Breaking News

ಕುಂತೂರುಪದವು ಹಾ.ಉ.ಸ.ಸಂಘದಿಂದ ಬಾಬು ಶೆಟ್ಟಿಯವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1

6ಪುತ್ತೂರು: ಅ.6ರಂದು ನಿಧನರಾದ ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಬಿ. ಬಾಬು ಶೆಟ್ಟಿಯವರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಮೌನ ಪ್ರಾರ್ಥನೆ ಮಾಡಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಂಘದ ಅಧ್ಯಕ್ಷ ವಿ.ಯಂ. ಥೋಮಸ್‌ರವರು ಮಾತನಾಡಿ, ಬಾಬು ಶೆಟ್ಟಿಯವರು ಸಂಘದ ಸಕ್ರಿಯ ಸದಸ್ಯರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಉತ್ತಮ ಕೃಷಿಕರೂ, ಹೈನುಗಾರರೂ ಆಗಿದ್ದರು. ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಜಾರಪ್ಪ ಗೌಡ, ನಿರ್ದೇಶಕರಾದ ರಾಯಿ ಅಬ್ರಹಾಂ, ಸೋಮಪ್ಪ ಗೌಡ ಎರ್ಮಾಳ, ಕೆ.ವಿ. ಗಣಪತಿ ಭಟ್, ಸೀತಮ್ಮ, ಅನಿ. ಅಬ್ರಹಾಂ, ಕಾರ್ಯದರ್ಶಿ ಮಂಜಪ್ಪ ಕೆ., ಹಾಲು ಪರೀಕ್ಷಕರಾದ ನೀಲಯ್ಯ ಗೌಡ ಮತ್ತು ವಿನು ಪದವು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.