ ಹೆಗ್ಗದ್ದೆ ಎಂಬವರು ವಿವಿ‘ ಜಾತಿಯ ಕಾಡುಮರಗಳ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದನ್ನು ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಪತ್ತೆ ಹಚ್ಚಿರುವ ಅರಣ್ಯಾಧಿಕಾರಿಗಳ ತಂಡ ಮರದ ದಿಮ್ಮಿ ಹಾಗೂ ಲಾರಿ ವಶಪಡಿಸಿಕೊಂಡು ಮುಟ್ಟುಗೋಲು ಹಾಕಿದ್ದಾರೆ

ವಶಪಡಿಸಿಕೊಂಡಿರುವ ಮರದ ಸೊತ್ತಿನ ಮೌಲ್ಯ 1.5 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಶಿರಾಡಿ ಉಪವಲಯ ಅರಣ್ಯಾಧಿಕಾರಿಗಳಾದ ಜಯಕುಮಾರ್, ಪ್ರಶಾಂತ್, ಅರಣ್ಯ ರಕ್ಷಕರಾದ ಡಿ.ಬಿ.ಸುರೇಶ್, ನಿಂಗರಾಜ್, ಪ್ರತಾಪ್ ಹಾಗೂ ಜೀಪು ಚಾಲಕ ರವಿ ಪಾಲ್ಗೊಂಡಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.